ಕೃಷ್ಣಮೂರ್ತಿ ‘ಅಕ್ಕ’ ಖಜಾಂಚಿ, ಕಾರ್ಯದರ್ಶಿಯಾಗಿ ವಸಂತಿ ಗೌಡ

ಅಕ್ಕ ಪದಾಧಿಕಾರಿಗಳ 2003-05ನೇ ಸಾಲಿನ ಚುನಾವಣೆ ಫಲಿತಾಂಶ ಸಂಪೂರ್ಣ ಹೊರಬಿದ್ದಿದ್ದು , ಲಾಸ್ ಏಂಜಲೀಸ್‌ನ ಡಾ.ಎಂ.ಕೃಷ್ಣಮೂರ್ತಿ ಖಜಾಂಚಿಯಾಗಿ ಹಾಗೂ ಚಿಕಾಗೊ ವಿದ್ಯಾರಣ್ಯ ಕನ್ನಡ ಕೂಟದ ಅಧ್ಯಕ್ಷೆ ವಸಂತಿಗೌಡ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ಜುಲೈನಲ್ಲಿ 2003-2005ನೇ ಸಾಲಿನ ಅಕ್ಕ ಪದಾಧಿಕಾರಿಗಳ ಚುನಾವಣೆ ನಡೆದಿದ್ದು , ಕಾರ್ಯದರ್ಶಿ ಹಾಗೂ ಖಜಾಂಚಿಯ ಸ್ಥಾನಕ್ಕೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು . ಕಾರ್ಯದರ್ಶಿ ಸ್ಥಾನಕ್ಕೆ ವಸಂತಿ ಗೌಡ ಮತ್ತು ಸುಪ್ರಿಯಾ ದೇಸಾಯಿ (ನಾರ್ತ್ ಕೆರೊಲಿನಾ) ಹಾಗೂ ಖಜಾಂಚಿ ಸ್ಥಾನಕ್ಕೆ ಕೃಷ್ಣಮೂರ್ತಿ ಮತ್ತು ರಮೇಶ ಗೌಡ (ಡೆಟ್ರಾಯಿಟ್) ಸ್ಪರ್ಧಿಸಿದ್ದು , ಸಮಬಲ ಏರ್ಪಟ್ಟಿದ್ದರಿಂದ ಮರು ಮತದಾನ ನಡೆಸಬೇಕಾಯಿತು.
ಫಲಿತಾಂಶ ಇದೀಗ ಹೊರಬಿದ್ದಿದ್ದು , ಕೃಷ್ಣಮೂರ್ತಿ ಹಾಗೂ ವಸಂತಿಗೌಡ ಖಜಾಂಚಿ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಂಜನಪ್ಪ ದಟ್ಸ್‌ಕನ್ನಡ.ಕಾಂಗೆ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಆಯ್ಕೆಯಾಗ ಇತರ ಪದಾಧಿಕಾರಿಗಳ ಘೋಷಣೆ ಈ ಮುನ್ನವೇ ನಡೆದಿತ್ತು . ಅವರುಗಳೆಂದರೆ :
ಡಾ. ಕುದೂರು ಮುರಳಿ - ಅಧ್ಯಕ್ಷ
ಡಾ. ರೇಣುಕ ರಾಮಪ್ಪ , ಪ್ರಭುದೇವ್ ಮತ್ತು ಶರಣಬಸವರಾಜುರ್ - ಉಪಾಧ್ಯಕ್ಷರು
ಹರೀಶ್ ಹಿರೇಮಠ್ ಹಾಗೂ ಶಾಂತರಾಜ್ - ಜಂಟಿ ಕಾರ್ಯದರ್ಶಿ
ಶಾಮಯ್ಯ ಶೆಟ್ಟಿ ಹಾಗೂ ವಿಜಯ ಭಟ್ -ಜಂಟಿ ಖಜಾಂಚಿ
(ಇನ್ಫೋ ವಾರ್ತೆ)












Click it and Unblock the Notifications