Get Updates
Get notified of breaking news, exclusive insights, and must-see stories!

ಸಾಹಿತ್ಯೋತ್ಸವದ ಸ‘ರಸ’ ಘಳಿಗೆಗಳು...

  • ವರದಿ: ಶ್ರೀವತ್ಸ ಜೋಶಿ ; ವಾಷಿಂಗ್‌ಟನ್‌ ಡಿಸಿ.
    [email protected]
Sahithya gOshti in Pictures

  • ‘ಸಮಯಪಾಲನೆ’ ಎನ್ನುವುದರ ವ್ಯಾಖ್ಯೆ ಮತ್ತು ಬೆಲೆಯನ್ನು ಅರಿಯಬೇಕೆಂದವರು ಈ ಕಾರ್ಯಕ್ರಮ ಹೇಗೆ ನಡೆಯಿತೆಂದು ನೋಡಬೇಕಿತ್ತು. ದಿನವಿಡೀ ಇಷ್ಟೊಂದು ಕಾರ್ಯಕ್ರಮಗಳಿದ್ದರೂ ಯಾವುದೊಂದೂ ಆರಂಭವಾಗುವುದರಲ್ಲಿ ಒಂದು ನಿಮಿಷವೂ ತಡವಾಗಲಿಲ್ಲ, ನಿಗದಿತ ಅವಧಿಗಿಂತ ಒಂದು ನಿಮಿಷವೂ ವಿಸ್ತರಿಸಲಿಲ್ಲ !
  • ವೇದಿಕೆಯ ಮೇಲೆ ಸಾಹಿತ್ಯಪ್ರಸ್ತುತಿ ಪಡಿಸಿದವರೆಲ್ಲ , ಕಾರ್ಯಾಗಾರಗಳನ್ನು ನಡೆಸಿದವರೆಲ್ಲ ನಿನ್ನೆಯ ಕಾರ್ಯಕ್ರಮದಿಂದಾಗಿ ‘ಅಷ್ಟಾವಧಾನ ಕಲೆ’ಯ ಎಂಟನೇ ಒಂದಂಶವನ್ನು ಕರಗತಮಾಡಿಕೊಂಡರೆನ್ನಲಡ್ಡಿಯಿಲ್ಲ. ಏಕೆಂದರೆ ನಿಗದಿತ ಸಮಯಸೂಚಕ ಜಯರಾಮ ಉಡುಪರ ‘ಘಂಟಾನಾದ’ದತ್ತ ಗಮನವಿಟ್ಟೇ ಮಾತನಾಡಬೇಕಾದ ಪರಿಸ್ಥಿತಿ ಪ್ರತಿಯಾಬ್ಬರಿಗೂ!
  • ಒಪ್ಪೊತ್ತು ಉಂಡವ ಯೋಗಿ, ಎರಡ್ಹೊತ್ತು ಉಂಡವ ಭೋಗಿ, ಮೂರ್ಹೊತ್ತು ಉಂಡವ ರೋಗಿ, ನಾಲ್ಕು ಸಲ ಊಟ ಮಾಡಿದವನನ್ನು ಹೊತ್ಕೊಂಡ್ಹೋಗಿ... ಅಂತ ಒಂದು ನಾಣ್ನುಡಿ ಇದೆ. ಸಾಹಿತ್ಯೋತ್ಸವದ ಇಡೀದಿನದ (ಮೂರು ಹೊತ್ತುಗಳ) ಊಟೋಪಚಾರವನ್ನು ಶುಚಿರುಚಿಯಾಗಿ ಹಿತಮಿತವಾಗಿ ಪೂರೈಕೆ ಮಾಡಿದ್ದು ‘ಯೋಗಿ’ ಕೇಟರರ್ಸ್‌ ! ಅತ್ಯಂತ ಅಚ್ಚುಕಟ್ಟಿನ ವ್ಯವಸ್ಥೆಯ ಹಿಂದೆ ಫಿಲಡೆಲ್ಫಿಯಾ ಪ್ರದೇಶದ ಕೆಲ ಕನ್ನಡಿಗ ಸ್ವಯಂಸೇವಕರ ನಿಷ್ಠೆಯೂ ಇತ್ತು.
  • ಸಾಹಿತ್ಯೋತ್ಸವ ನಡೆದ ವಿಲನೋವಾ ವಿಶ್ವವಿದ್ಯಾಲಯದ ಸೈಂಟ್‌ ಮೇರಿ ಸಭಾಂಗಣಕ್ಕೆ ಡ್ರೆೃವಿಂಗ್‌ ಡೈರಕ್ಷನ್ಸ್‌ ಸರಿಯಾಗಿ ಇಲ್ಲದ್ದರಿಂದ ದೂರದೂರುಗಳಿಂದ ಆಗಮಿಸಿದ ಹೆಚ್ಚಿನವರು ಸ್ವಲ್ಪ ಹೊತ್ತು ‘ವಿಲನೋವಾ ಸೈಟ್‌ ಸೀಯಿಂಗ್‌’ ನಂತರವೇ ಸಮಾರಂಭದ ಸ್ಥಳಕ್ಕೆ ಬಂದು ತಲುಪಿದ ಉದಾಹರಣೆಗಳು ಅನೇಕ (ಈ ವರದಿಗಾರನೂ ಸೇರಿದಂತೆ!)
  • ಐಯೋವಾದಿಂದ ಬಂದಿದ್ದ ಕೃಷ್ಣಶಾಸ್ತ್ರಿಗಳು ಅಮೆರಿಕನ್ನಡಿಗ ಲೇಖಕರ ಪುಸ್ತಕಗಳ ಮಳಿಗೆಯನ್ನಿಟ್ಟು ರಿಯಾಯತಿ ದರದಲ್ಲಿ ಕನ್ನಡ ಪುಸ್ತಕಗಳೊಂದಷ್ಟನ್ನು ಮಾರುವುದರಲ್ಲಿ ಯಶಸ್ವಿಯಾದರು. ಉತ್ಸವದಲ್ಲಿ ಬಿಡುಗಡೆಯಾದ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಪುಸ್ತಕದ ಪ್ರತಿ, ಆಕರ್ಷಕ ಕೈಚೀಲದಲ್ಲಿ ‘ರಿಜಿಸ್ಟ್ರೇಷನ್‌ ಕಿಟ್‌’ ನಲ್ಲೇ ಕುಟುಂಬಕ್ಕೊಂದರಂತೆ ಕೊಡಲ್ಪಟ್ಟಿತ್ತು.
  • Very focussed audience for the entire proceedings. ಹಾಗಾಗಿ ಜನರಲ್‌ ಲೋಕಾಭಿರಾಮ ಹರಟೆಗಳ ಗುಂಪುಗಳು (ಸೀರೆ, ಒಡವೆ, ಲೇ-ಆಫ್ಸ್‌, ಇಕಾನಮಿ, ಸ್ಟಾಕ್ಸ್‌, ಟೆರರಿಸ್ಟ್ಸ್‌, ಎಲೆಕ್ಷನ್ಸ್‌, ಇಂಡಿಯಾ ವಿಸಿಟ್‌... ಎಟ್ಸೆಟ್ರಾ) ಕಂಡುಬರುತ್ತಲೇ ಇರಲಿಲ್ಲ . ಒಂದು ನಮೂನೆಯಲ್ಲಿ ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರು ಮಾತ್ರ ಸೇರಿದಂತೆ ವಿಲನೋವಾದಲ್ಲಿ ಸಾಹಿತ್ಯಾಸಕ್ತರು ಮಾತ್ರ! ‘ಜಾತ್ರೆ’ಯ ಗೌಜಿ ಗದ್ದಲವಿಲ್ಲ.
  • ಸಾಹಿತ್ಯ ಮತ್ತು ಲಲಿತಕಲೆಗೇ ಮೀಸಲಾದ ವಾಷಿಂಗ್‌ಟನ್‌ ಡಿಸಿ ಪ್ರಾಂತದ ಸಂಸ್ಥೆ ‘ಭೂಮಿಕಾ’ ವಸಂತ ಸಾಹಿತ್ಯೋತ್ಸವದಲ್ಲಿ ಏಕೆ ಕಾಣಿಸಿಕೊಳ್ಳಲಿಲ್ಲ !? ಎಂಬುದು ಕೆಲ ಸಾಹಿತ್ಯಾಸಕ್ತರ ಕುತೂಹಲ. ಭೂಮಿಕಾ ಇಲ್ಲದಿದ್ದರೇನಂತೆ, ರಾಜಧಾನಿಯ ಹೆಮ್ಮೆಯ ಕನ್ನಡಸಂಘ ‘ಕಾವೇರಿ’ ಸಾಹಿತ್ಯೋತ್ಸವದ ವಿವಿಧ ಮಜಲುಗಳಲ್ಲಿ ಸಕ್ರಿಯ ಪಾತ್ರವಹಿಸಿತ್ತು !
  • ಸಾಹಿತ್ಯದ ಅಂಥಾ ಗಂಧಗಾಳಿಯೇನೂ ಇಲ್ಲದ, ಕೇವಲ ‘ಸ್ಪೌಸ್‌ಗೆ ಕಂಪ್ನಿ ಕೊಡೋಕೊಸ್ಕರ ಮಾತ್ರ ಭಾಗವಹಿಸಿದ್ದ’ವರಿಗೂ ಒಂಚೂರೂ ಬೋರ್‌ ಎನಿಸದಂತೆ ಕಾಲಕ್ಷೇಪವಾದದ್ದು ಈ ಸಾಹಿತ್ಯೋತ್ಸವದ ಇನ್ನೊಂದು ಅಗ್ಗಳಿಕೆ!
  • ಒಟ್ಟಿನಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಮೈತುಂಬಿಸಿಕೊಂಡು ಅದರಲ್ಲಿ ಮುಳುಗಿ ತೇಲುವ ಕಾರ್ಯಕ್ರಮ’ ಎಂಬ ಆಯೋಜಕರ ಮಾತುಗಳು ನೂರಕ್ಕೆ ನೂರು ಪಾಲು ಸತ್ಯದವು. ಇಂಥದೊಂದು ಉತ್ಸವ ವರ್ಷಕ್ಕೊಮ್ಮೆ ಒಂದು ದಿನ ಸ್ವಾಗತಾರ್ಹ ಮತ್ತು ಅಪೇಕ್ಷಣೀಯ.

ಪೂರಕ ಓದಿಗೆ-
ವಸಂತನ ರುಜುವಿನಲ್ಲಿ ಸಾಹಿತ್ಯೋತ್ಸವ ಫಿಲಡೆಲ್ಫಿಯಾದಲ್ಲಿ ಕನ್ನಡದ ವೈಭವ !
ಕುವೆಂಪು ಕೃತಿಗೆ ಪ್ರಭುಶಂಕರರ ಸಾಕ್ಷಿ
ವಸಂತ ಸಾಹಿತ್ಯೋತ್ಸವದ ಚಿತ್ರಗಳು


ಮುಖಪುಟ / ಎನ್‌ಆರ್‌ಐ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+