• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ವಾರದ ಹುಡುಗಿ ... !!

By Staff
|
  • ರವಿ ಶಂಕರ್‌, ಯುಕೆ.

itsravishankar@yahoo.com

Ravishankar, UKನನ್ನ ಗೆಳೆಯ ತಿಪ್ಪ ..!! ಸಕ್ಕರೆ ಕಾರ್ಖಾನೆ ಇರುವ ಊರಿನವನಾದ್ದರಿಂದ ತುಂಬಾ ಸ್ವೀಟ್‌ ಹುಡುಗ. ದಾವಣಗೆರೆಯ ಬಿ.ಡಿ.ಟಿ. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವೀಧರನಾಗಿ ಕೆಲವೇ ವರ್ಷಗಳಲ್ಲಿ ಕಷ್ಟ ಪಟ್ಟು ಮೇಲೆ ಬಂದವ. ಇತ್ತೀಚೆಗೆ ಎಷ್ಟು ಬೆಳೆದಿದ್ದ ಅಂದರೆ interview ಕೊಡಲು ವಿಮಾನದಲ್ಲಿ ಓಡಾಡುತ್ತಿದ್ದ. ಆದರೂ ಹುಡುಗ ತುಂಬ ಸಿಂಪಲ್‌. ಹೈದರಾಬಾದಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೊಗದಲ್ಲಿದ್ದ ನಮ್ಮ ತಿಪ್ಪ ಸಾಫ್ಟ್‌ವೇರ್‌ ಇಂಜಿನಿಯರ್‌ ಆದರೂ, ಸ್ವಲ್ಪ ಒರಟೇ ಅನ್ನಬಹುದು. ಹೀಗೆ ಹಾಯಾಗಿ ಇದ್ದ ನಮ್ಮ ತಿಪ್ಪನಿಗೆ ಯಾರೊ ವೈರಿಗಳು ಮದುವೆಯಾಗಲು ಹೇಳಿಬಿಟ್ಟರು. ತಗೊ ಶುರುವಾಯಿತು ತಿಪ್ಪನ ‘ಹುಡುಗಿ ಹುಡುಕುವ ಕಾರ್ಯಕ್ರಮ’. ಪ್ರತಿ ವಾರ ಒಂದು ಹುಡುಗಿ ನೋಡಬೇಕೆಂದು ನಿರ್ಧರಿಸಿ, ವೀಕೆಂಡಿನಲ್ಲಿ ಹೊರಟು ತವರೂರಾದ ದಾವಣಗೆರೆ ಕಡೆ ಪ್ರಯಾಣ ಬೆಳೆಸಿದ.

ಅದೇನು ನನ್ನ ಅದೃಷ್ಟವೊ ದುರಾದೃಷ್ಟವೊ, ತಿಪ್ಪ ನಮ್ಮ ಫ್ರೆಂಡ್ಸ್‌ ಗ್ರೂಪ್ನಲ್ಲಿ ನನ್ನ ಜೊತೆ ಸ್ವಲ್ಪ ಜಾಸ್ತೀನೆ ಕ್ಲೋಸಾಗಿದ್ದ. ಹೊರಡುವ ಮುನ್ನ ನನಗೆ ಇ-ಮೆಲ್‌ ಕಳಿಸಿದ, ‘ಭಾನುವಾರ ಹುಡುಗಿ ನೋಡ್ಬೇಕು, So ನೀನು ನನ್ನ ಜೊತೆ ಬರಬೇಕು’ ಅಂತ. ನಮ್ಮ ತಿಪ್ಪ ಕರೆಯುವುದು ಹೆಚ್ಚೋ, ನಾನು ಹೋಗುವುದು ಹೆಚ್ಚೊ ಅಂದುಕೊಂಡು ನಾನು ನನ್ನ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಅವನ ಜೊತೆಗೂಡಲು ಸಮ್ಮತಿಸಿದೆ. ಮೇಲಾಗಿ ನನ್ನ ಊರೂ ದಾವಣಗೆರೆ ಆಗಿದ್ದರಿಂದ, ವೀಕೆಂಡ್‌ ವಿಸಿಟ್‌ ಮಾಮೂಲಿಯಾಗಿತ್ತು.

ಭಾನುವಾರ ಬೆಳಿಗ್ಗೆ ನಮ್ಮ ತಿಪ್ಪನವರಿಂದ ಕರೆ ಬಂದಿತು, ‘ಈ ವಾರದ ಹುಡುಗಿ ಹೊಸದುರ್ಗದಲ್ಲಿ ಇದ್ದಾಳೆ’ ಅಂತ. 10.30ಕ್ಕೆ ಸರಿಯಾಗಿ ಹಳೆ ಬಸ್ಟಾಂಡಿನ ಬಳಿ ಬರಲು ಹೇಳಿದ. ಅಷ್ತರಲ್ಲಿ ನಮ್ಮ ಇನ್ನೊಬ್ಬ ಗೆಳೆಯ ‘ಸ್ಪಿನ್‌’ (pet name)ಫೋನ್‌ ಮಾಡಿ - ‘ಲೇ ನೀನು ಶೇವ್‌-ಗೀವ್‌ ಮಾಡಿ ನೀಟಾಗಿ ಹೋಗಬೇಡ’ ಅಂದ. ಇದೊಳ್ಳೆ ಫಜೀತಿ ಆಯಿತಲ್ಲ ಅಂದುಕೊಂಡು, ಶೇವ್‌ ಏನೊ ಮಾಡಿದೆ, ಆದರೆ ಅಲ್ಲಲ್ಲಿ ಗ್ಯಾಪ್‌ ಬಿಟ್ಟೆ, ಒಮ್ಮೆ ನೋಡಿದವರು ಮತ್ತೆ ನೋಡುವ ಧೈರ್ಯ ಮಾಡಬಾರದೆಂದು. ಸೋ, ಸರಿಯಾಗಿ 10.30ಕ್ಕೆ ನಾನು ಹಳೇ ಬಸ್ಟಾಂಡ್‌ ಬಳಿ ಹೋದೆ. 15 ನಿಮಿಷಗಳ ನಂತರ, ತಿಪ್ಸ್‌ ಅವನ ಸಹೋದರ ಮತ್ತು ಮಾವನ ಜೊತೆಗೂಡಿ ಹಾಜರಾದ. ಆ ದಿನ ನಮ್ಮ ತಿಪ್ಪನ ಮುಖದಲ್ಲಿ ‘ಕಳೆ’ ಅನ್ನುವುದು ತುಂಬಿ ತುಳುಕುತಿತ್ತು. ನನ್ನ ನೋಡಿದವನೆ ತಿಪ್ಪ ಖುಷಿಯಾದ, ಯಾಕೆಂತ ಕೇಳಿದರೆ ‘ಶೇವ್‌ ಸಕತ್ತಾಗಿ ಮಾಡಿದ್ದೀಯ’ ಅಂದ. ಬಡಪಾಯಿ ನಾನು ‘ನೀವು ಚೆನ್ನಾಗಿರ್ಬೇಕು ಸರ್‌’ ಅಂತ ಮಾಮೂಲಿ ಡೈಲಾಗ್‌ ಹೊಡೆದು ಸುಮ್ಮನಾದೆ. ಕೊನೆಗೆ ನನ್ನ ಇನ್‌-ಶರ್ಟ್‌ ಸಹಾ ಔಟ್‌-ಶರ್ಟ್‌ ಮಾಡಿದೆ. ತಿಪ್ಸ್‌ ಎಲ್ಲಾ ಬಸ್ಸುಗಳನ್ನು ವಿಚಾರಿಸುತ್ತಾ - ಎಷ್ಟೊತ್ತಿಗೆ ಡಿಪಾರ್ಚರ್‌ ? ಎಷ್ಟೊತ್ತಿಗೆ ರೀಚಾಗುತ್ತೆ ? ನಡುವೆ ಎಷ್ಟು ಸ್ಟಾಪ್‌ ಕೊಡ್ತೀರ ? what other facilities you provide inside ?... etc ಕೊನೆಗೆ ಒಂದು ಬಸ್‌ ಸೆಲೆಕ್ಟ್‌ ಮಾಡಿದ - ‘ಮಹಾದೇವ ಟ್ರಾವೆಲ್ಸ್‌’. ಸರಿಯಾಗಿ 11.15 ಕ್ಕೆ ನಮ್ಮ ಪ್ರಯಾಣ ಶುರುವಾಯಿತು.

ನಮ್ಮ ನಿಜವಾದ ಪ್ರಯಾಣ ಶುರುವಾಗಿದ್ದು NH-4 ಇಂದ ಆನಗೋಡು ಬಳಿ ಬಾಡ ಕ್ರಾಸ್‌ ತಿರುಗಿದ ನಂತರ. ಆ ರೋಡೊ, ಬಣ್ಣಿಸಲಸಾಧ್ಯ. ದಾರಿಯುದ್ದಕ್ಕೂ ನಮ್ಮ ಕಷ್ಟ-ಸುಖಗಳ exchange ಮಾಡಿಕೊಂಡೆವು. ಆ ಬಸ್ಸಿನಲ್ಲೊ ಒಳ್ಳೆ ಹೋಮ್‌-ಥಿಯೇಟರ್‌ ಇತ್ತು (ಸೋನಿ ಕಂಪನಿ ಅನ್ಸುತ್ತೆ). ಒಳ್ಳೊಳ್ಳೆ ಹಿಂದಿ/ಕನ್ನಡ ಸಾಂಗ್ಸ್‌ (with Jankar beats) ಹಾಕಿದ್ದ. ಕೆಲವು ಕನ್ನಡ ಸಾಂಗ್ಸ್‌ ಗಳಿಗಂತೂ ನಮ್ಮ ತಿಪ್ಪ ಮೈಮರೆತು ಬಿಟ್ಟಿದ್ದ. Once more.! ಅನ್ನುವಷ್ಟರಲ್ಲಿ ನಾನು ತಡೆಯುತ್ತಿದ್ದೆ. ನೆಕ್ಸ್ಟ್‌ ಇನ್ನೂ ಒಳ್ಳೆ ಸಾಂಗ್ಸ್‌ ಬರುತ್ತೆ ಅಂತ ಸಮಾಧಾನ ಮಾಡುತ್ತಿದ್ದೆ. ಎಂದೂ ಕೇಳದ ಖಂಡರಿಯದ ಊರುಗಳನ್ನೆಲ್ಲಾ ನೋಡುತ್ತ, ಗಿಡ-ಮರಗಳ, ಬೆಟ್ಟ-ಗುಡ್ಡಗಳ ನಡುವೆ ಸಾಗುತ್ತಾ ಕೊನೆಗೆ ಹೊಳಲ್ಕೆರೆ ತಲುಪಿದೆವು. ದಾವಣಗೆರೆಯಲ್ಲಿ ಬಸ್‌ ಹತ್ತುವಾಗ ಏಜೆಂಟ್‌, ‘ಇದು ಎಕ್ಸ್‌ಪ್ರೆಸ್‌ ಗಾಡಿ ಸಾರ್‌, ಕೇವಲ ನಾಲ್ಕೇ ಸ್ಟಾಪ್‌ ಕೊಡೋದು’ ಅಂತ ಹೇಳಿದ್ದ. So ಪ್ರತಿ ಸ್ಟಾಪಿನಲ್ಲೂ ತಿಪ್ಪ ‘ಆ-ಒಂದು, ಆ-ಎರಡು, ಆ-ಮೂರು’ ಅಂತ ಎಣಿಸುತ್ತಿದ್ದ. ನಾವು ಹೊಳಲ್ಕೆರೆ ರೀಚ್‌ ಆಗುವಷ್ಟರಲ್ಲಿ ಕೌಂಟ್‌ 5 ಆಗಿತ್ತು. ಸೋ, ತಿಪ್ಪ ನೆಕ್ಸ್ಟ್‌ ಸ್ಟಾಪ್‌ ಹೊಸದುರ್ಗ ಅಂದುಕೊಂಡು, ಕಿಟಕಿಯಿಂದ ಆಚೆ ಕಣ್ಣಾಡಿಸಿದ. ಅಲ್ಲೊಂದು ನಾಮಫಲಕ - ‘ಹೊಸದುರ್ಗ - 40 ಕಿ.ಮಿ.’. ಆ ಬೋರ್ಡ್‌ ನೋಡಿದ ತಕ್ಷಣ ನಮ್ಮ ತಿಪ್ಪನ ಮೈಯಲ್ಲಿ ಕರೆಂಟ್‌ ಪಾಸ್‌ ಆಯಿತೋ ಏನೋ, ಫುಲ್‌ ರಿಚಾರ್ಜ್‌ ಆಗಿಬಿಟ್ಟ. ಅವನ ಎದೆ ಬಡಿತ ಜೋರಾಯಿತು, ಮತ್ತೆ full enthu.

ಆದರೆ ತಿಪ್ಪನ ಗೆಸ್‌ ಮಿಸ್‌ ಹೊಡಿತು, ಹೊಳಲ್ಕೆರೆಯಿಂದ ಹೊಸದುರ್ಗದ ಮಧ್ಯೆ 15-20 ಸ್ಟಾಪ್ಸ್‌ ಕೊಟ್ಟುಬಿಟ್ಟ, ಪ್ರತಿ ಕ್ರಾಸಿಗು ಒಂದು ಸ್ಟಾಪ್‌. ತಿಪ್ಪನ ಪಿತ್ತ ಇಷ್ಟೊತ್ತಿಗೆ ನೆತ್ತಿಗೇರಿತ್ತು. ಪ್ರೈವೇಟ್‌ ಬಸ್ಸುಗಳಲ್ಲಿ ಸಾಕಷ್ಟು ಓಡಾಡಿದ್ದ ನನಗೆ ಬಸ್‌ ಏಜೆಂಟುಗಳ ಡೈಲಾಗ್ಸ್‌ ಅರ್ಥ ಆಗುತ್ತಿತ್ತು. ಆದರೆ ನಮ್ಮ ತಿಪ್ಪ Flightಗಳಲ್ಲಿ ಓಡಾಡಿದವ, ನಾಲ್ಕು ಸ್ಟಾಪ್ಸ್‌ ಅಂದರೆ ನಾಲ್ಕೇ ಸ್ಟಾಪ್ಸ್‌ ಅಂದುಕೊಂಡಿದ್ದ. ನಡುವೆ ಒಂದು ಸ್ಟಾಪ್‌ ಬಂದಾಗ, ಯಾರೋ ಪಕ್ಕದಲ್ಲಿ ಕೂತವನೊಬ್ಬ, ‘ಸಾರ್‌ ಇದು ಯಾವ ಊರು?’ ಅಂತ ಕೇಳಿದ.. ತಗಳಪ ತಿಪ್ಪನಿಗೆ ಕ್ವಾಪ ತಡೆಯಲಾಗಲಿಲ್ಲ, ಅಷ್ಟೇ ಸಿಟ್ಟಿನಿಂದ ‘ನನಗೇನಯ್ಯ ಗೊತ್ತು, ನಾನೇನು ಈ ದಾರೀಲಿ ದಿನ ಓಡಾಡ್ತೀನ ?’ ಅಂದಾಗ, ಅವನ್ಯಾಕೆ ಮುಚ್ಚಿಕೊಂಡು ಕೂತಿರಬಾರ್ದು. ಇದನ್ನೆಲ್ಲಾ ಸೈಲೆಂಟಾಗಿ ಗಮನಿಸುತ್ತಿದ್ದ ನನಗೆ ತಲೆಯಲ್ಲಿ ಈ ನಾಲ್ಕು ಲೈನ್‌ ಗಳು click ಆದವು -

ತಿಪ್ಪನು ಹೊರಟಿದ್ದ ಬಸ್ಸಿನಲ್ಲಿ ..

ಏಜೆಂಟ್‌ ಕೊಟ್ಟ ಸ್ಟಾಪ್‌ ಪ್ರತಿ ಕ್ರಾಸಿನಲ್ಲಿ ..

ಪಕ್ಕದವ ಕೇಳಿದ ವಿನಯದಲಿ ..

ತಿಪ್ಪ ಉತ್ತರಿಸಿದ ಬಲು ಸಿಟ್ಟಿನಲ್ಲಿ ..

ಕಾರಣವದಕೆ ಅರಿತವ ನಾನೊಬ್ಬನೇ ಅಲ್ಲಿ ..!!

ಅಷ್ಟರಲ್ಲಿ ಒಂದು ಆಂಟಿಗಳ ಗುಂಪು ಸೀಟಿಗಾಗಿ ಬಸ್‌ ಏಜೆಂಟ್‌ ಜೊತೆ ಜಗಳ ಮಾಡುತ್ತಿದ್ದರು. ನಮ್ಮ ತಿಪ್ಪ ಅವರಿಗೆ ಫುಲ್‌ ಸಪೋರ್ಟ್‌ ಮಾಡಿ, ಕೆಲವು ಡೈಲಾಗ್ಸ್‌ ಹೊಡೆದು, ಹೆಂಗಳೆಯರಿಂದ ‘ಭೇಷ್‌’ ಅನ್ನಿಸಿಕೊಂಡ. ಕೊನೆಗೆ ಎಲ್ಲರೂ ಹೊಸದುರ್ಗ ತಲುಪಿದೆವು. ಬಸ್‌ ಸ್ಟಾಂಡಿನಲ್ಲಿ ಆಗಲೇ ಹುಡುಗಿಯ ತಂದೆ ರಿಸೀವ್‌ ಮಾಡಲು ಹಾಜರಿದ್ದರು. ಅದ್ದೂರಿ ಸ್ವಾಗತ, ನಂತರ ಆಟೋದಲ್ಲಿ ಮನೆಗೆ ಹೋದೆವು.

ಹೋದ ಕೂಡಲೆ fresh ಆದ ಬಳಿಕ, ಟ್ರೈಯಲ್‌-ಷೊ ಶುರುವಾಯಿತು - ಹುಡುಗಿ ಡ್ರಿಂಕ್ಸ್‌ (ಕೂಲ್‌) ತರುವುದರೊಂದಿಗೆ. ತಗೋ ನಮ್ಮ ತಿಪ್ಪ ಶುರು ಹಚ್ಚಿಕೊಂಡ, ಅದೇನೋ ಅಂತಾರಲ್ಲ ಹಾ . .! Love at First Sight.. ಕೆಲವು ನಿಮಿಷಗಳ ನಂತರ ಪಕ್ಕದಲ್ಲಿದ್ದ ನಾನು ತಿವಿದಾಗಲೆ ಅವನಿಗೆ ಗೊತ್ತಾಗಿದ್ದು ಇದು picture talkies ಅಲ್ಲ Live Show ಅಂತ. ಉಭಯ ಕುಶಲೋಪರಿಗಳ ನಂತರ ಹುಡುಗಿಯ ತಾಯಿ ಊಟಕ್ಕೆ ಅಣಿ ಮಾಡಿದರು. ಊಟ ಶುರುವಾಯಿತು ಜಹಾಂಗೀರ್‌ ಮತ್ತು ಕಡುಬುಗಳೊಂದಿಗೆ, ತಿಪ್ಪ ನನ್ನನ್ನು ಕೂಡಿಸಿದ್ದ ಟೇಬಲ್‌ ಮೂಲೆಯಲ್ಲಿ - ಯಾರಿಗೂ ಸಿಗದ ಜಾಗದಲ್ಲಿ. ಹುಡುಗಿ ಬಂದಳು ತುಪ್ಪದೊಂದಿಗೆ, ಪಾಪ ಪಾಂಡು ಅಲ್ಲ..ಲ್ಲ ಪಾಪ ಹುಡುಗಿಗೆ ಹೊಸ ಅನುಭವ ಅನ್ಸುತ್ತೆ, ತುಂಬ ಟೆನ್ಷನ್‌ನಲ್ಲಿ ಇದ್ದಳು. ದೋಸೆ ಎಂಚಿನ ಮೇಲೆ ಹಿಟ್ಟು ಸುರಿದ ಹಾಗೆ ತಿಪ್ಪನ ತಟ್ಟೆಯಲ್ಲಿ ಹುಡುಗಿ ತುಪ್ಪ ಸುರಿದಾಗ, ತಿಪ್ಪ ಸ್ವಲ್ಪ ವಿಚಲಿತನಾದ. ಕೂಡಲೆ ನಾನವನನ್ನ ಅದುಮಿದೆ, it heppens.. ಅಂದಾಗ, ತಡಕೊಂಡ. ನೆಕ್ಸ್ಟ್‌ ಐಟಮ್‌ ಬಂದಾಗ, alert modeನಲ್ಲಿದ್ದ ತಿಪ್ಪ Take it easy, make it slowly.. ಅಂದಾಗ, ಹುಡುಗಿಗೆ ಸ್ವಲ್ಪ ಧೈರ್ಯ ಬಂತು. ನನಗೋ ತಿಪ್ಪ ಮೀಡಿಯೇಟರ್‌ ಆಗಿ ಎಲ್ಲಾ ಐಟಮ್ಸ್‌ ಪಾಸ್‌ ಮಾಡಿದ. ಹುಡುಗಿಗೆ ನಾನು ಸ್ವಾಮಿ (ಐನರ್‌) ಅಂತ ಹೇಗೆ ತಿಳಿದಿತ್ತೋ ಗೊತ್ತಿಲ್ಲಾ, ತಟ್ಟೆ ತುಂಬ ಅನ್ನ ಹಾಕಿ, ತಬಲಾ ಹೀರೊ ಜಾಕಿರ್‌ ಹುಸೇನ್‌ ಧಾಟಿಯಲ್ಲಿ ‘ಟಣ್‌ ಟಣಾ ಟಣ್‌ ..’ ಅಂತ ಪಾತ್ರೆ ಬಾರಿಸಿದಳು. ಬೇರೆಯವರೆಲ್ಲಾ ನಿಧಾನವಾಗಿ ಊಟ ಮಾಡುತ್ತಿರುವಾಗ, ತಿಪ್ಪ ಮುಂದಾಲೋಚನೆ ಮಾಡಿ ಜೋರಾಗಿ ‘ವೋಓಓಓಬ್ಬಾಆಆಆ’ ಅಂದುಬಿಟ್ಟ. So ಉಳಿದವರೆಲ್ಲಾ ಅರ್ಥ ಮಾಡಿಕೊಂಡು, ಅಷ್ಟಕ್ಕೆ ಸಾಕು ಸಾಕು ಅಂತ ಊಟ ಮುಗಿಸಿದರು.

ಊಟದ ನಂತರ ಎಲ್ಲಾ ಹೊರಗಡೆ nature ಸವಿಯಲು ಬಂದೆವು.. ಮನೆಯ ಹಿಂದೆಯೇ ಗುಡ್ಡ ಇತ್ತು, ಅದನ್ನು ನೋಡಿದ ತಿಪ್ಪ ಮತ್ತೆ ಯಾವುದೋ ಕನ್ನಡ ಮೂವಿ ಸೀನ್‌ ನೆನೆಸಿಕೊಂಡು ಮುಗುಳ್ನಕ್ಕ (‘ಎಡಕಲ್ಲು ಗುಡ್ಡದ ಮೇಲೆ’ ಅನ್ಸುತ್ತೆ). ಅಲ್ಲಿಯವರೆಗೂ ತಿಪ್ಪ ಹುಡುಗಿಯಿಂದ ಕಂಪ್ಲೀಟಾಗಿ ಇಂಪ್ರೆಸ್‌ ಆಗಿರಲಿಲ್ಲ . ಸೋ, ಹುಡುಗೀನ ಇನ್ನೊಂದು ಸ್ಟೈಲ್‌ನಲ್ಲಿ (with different costumes) ಬರಲು ಹೇಳೋಣ ಅಂತ ನನ್ನ ಕೇಳಿದ. ನಾನು ‘ನಮ್ಮ ಜೊತೆ ಹೆಂಗಸರಾರು ಬಂದಿಲ್ಲ, ಸೋ ಹಾಗೆ ಕೇಳುವುದು ಸರಿಯಲ್ಲ’ ಅಂದು ಸಮಾಧಾನಿಸಿದೆ. ತಿಪ್ಪ ಅಷ್ಟಕ್ಕೆ ಸುಮ್ಮನಾಗಲಿಲ್ಲ . ಹೋಗ್ಲಿ ಹುಡುಗಿ ಜೊತೆ ಇನ್ನೊಮ್ಮೆ ಮಾತನಾಡಬೇಕು ಅಂದ. ಅವನ ಮನದಾಳದ ಭಾವನೆಯನ್ನರಿತ ನಾನು, ಎಲ್ಲರೂ ಇದ್ದರೆ ಹುಡುಗಿಗೆ ಟೆನ್ಷನ್‌ ಆಗುತ್ತೆ ಅಂತ ಹೇಳಿ, ಉಳಿದವರನ್ನ ಹಾಗೆ 10 ನಿಮಿಷ ಹೊರಗೆ ಅಡ್ಡಾಡಲು ಕಳಿಸಿದೆವು.

ನಾನು (for HR level interview) ಹಾಗೂ ತಿಪ್ಪ ಮತ್ತೆ ಮನೆ ಒಳಗೆ ಹೊಕ್ಕೆವು. ಈಗ ಒಂದು ರೀತಿ ಕ್ಲೈಮ್ಯಾಕ್ಸ್‌ ಸೀನ್‌ - ತಿಪ್ಪನಿಗೆ Best of luck ..! ಹೇಳಿದೆ, ಅಷ್ಟರಲ್ಲಿ ಮತ್ತೆ ಬಂದಳು ಹುಡುಗಿ ಹಣ್ಣಿನ ಬಟ್ಟಲುಗಳೊಂದಿಗೆ. ನಾನು ಇನ್ನೇನು ಪ್ರಶ್ನೆ ಕೇಳಬೇಕೆನ್ನುವಷ್ಟರಲ್ಲಿ, ಅವರಪ್ಪ excuse me ಸಹಾ ಹೇಳದೆ, ಸೀನ್‌ ನಲ್ಲಿ ಎಂಟರ್‌ ಆಗಿ, ರೋಲ್‌ ಟೇಕ್‌-ಒವರ್‌ ಮಾಡಿಕೊಂಡರು. ನಮ್ಮ ತಿಪ್ಪ ಸುಮ್ಮನಿರುವುದು ಬಿಟ್ಟು, ಫಾರ್ಮಲಿಟಿಗೋಸ್ಕರ ಅವರ profession ಬಗ್ಗೆ ಕೇಳಿದ. ತಗಳಪ್ಪ ಅವರಿಗೆ ಅದೆಲ್ಲಿಂದ ಮೂಡ್‌ ಬಂತೊ ಗೊತ್ತಿಲ್ಲಾ, 1972 ಶುರು ಮಾಡಿಯೇಬಿಟ್ಟರು ‘....’ ಅಂತ. ಹುಡುಗಿ ಜೊತೆ ಮಾತಾಡಲು ಕುಳಿತಿದ್ದ ನಮ್ಮ ಪರಿಸ್ಥಿತಿ ಹೇಗಾಗಿರಬೇಡ . . ಅವರ ಕಂಪ್ಲೀಟ್‌ ಸರ್ವೀಸ್‌ ವಿವರಿಸಿ, ಎಷ್ಟೊಂದು ಡೀಟೇಲ್ಸ್‌ ಕೊಟ್ಟರೆಂದರೆ ಅವರು ಈಗ ಡ್ರಾ ಮಾಡುತ್ತಿದ್ದ ಸಂಬಳ ‘ಹದಿನಾರು ಸಾವಿರದ ಒಂದುನೂರ ಎರಡು ಮಾತ್ರ. ಪಾಪ ತುಂಬಾ ಓಪನ್‌-ಹಾರ್ಟೆಡ್‌ ಮನುಷ್ಯ. ಇಷ್ಟಾಗುವಷ್ಟರಲ್ಲಿ ಉಳಿದವರೆಲ್ಲಾ ಎಂಟರ್‌ ಆದರು. ಸೋ, ತಿಪ್ಪನ ಕೊನೆಯ ಆಸೆ ಆಸೆಯಾಗಿಯೆ ಉಳಿಯಿತು. ಎಲ್ಲರೂ ಹೊರಡಲು ರೆಡಿ ಆದೆವು, ತಿಪ್ಸ್‌ ಬೇಸರದಿಂದ ಎಲ್ಲರಿಗೂ ‘ಬಾಯ್‌’ (Good bye) ಹೇಳಿದ.

ಬಸ್ಟ್ಯಾಂಡಿನಲ್ಲಿ ದಾವಣಗೆರೆ ಬಸ್‌ ಹತ್ತಿದೆವು, ಹುಡುಗಿಯ ತಂದೆ ಟಿಕೆಟ್‌ ತೆಗೆದುಕೊಳ್ಳಲು ಬಂದಾಗ, ನಮ್ಮ ತಿಪ್ಪ ‘ಸರ್‌ ಈಗಲೇ ಬೇಡ, ಆಮೇಲೆ to and fro ಕೊಡುವಿರಂತೆ ಅಂದಾಗ, ಪಾಪ ಒಲ್ಲದ ಮನಸ್ಸಿನಿಂದ ಸರಿ ಅಂದರು. ಬಸ್ಸಿನಲ್ಲಿ ತಿಪ್ಪನ ಭಾವನೆಗಳನ್ನು ಕೆದಕುವ ಧೈರ್ಯ ನನಗಾಗಲಿಲ್ಲ . I need some time to decide ಅಂದ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ನೂರಿನ್ನೂರು ಖರ್ಚು ಮಾಡಿ ಬಾಡಿ ಮಸಾಜ್‌ ಮಾಡಿಸ್ಕೋಬೇಕು ಅಂತ ಇದ್ದ ನನಗೆ, ಹೊಸದುರ್ಗ ಬಸ್ಸಿನಲ್ಲಿ ನಮ್ಮ ತಿಪ್ಪ ಫ್ರೀ ಆಗಿ ಕಂಪ್ಲೀಟ್‌ ಬಾಡಿ ಮಸಾಜ್‌ ಮಾಡಿಸಿದ್ದ. Hats off Tips . . !

ವಿ. ಸೂ. : For any HR level interviews, (for nice package, flexible notice period, other benefits..etc) feel free to contact me. Both onsite and offshore offers are available.

ಇದನ್ನೂ ಓದಿ-

ವಿದೇಶೀ ವರ !

ಪರದೇಶಿಯ ಪ್ರೇಮ ಪ್ರಸಂಗ !

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more