ಕೆ.ಸಿ.ಎ. ಅಂಗಳದಲ್ಲಿ ಯುಗಾದಿ ಬೆಳದಿಂಗಳು

K.C.A. is preparing to celebrate Ugadi in great colourಎಂದಿನಂತೆ ಈ ಬಾರಿಯೂ ಯುಗಾದಿಗೆ ಕೆ. ಸಿ. ಎ. ಜೋರಾಗಿ ಅಣಿಯಾಗಿದೆ. ಏಪ್ರಿಲ್‌ 19ನೇ ತಾರೀಕು ಯಥಾ ಪ್ರಕಾರ ಮಾಲಿಬು ದೇಗುಲದಲ್ಲಿ ಎಳ್ಳು- ಬೆಲ್ಲ ಮೆಲ್ಲಲು ರೆಡಿಯಾಗಿ. ದಿನ ಇನ್ನೂ ದೂರವಿದೆ ಎಂದು ತಣ್ಣಗೆ ಕೂರಬೇಡಿ. ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಯುಗಾದಿ ಆಚರಣೆಗೆ ನಾನು ಬರ್ತೀನಿ ಅಂತ ಕೆ. ಸಿ. ಎ. ಅಧ್ಯಕ್ಷ ಬಿ.ಎನ್‌.ನಾಗರಾಜ್‌ ಅವರಿಗೆ ಇ- ಪತ್ರ ಕಳಿಸಿ ಅಥವಾ 714---441--1420 ನಂಬರಿಗೆ ಫೋನ್‌ ಮಾಡಿ. ಏಪ್ರಿಲ್‌ 15ರೊಳಗೆ ಈ ಕೆಲಸವನ್ನು ಮಾಡಿ ಮುಗಿಸಬೇಕಾದ್ದು ಕಡ್ಡಾಯ.

ಅವತ್ತು ಮಧ್ಯಾಹ್ನ 2 ಗಂಟೆಗೆ ಶುರುವಾಗುವ ಕಾರ್ಯಕ್ರಮದ ಆಯ್ದ ಸೆಳಕುಗಳು ಇಂತಿವೆ-

  • ಸ್ಥಳೀಯ ಪ್ರತಿಭೆಗಳಿಂದ ಸಮೂಹ ಗಾಯನ.
  • ಉದರ ನಿಮಿತ್ತ ರುಚಿಕಟ್ಟು ಭೋಜನವೂ ಉಂಟು. ಇದಕ್ಕೆ ನೀವು ತೆರಬೇಕಾದ ನಾಮಿನಲ್‌ ಹಣ ಕೇವಲ 2 ಡಾಲರ್‌.
  • ವಾರ್ಷಿಕ ನಿಯತಕಾಲಿಕ ‘ಸಂಗಮ’ವನ್ನು ಇದೇ ದಿನ ಬಿಡುಗಡೆ ಮಾಡಲಾಗುವುದು. ನಿಮಗೂ ಒಂದು ಪ್ರತಿ ಲಭ್ಯ.
ಸಂಗೀತೋತ್ಸವದಲ್ಲಿ ನೀವೂ ಭಾಗವಹಿಸಬೇಕಾ? ಹಾಗಾದರೆ, ಸಾಂಸ್ಕೃತಿಕ ಸಂಯೋಜಕ ಸೋಮಶೇಖರ್‌ ಅವರನ್ನು ಭೆಟ್ಟಿಯಾಗಿ. ಜನರಲ್‌ ಬಾಡಿ ಮೀಟಿಂಗ್‌ ಬಗ್ಗೆ ಮಾತಾಡುವುದಾದರೆ ಪದ್ಮನಾಭನ್‌ ತ್ಯಾಮಗೊಂಡ್ಲು ಅವರನ್ನು ಸಂಪರ್ಕಿಸಿ.

ಅಂದಹಾಗೆ, ನಿಮ್ಮ ಸದಸ್ಯತ್ವವನ್ನು ನವೀಕರಿಸಿಕೊಳ್ಳುವ ಸಮಯ ಬಂದಿದೆ. ಕೆ. ಸಿ. ಎ.ಗೆ ಚೆಕ್ಕನ್ನು ಕಳುಹಿಸಿ. ಕೆ. ಸಿ. ಎ. ವಿಳಾಸ ಇಂತಿದೆ-
KCA
Dr. Nagana Goud
PO Box 11016
Torrance, CA 90510

ಬೇವು- ಬೆಲ್ಲ , ಎಳ್ಳು- ಬೆಲ್ಲ ಮೆಲ್ಲಲು ನೀವೂ ಎಲ್ಲರೊಳಗೊಂದಾಗುವಿರಲ್ಲವೇ?

(ಇನ್ಫೋ ವಾರ್ತೆ)

Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+