ನಮ್ಮಮ್ಮನ ಹುಟ್ಟುಹಬ್ಬಕ್ಕೆ ಮೈಕ್ರೋ ಓವನ್ ಉಡುಗೊರೆ

ಹೇಗಿದ್ದೀಯಾ ? ಐವತ್ತೇಳು ತುಂಬಿ ಐವತ್ತೆಂಟಕ್ಕೆ ಬಿತ್ತಲ್ಲವಾ! ಇನ್ನೆರಡು ವರ್ಷಕ್ಕೆ ಷಷ್ಟ್ಯಬ್ಧಿ . ನನ್ನಮ್ಮನಿಗೆ ಎಷ್ಟೊಂದು ವಯಸ್ಸಾಯಿತು. ಅರವತ್ತರ ಹೊಸಿತಿಲಿನಲ್ಲೂ ಉಕ್ಕುವ ನಿನ್ನ ಹುಮ್ಮಸ್ಸು ನೆನಪಾದಾಗಲೆಲ್ಲ ನನಗೆ ನಾಚಿಕೆಯಾಗುತ್ತೆ . ಮೂವತ್ತಕ್ಕೇ ನಾನು ಮುದುಕಿಯಂತಾಗಿದ್ದೇನೆ, ಯಾರಿಗೂ ಹೇಳಬೇಡ ಮತ್ತೆ !
ಅಪ್ಪ ಹೇಗಿದ್ದಾರೆ ? ನಿನಗೆ ನಾನು ನನಗೆ ನೀನು ಎನ್ನುವಂತೆ ಒಬ್ಬರನೊಬ್ಬರು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಿ ತಾನೆ ? ಇದೇನು ಕರ್ಮ ನೋಡು- ನೀವು ಅಲ್ಲಿ , ನಾನಿಲ್ಲಿ .
ನಿನ್ನ ಹುಟ್ಟುಹಬ್ಬದ ದಿನವಂತೂ ನನಗೆ ನಿನ್ನದೇ ನೆನಪು. ಕಳೆದ ತಿಂಗಳೇ ನಿನ್ನ ಹುಟ್ಟುಹಬ್ಬದ ದಿನವನ್ನು ಕ್ಯಾಲೆಂಡರ್‌ನಲ್ಲಿ ಮಾರ್ಕ್ ಮಾಡಿಟ್ಟಿದ್ದೆ . ಇವತ್ತು ಬೆಳಗ್ಗೆ ನಿನ್ನ ನೆನೆದು ತಿರುಪತಿ ತಿಮ್ಮಪ್ಪನ ಫೋಟೊ ಮುಂದೆ ತುಪ್ಪದ ದೀಪ ಹಚ್ಚಿದೆ. ಅಮ್ಮ , ನಿನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ನಿನ್ನ ಜೊತೆಯಿರಬೇಕಿತ್ತು . ನಿನ್ನ ಸಂತೋಷ, ಪುಳಕ, ಮುಜುಗರಗಳನ್ನು ಕಣ್ತುಂಬಿಕೊಳ್ಳಬೇಕಿತ್ತು . ಏನು ಮಾಡುವುದು ?
ನಿನಗೊಂದು ಹುಟ್ಟುಹಬ್ಬದ ಉಡುಗೊರೆ ಕಳಿಸಿದ್ದೇನೆ. ಈ ಉಡುಗೊರೆ ಆಯ್ಕೆ ಮಾಡಲು ಎಷ್ಟು ತಲೆ ಕೆಡಿಸಿಕೊಂಡೆ ಗೊತ್ತಾ ? ಕೊನೆಯದಾಗಿ ಇಷ್ಟವಾದದ್ದು ಈ ಮೈಕ್ರೋ ಓವನ್. ಚೆನ್ನಾಗಿದೆಯಾ ?
ಪ್ರತಿದಿನ ಅಡುಗೆ ಕೆಲಸಕ್ಕೆ ಮೈಕ್ರೋ ಓವನ್ ತುಂಬಾ ಅನುಕೂಲ. ಮೈಕ್ರೋ ಓವನ್ ಜೊತೆ ಅಡುಗೆ ಮಾಡುವುದೆಂದರೆ ಏನಂದುಕೊಂಡಿದ್ದಿ - ಅದು ಅಮ್ಮ ಮಗಳ ಅಪ್ಪುಗೆಯಷ್ಟು ಹಿತ. ನಾನೇನು ಸುಳ್ಳು ಹೇಳುತ್ತಿಲ್ಲ , ಬಳಸುತ್ತಾ ಬಳಸುತ್ತಾ ನಿನಗೆ ಗೊತ್ತಾಗುತ್ತೆ ! ಇಷ್ಟು ವರ್ಷಗಳ ಕಾಲ ಮೈಕ್ರೋ ಓವನ್ ಇಲ್ಲದೆ ನೀನು ಅಡುಗೆ ಮಾಡುತ್ತಿದ್ದುದನ್ನು ನೆನಪಿಸಿಕೊಂಡರೆ... ಓ ದೇವರೇ !!
ಮತ್ತೆ ಬರೆಯುವೆ.
ನಿನ್ನ ಪ್ರೀತಿಯ ಮಗಳು
- ಪುಷ್ಪ ,
ಎಲ್‌ಸಲ್ವೊಡಾರ್
ಜುಲೈ 8, 2003
(ದಟ್ಸ್‌ಕನ್ನಡ ಮೂಲಕ ತನ್ನ ಅಮ್ಮನಿಗೆ ಪ್ರೀತಿಯ ಉಡುಗೊರೆ ಕಳಿಸಿ, ಸಂಪಾದಕರಿಗೆ ಓದುಗರೊಬ್ಬರು ಬರೆದ ಪತ್ರವಿದು. ಪತ್ರವನ್ನು ಮೈಕ್ರೋವೇವ್ ಸಮೇತ ಪುಷ್ಪ ಅವರ ತಾಯಿಗೆ ಕಳಿಸಲಾಗಿದೆ. ಪುಷ್ಪ ಅವರ ತಾಯಿ ಸುಧಾ ಮಾರ್ಕಾಂಡೇಯ, ಮಲ್ಲೇಶ್ವರಂ, ಬೆಂಗಳೂರು.)
ನಿಮ್ಮ ಅಮ್ಮನಿಗೆ ಅಡುಗೆ ಭಾರ ಕಡಿಮೆ ಮಾಡಲು ಬಯಸುವಿರಾ ? ಉಡುಗೊರೆಯಾಗಿ ಮೈಕ್ರೋ ಓವನ್ ಕಳಿಸಿ. ಸೀಮಿತ ಅವಧಿಯವರೆಗೆ ಭಾರೀ ಇಳುವರಿ ಮಾರಾಟ ! ಇಂಡಿಯಾ ಇನ್ಫೋ ಮಾರಾಟ ಮಳಿಗೆಯಲ್ಲೀಗ ಮೈಕ್ರೋ ಓವನ್‌ಗಳದ್ದೇ ಪಾರುಪತ್ಯ. ಇನ್ನು ತಡ ಮಾಡುವುದರಲ್ಲಿ ಅರ್ಥವಿಲ್ಲ , ಬನ್ನಿ ನಮ್ಮ ಮಾರುಕಟ್ಟೆಗೆ ..
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications