ಉತ್ತರ ಅಮೆರಿಕಾದ ಸಾಹಿತ್ಯ ಭಂಡಾರದಲ್ಲಿ ಭೈರಪ್ಪನವರ ‘ಮಂದ್ರ’

Bhyrappas new novel Mandra hits the shelves in USಕನ್ನಡದ ಜನಪ್ರಿಯ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪನವರ ಮತ್ತೊಂದು ಕಾದಂಬರಿ ಪ್ರಕಟವಾಗಿದೆ. ಅಂದರೆ ಕನ್ನಡ ಸಾರಸ್ವತ ಲೋಕದಲ್ಲಿ ಒಂದಿಷ್ಟು ಓದು, ಚರ್ಚೆ, ಸಂವಾದಕ್ಕೆ ಗ್ರಾಸ ದೊರಕಿತೆಂದೇ ಅರ್ಥ. ಅಂದಹಾಗೆ, ಇತ್ತೀಚೆಗೆ ಬಿಡುಗಡೆಯಾದ ಭೈರಪ್ಪನವರ ಹೊಸ ಕಾದಂಬರಿಯ ಹೆಸರು ‘ಮಂದ್ರ’ .

ಬದುಕಿನ ಸೂಕ್ಷ್ಮ ಎಳೆಗಳನ್ನು ವಿಶ್ಲೇಷಿಸುವಲ್ಲಿ ಎತ್ತಿದ ಕೈ ಎನಿಸಿದ ಭೈರಪ್ಪ ಕಥೆಗಾಗಿ ಬರೆಯುವವರಲ್ಲ . ವಿಷಯ ಮನಸ್ಸನ್ನು ಕಾಡಬೇಕು, ಗಟ್ಟಿಯಾಗಬೇಕು ; ಚಿಂತನ ಮಂಥನದ ಮೂಸೆಯಲ್ಲಿ ಮೂಡಿದ ನವನೀತ ಬರಹ ರೂಪಕ್ಕಿಳಿಯುತ್ತದೆ.

‘ಮಂದ್ರ’ದ ಅಂತರ್ಜಲ ಸಂಗೀತ. ಕಾದಂಬರಿ ರಚನೆಗಾಗಿ ಭೈರಪ್ಪ ಸಂಗೀತದ ಕುರಿತು ಅಧ್ಯಯನ ನಡೆಸಿದ್ದಾರೆ. ಸಂಗೀತಗಾರರೊಂದಿಗೆ ಸಂವಾದ ನಡೆಸಿದ್ದಾರೆ. ಪ್ರಾಚೀನ ಗ್ರಂಥಗಳ ಪುಟಗಳಲ್ಲಿ ಮುಖ ಹುದುಗಿಸಿದ್ದಾರೆ. ಸುಬ್ಬಣ್ಣ, ಹಂಸಗೀತೆ, ಸಂಧ್ಯಾರಾಗ ಕಾದಂಬರಿಗಳ ನಂತರ ಕನ್ನಡದಲ್ಲಿ ಬಂದಿರುವ ಸಂಗೀತ ಪ್ರಧಾನ ಕಾದಂಬರಿ- ‘ಮಂದ್ರ’.

ಭಾರತ ಹಾಗೂ ಅಮೆರಿಕಾದಲ್ಲಿ ‘ಮಂದ್ರ’ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಉತ್ತರ ಅಮೆರಿಕಾದ ಸಾಹಿತ್ಯ ಭಂಡಾರ (ಎಸ್‌ಬಿಎನ್‌ಎ) ದ ಮೂಲಕ ಅಮೆರಿಕನ್ನಡಿಗರು ‘ಮಂದ್ರ’ ಕಾದಂಬರಿಯನ್ನು ಪಡೆಯಬಹುದು. ‘ಮಂದ್ರ’ ಅಷ್ಟೇ ಅಲ್ಲ , ಕನ್ನಡದ ಇತರ ಕೃತಿಗಳಿಗೂ ಎಸ್‌ಬಿಎನ್‌ಎ ಸಂಪರ್ಕಿಸಬಹುದು. ಹೆಚ್ಚಿನ ವಿವರಗಳಿಗೆ ಕ್ಲಿಕ್ಕಿಸಿ- http://sahityabna.homestead.com
(ಇನ್ಫೋ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+