ನೆನಪುಗಳ ಮಾತು ಮಧುರ..
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಗೆ ಸಂತೋಷದ ಸುದ್ದಿ.
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ‘ಅಲ್ಯುಮಿನಿ ಡೇ ಹಾಗೂ ವಿದ್ಯಾರ್ಥಿ ವೇತನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ’ ಡಿಸೆಂಬರ್ 27 ರಂದು ನಡೆಯಲಿದೆ. ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಮೆರಿಕನ್ ಘಟಕ ಹಾಗೂ ಬೆಂಗಳೂರು ಘಟಕಗಳು ಈ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಂಡಿವೆ.
ಡಿಸೆಂಬರ್ 27ರ ಶುಕ್ರವಾರ ಸಂಜೆ ಆರು ಗಂಟೆಗೆ ಕಾರ್ಯಕ್ರಮ ಶುರುವಾಗುತ್ತದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕುಲಪತಿ ಬಲವೀರ ರೆಡ್ಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಾತ್ರಿ ಊಟದೊಂದಿಗೆ ಕಾರ್ಯಕ್ರಮ ಮುಗಿಯುತ್ತದೆ. ನಿಮ್ಮ ಬರುವಿಕೆಯನ್ನು ಮುಂಚಿತವಾಗಿ ತಿಳಿಸಬೇಕು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
[email protected] (G.Srinivasa),
[email protected] (Zia Ulla Mecci).
ಸಂಘದ ಪೂರ್ವಾಪರ :
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಹುಟ್ಟಿಕೊಂಡದ್ದು 1996ರಲ್ಲಿ . ಈ ಕಾಲೇಜಿನಲ್ಲಿ ಓದಿ ವಿದೇಶಕ್ಕೆ ಹಾರಿದವರು ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‌ನಲ್ಲಿ ಒಂದು ಸಂಘ ಕಟ್ಟಿಕೊಂಡರು. ಇಲ್ಲೇ ನೆಲೆಸಿರುವವರು ಬೆಂಗಳೂರಿನಲ್ಲೊಂದು ಸಂಘ ಕಟ್ಟಿದರು.
ಜೀವನದಲ್ಲಿ ಏಳ್ಗೆ ಕಾಣಲು ತಳಹದಿ ಹಾಕಿಕೊಟ್ಟ ಕಾಲೇಜಿಗೆ, ಕಾಲೇಜಿನಲ್ಲಿರುವ ಶಿಕ್ಷಕ ವರ್ಗಕ್ಕೆ ಕೃತಜ್ಞತೆ ಸಲ್ಲಿಸುವುದು ಹಳೇ ವಿದ್ಯಾರ್ಥಿಗಳ ಸಂಘದ ಉದ್ದೇಶ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಅಲ್ಯುಮಿನಿ ಡೇ ಆಚರಿಸಲಾಗುತ್ತದೆ.
ಆರು ವರ್ಷದ ಹಿಂದೆ ಏಳು ಮಂದಿ ಸದಸ್ಯರೊಂದಿಗೆ ಆರಂಭವಾದ ಸಂಘದಲ್ಲಿ ಈಗ 91 ಮಂದಿ ಸದಸ್ಯರಿದ್ದಾರೆ. ಮೆರಿಟ್‌ಕಮ್ ಮೀನ್ಸ್ ಎಂಬ ವಿದ್ಯಾರ್ಥಿವೇತನ ಪಡೆಯುತ್ತಿರುವವರ ಸಂಖ್ಯೆ 5ರಿಂದ 20ಕ್ಕೇರಿದೆ. ಹತ್ತು ಮಂದಿ ಆಜೀವ ಸದಸ್ಯರು. ಸಂಘದ ವತಿಯಿಂದ ಆಗಾಗ ನಡೆಯುವ ಉಪನ್ಯಾಸ ಕಾರ್ಯಕ್ರಮಗಳು, ಪ್ರತಿ ವರ್ಷ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಎಎಎ(ಬಿಎಂಎಸ್ ಅಮೆರಿಕನ್ ಅಲ್ಯುಮಿನಿ ಅಸೋಸಿಯೇಷನ್) ಅಲ್ಯುಮಿನಿ ಸಭೆಗಳು... ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಸಂಘದ ಚಟುವಟಿಕೆಗಳನ್ನು ಜೀವಂತವಾಗಿರಿಸಿದೆ.
ಪ್ರಸ್ತುತ ಅಲ್ಯುಮಿನಿ ಸಂಘವನ್ನು ಬೆಂಬಲಿಸುತ್ತಿರುವವರು : ಕೆ. ಎನ್. ಮೂರ್ತಿ, ವಿ. ಎಂ. ಕುಮಾರ ಸ್ವಾಮಿ, ಎಂ. ಕೃಷ್ಣ ಮೂರ್ತಿ, ಬಿ. ಎನ್. ನಾಗರಾಜ್, ಸಿ. ಎಂ. ಭೀಮ್‌ಸಿಂಹ, ವಿಜಯ ಚಂದ್ರ, ಬಿ. ಎ. ನಂಜಪ್ಪ ಮತ್ತಿತರರರು. ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು ಈ ಸಂಘದ ಸದಸ್ಯರಾಗಬಹುದು. ಸದಸ್ಯತ್ವ ಶುಲ್ಕ 25 ಡಾಲರ್.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications