ಆಸ್ಟಿನ್‌ ಕನ್ನಡ ಸಂಘದಲ್ಲಿ ಭದ್ರಗಿರಿಸರ್ವೋತ್ತಮದಾಸರ ಹರಿಕಥೆ

Bhadragiri Sarvottama Dasಆಸ್ಟಿನ್‌ ಕನ್ನಡ ಸಂಘ (ಎಕೆಎಸ್‌) ಜುಲೈ 20 ರಂದು ಸಂತ ಭದ್ರಗಿರಿ ಸರ್ವೋತ್ತಮ ದಾಸರಿಂದ ಹರಿಕಥಾ ಪ್ರಸಂಗ ಏರ್ಪಡಿಸಿದೆ. ಜುಲೈ 20 ರ ಸಂಜೆ 4 ರಿಂದ 6 ಗಂಟೆವರೆಗೆ ಚಿನ್ಮಯ ಮಿಷನ್‌ ವಾಟಿಕಾದಲ್ಲಿ ಹರಿಕಥೆ ಕಾರ್ಯಕ್ರಮ ನಡೆಯಲಿದೆ.
ಹರಿಕಥಾ ಪ್ರಸಂಗ- ರಾಮಾಯಣ.

ಪ್ರತಿ ಕುಟುಂಬಕ್ಕೆ 5 ಡಾಲರ್‌ ಪ್ರವೇಶ ಶುಲ್ಕವಿದೆ. ಚಿನ್ಮಯ ಮಿಷನ್‌ ವಾಟಿಕಾ ತಲುಪಲು ದಾರಿಗಾಗಿ ಸಂಪರ್ಕಿಸಿ- http://www.angelfire.com/tx2/chinmaya/

ಹರಿಕಥಾ ಕಾರ್ಯಕ್ರಮಕ್ಕೆ 75 ಜನರಿಗೆ ಮಾತ್ರ ಅವಕಾಶ. ಆ ಕಾರಣ ಟಿಕೇಟುಗಳನ್ನು ಆದಷ್ಟು ಬೇಗ ಕಾದಿರಿಸಿಕೊಳ್ಳಿ. ಕಾರ್ಯಕ್ರಮದ ಬಗೆಗಿನ ವಿವರಗಳು ಹಾಗೂ ಟಿಕೇಟುಗಳಿಗಾಗಿ ಸಂಪರ್ಕಿಸಿ: ಕೋಲಾರ ಬಾಲಸುಬ್ರಹ್ಮಣ್ಯಂ- [email protected] ಅಥವಾ ಜಯಪ್ರಭಾ ಜಗದೀಶ್‌- [email protected]

ಹರಿಕಥೆ, ಹಾಗೆಂದರೇನು ?
ಹೆಸರೇ ತಿಳಿಸುವಂತೆ ಹರಿಕಥೆ ಎಂಬುದು ಹರಿಯ ಕಥೆ ಅಂದರೆ ವಿಷ್ಣುಕಥೆ. ಆದರೆ, ಕಾಲ ವಾಹನಿಯಲ್ಲಿ ಈ ಕಥಾ ಪ್ರವಚನದಲ್ಲಿ ಶಿವನೂ ಸೇರಿಕೊಂಡಿರುವುದರಿಂದ ಹರಿಕಥೆ- ಹರಕಥೆಯೂ ಆಗಿದೆ. ಹಿಂದೂ ಧರ್ಮದ ತಿರುಳು, ಸಿದ್ಧಾಂತ, ಮೌಲ್ಯಗಳನ್ನು ಜನ ಸಾಮಾನ್ಯರಿಗೆ ಅತ್ಯಂತ ಸರಳ ರೀತಿಯಲ್ಲಿ ಮುಟ್ಟಿಸುವುದು, ಮನದಟ್ಟಾಗಿಸುವುದು ಹರಿಕಥೆಯ ಉದ್ದೇಶ. ಆ ಕಾರಣದಿಂದಾಗಿಯೇ ಹರಿಕಥೆಯಲ್ಲಿ ಕಥೆ ಮಾತ್ರವಲ್ಲದೆ ಹಾಡು, ಸಂಗೀತ, ನೃತ್ಯಕ್ಕೂ ಪ್ರಾಧಾನ್ಯತೆಯುಂಟು.

ಹರಿಕಥೆ ನಮ್ಮ ಸಂಸ್ಕೃತಿಯ ಸಮೃದ್ಧತೆಯ ಒಂದಂಗ. ಅಬಾಲ ವೃದ್ಧರಾದಿಯಾಗಿ ಎಲ್ಲ ವಯೋಮಾನದವರಿಗೂ ಹರಿಕಥೆ ಎಂದರೆ ಅಚ್ಚುಮೆಚ್ಚು . ಇತ್ತೀಚೆಗೆ ಟೀವಿ ಹಾಗೂ ಸಿನಿಮಾ ಪ್ರಾಬಲ್ಯದಿಂದಾಗಿ ಹರಿಕಥೆಯ ಜನ ಪ್ರಿಯತೆ ಇಳಿಮುಖವಾಗಿದೆಯಾದರೂ, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹರಿಕಥೆಯ ಬೇರುಗಳು ಇನ್ನೂ ಬಲವಾಗಿವೆ.

ಕೋಣನೂರು ಸೀತಾರಾಮ ಶಾಸ್ತ್ರಿ , ಗುರುರಾಜುಲು ನಾಯ್ಡು (ಅರುಣ್‌ಕುಮಾರ್‌), ಶೋಭಾ ನಾಯ್ಡು ಮುಂತಾಗಿ ಕನ್ನಡ ಸಹೃದಯರ ಮನಸ್ಸು ಕದ್ದ ಹರಿಕಥಾ ವಿದ್ವಾಂಸರ ಸಂಖ್ಯೆ ಅಪಾರ. ಇಂತಿಪ್ಪ ಹರಿಕಥೆ ಪರಂಪರೆಯ ವಕ್ತಾರರಾಗಿ ಜನಪ್ರಿಯರಾದವರು ಭದ್ರಗಿರಿ ಸರ್ವೋತ್ತಮ ದಾಸರು. ಬೆಂಗಳೂರು, ಕರ್ನಾಟಕ ಮಾತ್ರವಲ್ಲ ... ಅಂತರರಾಷ್ಟ್ರೀಯ ಖ್ಯಾತಿ ಅವರದು. ತಿಳಿಹಾಸ್ಯದೊಂದಿಗೆ ಸಂಸ್ಕೃತಿ/ಧರ್ಮದ ಕಥೆಗಳನ್ನು ಮನ ಮುಟ್ಟುವಂತೆ ಹೇಳುವುದರಲ್ಲಿ ಸರ್ವೋತ್ತಮದಾಸರು ಎತ್ತಿದ ಕೈ. ಸರಳತೆ ಅವರ ಇನ್ನೊಂದು ವೈಶಿಷ್ಟ್ಯ. ಯುರೋಪ್‌ ಹಾಗೂ ಅಮೆರಿಕಾದಲ್ಲಿ ಅನೇಕ ಕಾರ್ಯಕ್ರಮಗಳನ್ನೂ ನೀಡಿರುವ ಅವರಿಗೆ ಅಭಿಮಾನಿಗಳೂ ಅಪಾರ. ಕೀರ್ತನ ವಿಶಾರದ, ಕೀರ್ತನ ಕೇಸರಿ ಇತ್ಯಾದಿ ಬಿರುದುಗಳಿಂದ ಸರ್ವೋತ್ತಮದಾಸರು ಅಲಂಕೃತರು.

Click here to go to top
ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+