‘ನಾನು ಪ್ರಪಂಚ ಸುತ್ತಿ ಬಂದೆ’- ಪುಟ 2
*ವಿಜಯ ಗುಂ. ರುಈಕರ
ಅಂಟಿಯೋಕ್, ಕ್ಯಾಲಿಫೋರ್ನಿಯ, ಯುಎಸ್
ಒಮ್ಮೆ ಇಜಿಪ್ಟಿನ ಕೈರೋ ಪಟ್ಟಣದ ಸಮೀಪದಲ್ಲಿರುವ ಔದ್ಯೋಗಿಕ ಭಾಗದಲ್ಲಿ ( Industrial Estate) ಒಂದು ಕಾರ್ಖಾನೆ ನೋಡಲು ನಾನು ಹೋಗಿದ್ದೆ. ಇಡೀ ದಿನ ಕೆಲಸವಾದ ನಂತರ, ನನ್ನ ಅಲ್ಲಿನ ಸಹಕಾರಿ, ಮಹಂಮದ ನಗೀಬನು, ‘ಬನ್ನಿ, ಸಂಜೆಯಾಗಿದೆ, ನಿಮಗೆ ಕೈರೋ ನಗರ ತೋರಿಸುವೆ’ ಎಂದ. ಆಗಲೆಂದು ನಾನು ಒಪ್ಪಿದಾಗ, ಇಬ್ಬರೂ ಜೊತೆಗೆ ಹೊರಟೆವು.
ಮಹಂಮದ್ ನಗೀಬ್ ಓರ್ವ ಅರಬ್ ವಂಶದ ಇಜಿಪ್ಟ್ ನಾಗರಿಕ. ಆತನಿಗೆ ಇಂಗ್ಲೀಷು ತಾಂತ್ರಿಕ ಶಬ್ದಗಳೇ ಹೆಚ್ಚಾಗಿ ಗೊತ್ತು. ಸರ್ವಸಾಧಾರಣ ಮಟ್ಟದ ಇಂಗ್ಲಿಷು ಸಂಭಾಷಣೆ ಆತನಿಗೆ ಸಾಧ್ಯವಿರಲಿಲ್ಲ. ನನಗಾದರೋ, ಆತನ ಅರೇಬಿಕ್ ಭಾಷೆಯ ಜ್ಞಾನವೇ ಇರಲಿಲ್ಲ. ಹಾಗೂ ಹೀಗೂ ಕೆಲಸದ ಮಟ್ಟಿಗೆ ತೊಂದರೆ ಬರಲಿಲ್ಲ.
ಸಂಜೆಗೆ ತಿರುಗುತ್ತ ನಾವು ಕೈರೋ ಪಟ್ಟಣದ ಐತಿಹಾಸಿಕ ಮ್ಯೂಸಿಯಂಗೆ ತಲುಪಿವೆ. ಇದೊಂದು ಪ್ರಚಂಡ ಮ್ಯೂಸಿಯಂ. ಇದರೊಳಗೆ ಪ್ರಾಚೀನ ಕಾಲದ ಇಜಿಪ್ಟ್‌ನ ‘ ಫೆರೋ’ ರಾಜರ ಮೂರ್ತಿಗಳು, ಒಡವೆ, ವಸ್ತ್ರಗಳು, ಶಸ್ತ್ರಾಸ್ತ್ರಗಳು, ಇತ್ಯಾದಿಗಳೆಲ್ಲ ಪ್ರದರ್ಶಿ ಸಲಾಗಿವೆ. ಅಲ್ಲಿ ಸುಪ್ರಸಿದ್ಧ ರಾಣಿ ‘ಕ್ಲಿಯೋಪಾತ್ರಾ’ಳ ರಾಜವಸ್ತ್ರಗಳು, ಮಿಂಚಿಮಿಂಚಿ ಹೊಳೆಯುವ ನವರತ್ನ, ಮುತ್ತುಗಳ ಒಡವೆಗಳಿರುವ ಸ್ಥಾನಕ್ಕೆ ನಾವಿಬ್ಬರೂ ಹೋದೆವು. ಆ ಒಡವೆಗಳು ತುಂಬಾ ವಿಚಿತ್ರವಾದುವು. ಹೇಗೆ ಧರಿಸುವುದೆಂಬ ಪ್ರಶ್ನೆ ನಾನು ಮಹಂಮದ್ ನಗೀಬನಿಗೆ ಕೇಳಿದೆ. ಆದರೆ ನನ್ನ ಇಂಗ್ಲಿಷು ಅವನಿಗೆ ಅರ್ಥವೇ ಆಗಲಿಲ್ಲವೆಂಬುದು ಆತನ ಮುಖಭಾವದಿಂದ ಸ್ಪಷ್ಟವಾಯಿತು. ಅಷ್ಟರಲ್ಲಿ ಕೈರೋ ಯುನಿವರ್ಸಿಟಿಯ ಕೆಲವು ವಿದ್ಯಾರ್ಥಿನಿಯರ ತಂಡವೊಂದು ಅಲ್ಲಿ ಬಂದಿತು. ಅವರು ನಮ್ಮಿಬ್ಬರ ಸಂಭಾಷಣ ಪ್ರಯತ್ನಗಳನ್ನು ನೋಡಿ ನಕ್ಕು, ಸಹಾಯಕ್ಕೆಂದು ನಮ್ಮ ಹತ್ತಿರ ಬಂದರು.
ಒಬ್ಬ ಹುಡುಗಿ ನನ್ನನ್ನು ಇಂಗ್ಲಿಷಿನಲ್ಲಿ ಕೇಳಿದಳು. ‘ ನಿಮಗೆ ಅರೇಬಿಕ್ ಭಾಷೆ ಬರುವುದಿಲ್ಲವೇ ?’ ನಾನು ‘ ಇಲ್ಲ ’ ಎಂದಾಗ ‘ಹಾಗಾದರೆ ನಾನು ನಿಮ್ಮ ಪ್ರಶ್ನೆಗಳನ್ನು ನಿಮ್ಮ ಸಹಕಾರಿ(ಗೈಡ್)ಗೆ ಅರೇಬಿಕ್ ಭಾಷೆಯಲ್ಲಿ ಭಾಷಾಂತರಿಸಿ ಹೇಳಲೇ ?’ ಎಂದಳು. ‘ ನಿಮ್ಮ ಸಹಾಯಕ್ಕೋಸ್ಕರ ನಾನು ನಿಮಗೆ ತುಂಬ ಅಭಾರಿಯಾಗಿದ್ದೇನೆ’ ಎಂದೆ ನಾನು. ‘ ಆದರೆ, ನಾನು ಭಾಷಾಂತರ ಮಾಡುವುದರ ಮೊದಲು ನನ್ನ ಗೆಳತಿಯರಿಗೆ ನಿಮ್ಮ ಬಗ್ಗೆ ಒಂದೆರಡು ಕುತೂಹಲದ ಪ್ರಶ್ನೆಗಳಿವೆ ’ ಎಂದಳು ಅವಳು. ‘ಕೇಳಿ ನಿಮ್ಮ ಪ್ರಶ್ನೆ’ ಎಂದು ನಾನೆಂದೆ.
ಅವಳು ಕೇಳಿದಳು ‘ ನೀವು ಯಾವ ದೇಶದಿಂದ ಬಂದಿದ್ದೀರ ?’ ನಾನೆಂದೆ ‘ ಅಮೆರಿಕಾ ದೇಶದಿಂದ ’ ಅವಳು ‘ ಹಾಗಲ್ಲ ನೀವು ಬಿಳಿಯರಲ್ಲ. ನಿಮ್ಮ ಮೂಲ ದೇಶ ಯಾವುದು ?’ ಎಂದಳು. ನಾನು ‘ ಭಾರತ’ ಎಂದಾಗ, ಎಲ್ಲ ಹುಡುಗಿಯರು ಕೂಡಲೇ ನನ್ನನ್ನು ಕುರಿತು ಅರೇಬಿಕ್ ಭಾಷೆಯಲ್ಲಿ, ಲಗುಬಗೆಯಿಂದ ಮಾತನಾಡತೊಡಗಿದರು. ಆಗ ನಾನು ‘ ಇದೆಲ್ಲ ಏನು ?’ ಎಂದು ಕೇಳಿದೆ. ಆಗ ಮುಗಳ್ನಗುತ್ತ ಮೊದಲಿನ ಹುಡುಗಿ ನನಗೆ ಕೇಳಿದಳು. ‘ ನೀವು ಭಾರತದವರು. ನಮ್ಮೆಲ್ಲರ ಹೃದಯ ಸ್ಪಂದಿಸುವ ನಾಯಕ ( heart throb hero) ಆದ ಅಮಿತಾಭ್ ಬಚ್ಚನ್ ನಿಮ್ಮ ಪರಿಚಯದವನೇ ? ಎಂದು ಎಲ್ಲರೂ ಕೇಳಬಯಸುತ್ತಾರೆ’
ಇಜಿಪ್ಟ್‌ದಂತಹ ಸದೂರ ದೇಶದಲ್ಲಿ ಸಹ ಹಿಂದಿ ಸಿನಿಮಾ ಅಮಿತಾಭ್ ಬಚ್ಚನ್, ಜನಪ್ರಿಯರಾಗಿರುವುದು ನನಗೆ ಬೆರಗುಗೊಳಿಸಿತು. ಆತ ಕೈರೋಗೆ ಒಮ್ಮೆ ಬಂದಾಗ ಮೂರು ದಿನ ಇಡಿ ಪಟ್ಟಣದ ಸಾರಿಗೆ-ರಸ್ತೆಗಳು ತುಂಬಿ ತುಳುಕಾಡಿ ವಾಹನಗಳು ಚಲಿಸುವುದೇ ಸಾಧ್ಯವಿರಲಿಲ್ಲವಂತೆ !
‘ ನಾನೊಬ್ಬ ತೀರ ಸಾಮಾನ್ಯ ಇಂಜಿನಿಯರ್, ಸಿನಿಮಾ ವ್ಯವಸಾಯದಿಂದ ಬಹಳ ದೂರವಿದ್ದವ, ನನಗೆ ಅಮಿತಾಭ್ ಸಿನಿಮಾ ನೋಡಿ ಗೊತ್ತು. ಬಾಕಿ ಪರಿಚಯ ಇಲ್ಲ’ ಎಂದು ನಾನು ಹೇಳಿದಾಗ ಆ ಎಲ್ಲ ತರುಣಿಯರ ಮುಖಗಳ ಮೇಲೆ ಪ್ರಕಟವಾದ ನಿರಾಸೆಗೆ ಭಾಷಾಂತರದ ( translation ) ಅವಶ್ಯಕತೆ ಇರಲಿಲ್ಲ !
ಮುಖಪುಟ / ಸಾಹಿತ್ಯ ಸೊಗಡು
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications