ಬೃಹತ್ತು ಮಹತ್ತುಗಳ ಕ್ಲೀವ್‌ಲ್ಯಾಂಡ್‌ ತ್ಯಾಗರಾಜ ಆರಾಧನೆಯ ಬೆಳ್ಳಿ ಹಬ್ಬ

*ವಿ.ಎಂ.ಕುಮಾರ ಸ್ವಾಮಿ, ಇರ್ವಿನ್‌

ಕ್ಲೀವ್‌ಲ್ಯಾಂಡ್‌ನ ತ್ಯಾಗರಾಜ ಆರಾಧನೆ ಉತ್ತರ ಅಮೆರಿಕೆಯ ಬೃಹತ್‌ ಶಾಸ್ತ್ರೀಯ ಸಂಗೀತ ಹಬ್ಬ. 1978ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಈ ಹಬ್ಬ ಈಗ ಮಹತ್‌ ಸ್ವರೂಪ ಪಡೆದುಕೊಂಡಿದೆ. 10 ದಿನಗಳ ಅವಧಿಯಲ್ಲಿ 25ಕ್ಕೂ ಹೆಚ್ಚು ಕಚೇರಿಗಳು. 2000ಕ್ಕೂ ಹೆಚ್ಚು ಮಂದಿ ಪ್ರತಿ ವರ್ಷ ಈ ಹಬ್ಬದ ಅನುಭವ ತುಂಬಿಕೊಳ್ಳುತ್ತಿದ್ದಾರೆ.

ಈ ಬಾರಿ ಮಾರ್ಚ್‌ 30ರಿಂದ ಏಪ್ರಿಲ್‌ 7ರವರೆಗೆ ನಡೆಯಲಿರುವ ತ್ಯಾಗರಾಜರ ಆರಾಧನೆ ವಿಶೇಷ ಸ್ವರೂಪದ್ದು. ಆರಾಧನೆಗೆ ಈಗ ಬೆಳ್ಳಿಹಬ್ಬ. ಇಷ್ಟು ವರ್ಷಗಳ ಕಾಲ ಉತ್ತರ ಅಮೆರಿಕೆಯ ಮಂದಿಗೆ ಪ್ರತಿ ವರ್ಷ ತಪ್ಪದೆ ಈ ಹಬ್ಬದ ಉಡುಗೊರೆ ಕೊಟ್ಟಿರುವುದೇ ನಮ್ಮ ಹೆಮ್ಮೆ. ಇನ್ನಷ್ಟು ವರ್ಷಗಳು ಈ ಹಬ್ಬ ಹೀಗೇ ನಡೆಯಲಿ. ಅದಕ್ಕೆ ಇಲ್ಲಿನ ಮಂದಿ ಸದಾ ಬೆಂಬಲ ನೀಡಲಿ ಎಂಬುದು ಆಶಯ.

ಈ ಬಾರಿ ಜನರಿಗೆ ಇನ್ನಷ್ಟು ಹೆಚ್ಚಿನದನ್ನು ಕೊಡುವ ರೀತಿಯಲ್ಲಿ ಕ್ಲೀವ್‌ಲ್ಯಾಂಡ್‌ ಆರಾಧನೆ ಸ್ವರೂಪವನ್ನು ಹೆಣೆಯಲಾಗಿದೆ. ಹತ್ತು ದಿನಗಳ ಈ ಸಂಗೀತ ರಸದೌತಣ ಕಾರ್ಯಕ್ರಮ ನಡೆಯುವ ವಾರದ ದಿನಗಳಲ್ಲಿ ಉಪನ್ಯಾಸ ಸರಣಿಗಳಿರುತ್ತವೆ, ಕಮ್ಮಟಗಳಿರುತ್ತವೆ, ಪ್ರಾತ್ಯಕ್ಷಿಕೆಗಳಿರುತ್ತವೆ. ಹಬ್ಬದಲ್ಲಿ ನೆರೆಯುವ ವೀಕ್ಷಕರು ಹಾಗೂ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದು.

ಯುಎಸ್‌ಎಯ ಭಾರತದ ರಾಯಭಾರಿ ಲಲಿತ್‌ ಮಾನ್‌ಸಿಂಗ್‌ ಆರಾಧನೆಯ ಮುಖ್ಯ ಅತಿಥಿ. ವಟ್ಟಿಕುಟ್ಟಿ ಪ್ರತಿಷ್ಠಾನದ ಪದ್ಮಾ ವಟ್ಟಿಕುಟ್ಟಿ ಗೌರವ ಅತಿಥಿ. ನ್ಯೂಯಾರ್ಕ್‌ನ ಭಾರತದ ಕನ್ಸಲ್‌ ಜನರಲ್‌ ಶಶಿ ತ್ರಿಪಾಠಿ, ಕ್ಲೀವ್‌ಲ್ಯಾಂಡ್‌ ಸ್ಟೇಟ್‌ ಯೂನಿವರ್ಸಿಟಿಯ ಮೈಕೆಲ್‌ ಶ್ವಾರ್ಟ್ಜ್‌, ಸಿಎಸ್‌ಯು ಸಂಗೀತ ಇಲಾಖೆಯ ಅಧ್ಯಕ್ಷ ಎರಿಕ್‌ ರಿkುಯೋಲೆಕ್‌ ಹಾಗೂ ಸಂಗೀತ ಹಬ್ಬದ ರೂವಾರಿ ರಾಮನಾಡ್‌ ವಿ.ರಾಘವನ್‌ ಆರಾಧನೆಯಲ್ಲಿ ಪಾಲ್ಗೊಳ್ಳಲಿರುವ ಪ್ರಮುಖರು.

ಈ ಬಾರಿ ನೃತ್ಯ ರತ್ನಾಕರ ಪ್ರಶಸ್ತಿ ಸ್ವೀಕರಿಸಲಿರುವ ವೈಜಯಂತಿಮಾಲ ಬಾಲಿ ಅವರ ನೃತ್ಯ ಕಾರ್ಯಕ್ರಮವನ್ನು ಬಹುತೇಕರು ನೋಡಲು ಅನುವಾಗುವಂತೆ ಭಾನುವಾರ ಸಂಜೆ ಆಯೋಜಿಸಲಾಗಿದೆ. ಟಿಕೇಟು ದರ- 100, 70, 50 ಹಾಗೂ 30 (ಬಾಲ್ಕನಿ) ಡಾಲರ್‌. ಟಿಕೇಟು ಕಾದಿರಿಸಲು ಸಂಪರ್ಕಿಸಿ- (216) 476 1604. ಸಂಗೀತ ಅನುಭಾವಿಗಳಿಗೆ ಅನುವು ಮಾಡಿಕೊಡಲು ಆರಾಧನಾ ಸಮಿತಿಯು ಫ್ಯಾಮಿಲಿ ಪ್ಯಾಕೇಜ್‌ಗಳ ವ್ಯವಸ್ಥೆಯನ್ನೂ ಮಾಡಿದೆ.

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+