ಬೀಜಿಂಗ್‌, ಹಾಂಕಾಂಗ್‌,ಆಸ್ಟ್ರೇಲಿಯಾದಲ್ಲಿ ತ್ರಿವರ್ಣ ಧ್ವಜವಂದನೆ

ಬೀಜಿಂಗ್‌ : 55ನೇ ಸ್ವಾತಂತ್ರ್ಯ ಉತ್ಸವದಂದು ವಿದೇಶದಲ್ಲಿರುವ ಭಾರತೀಯರು ಸಂಭ್ರಮದಿಂದ ಧ್ವಜವೇರಿಸಿ, ರಾಷ್ಟ್ರಗೀತೆ ಹಾಡಿ ಭಾರತಮಾತೆಗೆ ನಮಿಸಿ ಖುಷಿಪಟ್ಟ ವರದಿಗಳು ಬಂದಿವೆ.

ಚೀನಾದ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಆವರಣದಲ್ಲಿ ಮಂಗಳವಾರ ಭಾರತೀಯರು ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು. ಭಾರತೀಯ ರಾಯಭಾರಿ ಶಿವಶಂಕರ್‌ ಮೆನನ್‌ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಪತಿ ಕೆ. ಆರ್‌. ನಾರಾಯಣನ್‌ ಅವರ ಮುದ್ರಿತ ಭಾಷಣ ಓದಿದರು.

ಪೂರ್ವ ಚೀನಾ ಪ್ರದೇಶದಲ್ಲಿರುವ ಶಾಂಗೈನಲ್ಲಿ ಭಾರತೀಯ ನಿವಾಸಿಗಳು ಕೌನ್ಸಲ್‌ ಜನರಲ್‌ ಸುಜನ್‌ ಆರ್‌. ಚಿನೋಯ್‌ ನಿವಾಸದಲ್ಲಿ ಭಾರತದ ಧ್ವಜವೇರಿಸಿ ವಂದಿಸಿದರು. ಹಾಂಕಾಂಗ್‌ನಲ್ಲಿಯೂ ಭಾರತೀಯ ಕೌನ್ಸಲ್‌ ಜನರಲ್‌ ಅಶೋಕ್‌ ಕೆ. ಕಾಂತ್‌ ಅವರ ನಿವಾಸದಲ್ಲಿ ತ್ರಿವರ್ಣ ಧ್ವಜವಂದನೆ ಕಾರ್ಯಕ್ರಮ ನಡೆಯಿತು.

ಆಸ್ಟ್ರೇಲಿಯಾ : ಇಲ್ಲಿನ ಉಪನಗರ ಕಿಲ್ಲಾರಾದಲ್ಲಿರುವ ಕೌನ್ಸಲ್‌ ಜನರಲ್‌ ಎಂ. ಗಣಪತಿ ಅವರ ಮನೆಯಲ್ಲಿ ನೂರಾರು ಭಾರತೀಯರು ಸ್ವಾತಂತ್ರ್ಯ ಉತ್ಸವದಂದು ಧ್ವಜವಂದಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+