ಸಿಂಗಪುರ ಕನ್ನಡ ಸಂಘಕ್ಕೆ ನೂತನ ಪದಾಧಿಕಾರಿಗಳು

ಸಿಂಗಪುರ : 80ರ ದಶಕದಲ್ಲಿ ಸಿಂಗಪುರದಲ್ಲಿ ಕೇವಲ 20 ಕನ್ನಡಿಗರ ಕುಟುಂಬಗಳಿದ್ದವು. 90ರ ದಶಕದಲ್ಲಿ ಅದು 600 ಕುಟುಂಬಗಳಿಗೇರಿತು. ಮಾಹಿತಿ ತಂತ್ರಜ್ಞಾನ, ಸಾಫ್ಟ್‌ವೇರ್‌ ಕ್ಷೇತ್ರ ಬೆಳೆದಂತೆ ಸಿಂಗಪುರದಲ್ಲಿ ಕನ್ನಡಿಗರ ಕುಟುಂಬಗಳ ಸಂಖ್ಯೆಯೂ ಹೆಚ್ಚಿತು. ಈ ಹೊತ್ತು ಅಲ್ಲಿ ಸಾವಿರಾರು ಕನ್ನಡಿಗರಿದ್ದಾರೆ. ಕನ್ನಡ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಕಡಲಾಚೆಯೂ ಕನ್ನಡ ತಾಯಿಯ ಸೇವೆ ಮಾಡುತ್ತಿದ್ದಾರೆ.

ಸಿಂಗಪುರದಲ್ಲಿರುವ ಕನ್ನಡ ಸಂಘಕ್ಕೆ ಇತ್ತೀಚೆಗೆ ಚುನಾವಣೆಯೂ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗುರುಪ್ರಕಾಶ್‌ ಎಸ್‌.ಕೆ., ಉಪಾಧ್ಯಕ್ಷರಾಗಿ ಎನ್‌.ಡಿ. ವೀರಣ್ಣಗೌಡ, ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ವೈದ್ಯ, ಸಹಾಯಕ ಕಾರ್ಯದರ್ಶಿಯಾಗಿ ವೆಂಕಟೇಶ್‌ ಜೋಯಿಸ್‌, ಖಜಾಂಚಿಯಾಗಿ ಕೆ.ಎನ್‌. ವಿಶ್ವನಾಥ್‌ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಿರೀಶ್‌ ಕುಮಾರ್‌ ನಾಗರಾಜ್‌, ಜಗದೀಶ್‌ ಸಿ.ವಿ, ರಾಮಪ್ರಸಾದ್‌ ಮತ್ತು ಶಂಕರ್‌ ಎಸ್‌. ಮರೋಲ್‌ ಆಯ್ಕೆಯಾದರು.

ಒಂದು ದಶಕದಿಂದ ಕನ್ನಡ ಕೆಲಸ ಮಾಡುತ್ತಿರುವ ಇಲ್ಲಿನ ಕನ್ನಡ ಸಂಘ ಯುಗಾದಿ ಆಚರಣೆ, ಕನ್ನಡ ನಾಟಕ, ಸಂಗೀತ, ವಿಚಾರಗೋಷ್ಠಿ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಇತ್ತೀಚೆಗೆ ಸಿಂಗಪುರದ ಜೋಕಾಂಗ್‌ ಸಮುದಾಯ ಭವನದಲ್ಲಿ ಭಾರತೀಯರ ಜೀವನ ಮೌಲ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿತ್ತು.

ಹಿರಿಯ ಹರಿದಾಸ ಸಾಹಿತ್ಯ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆಯನ್ನು ಎನ್‌. ವೀರಣ್ಣಗೌಡ ಅವರು ವಹಿಸಿದ್ದರು. ಷಿಕಾಗೋ ನಗರದಲ್ಲಿ ವೈದ್ಯರಾಗಿರುವ ಡಾ. ಶರ್ಮಾ, ಡಾ. ಆಲೆನ್‌, ರಾಜಲಕ್ಷ್ಮೀ ಪಾರ್ಥಸಾರಥಿ, ಶ್ರೀನಿವಾಸ್‌ ಮೊದಲಾದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹಬ್ಬ ಹರಿದಿನಗಳನ್ನು ಆಚರಿಸುವುದೇ ಅಲ್ಲದೆ, ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಘ, ‘ಸಿಂಗಾರ’ ಎಂಬ ಸ್ಮರಣ ಸಂಚಿಕೆಯನ್ನೂ ಪ್ರಕಟಿಸುತ್ತದೆ. ಸಂಘವು ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+