ವಾಷಿಂಗ್ಟನ್ ಡಿಸಿಯಲ್ಲಿ ಉದಯ್ ಜಾದೂಗಾರ್
ವಾಷಿಂಗ್ಟನ್ ಡಿಸಿ: ಮ್ಯಾಜಿಕ್‌ಶೋ ಎಂದರೆ ಮಕ್ಕಳಿಗೆ ಎಂಥಾ ಆಸಕ್ತಿ ಬಂದು ಬಿಡುತ್ತದೆ ! ಸಣ್ಣವರಾಗಿದ್ದಾಗ ನಾವು ನೀವೆಲ್ಲ ದೊಂಬರಾಟದವರನ್ನೂ ಬಿಟ್ಟ ಕಣ್ಣಿನಿಂದ ನೋಡುತ್ತಿರಲಿಲ್ಲವಾ ... ಈಗಲೂ ಇಂಟರೆಸ್ಟ್ ಮೂಲೆಯಲ್ಲಿ ಉಳಿದುಕೊಂಡಿರುತ್ತದೆ.
ಸೋ, ಕೆಲಸಗಳ ಬಿಗುವನ್ನು ಬದಿಗೊತ್ತಿ ಪುರುಸೊತ್ತು ಮಾಡಿಕೊಂಡು ನೀವು ಮ್ಯಾಜಿಕ್ ಶೋ ನೋಡಲು ಹೊರಡಿ. ಮಕ್ಕಳನ್ನು ಕರೆದುಕೊಂಡು ಬರಲು ಮರೆಯಬೇಡಿ. ಮಕ್ಕಳಿಗೆ ಅಂತ ನೀವು ಟಿಕೇಟು ಖರೀದಿಸಬೇಕೆಂದಿಲ್ಲ. ಪಕ್ಕದ ಮನೆಯ ಮಕ್ಕಳಿಗೂ ಈ ವಿಷಯ ತಿಳಿಸಿ.
ಜುಲೈ 29ರ ಭಾನುವಾರ ಸಂಜೆ ಮ್ಯಾಜಿಕ್ ಶೋವನ್ನು ಆಯೋಜಿಸಿರುವುದು ಕಾವೇರಿ ಕನ್ನಡ ಸಂಘ. ಕರ್ನಾಟಕದವರೇ ಆದ ಉದಯ್ ಜಾದೂಗಾರ್ ಮ್ಯಾಜಿಕ್ ಶೋ ನೀಡುತ್ತಾರೆ. ನೀವೆಲ್ಲ ಬರಬೇಕು ಅನ್ನುತ್ತದೆ ಕನ್ನಡ ಸಂಘದ ಆತ್ಮೀಯ ಕರೆಯೋಲೆ.
ಸಂಜೆ ನಾಲ್ಕೂವರೆಗೆ ಕಾರ್ಯಕ್ರಮ ಆರಂಭವಾಗುತ್ತದೆ. ಹತ್ತು ನಿಮಿಷವಾದೂ ಮುಂಚಿತವಾಗಿ ಬನ್ನಿ. 8 ವರ್ಷದೊಳಗಿನ ಮಕ್ಕಳಿಗೆ ಟಿಕೇಟಿಲ್ಲ. ದೊಡ್ಡವರಿಗಾದರೆ 4 ಡಾಲರ್‌ನ ಟಿಕೇಟು ಖರೀದಿಸಬೇಕು. ನಿಮಗೇನಾದರೂ ಸಂಶಯವಿದ್ದರೆ ಫೋನಾಯಿಸಬಹುದು. ನಾಗಶಂಕರ್-240- 631-0569, ಡಾ. ಶ್ಯಾಮಲಾ- 301-330- 0919, ಸಂಜಯ್ ರಾವ್ 703- 442 3316. ಸ್ಥಳ ಗೊತ್ತಿದೆಯಾ..
Montgomery County Executive Office Building, 101 Monroe Street , Rockville City Center, Rockville MD
Directions (From Beltway I495):
1. Take I270 North
2. Take the MD28/W MONTGOMERY AVE exit (6A towards ROCKVILLE). Stay on the right lane on the ramp and turn right onto MD28.
3. Continue on MD28, Road becomes W.Jefferson St, E.Jefferson St. Make Left onto Monroe Street
4. Building will be to your left (Highrise, next to Potomac Valley Bankand before Judicial Center). Look for Kaveri signboards to locate thecorrect entrance.
PARKING: Public and street parking is available around the building.
Regal Cinema parking complex is just a block away from the building.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು