ಹೃದಯವಾಹಿನಿ ಕಥಾಸ್ಪರ್ಧೆಯಲ್ಲಿ ಗೆದ್ದವರಿವರು...
ಕ್ಯಾಲಿಫೋರ್ನಿಯಾದಲ್ಲಿರುವ ಜ್ಯೋತಿ ಮಹಾದೇವ ಅವರು, ಮಂಗಳೂರಿನ ಹೃದಯವಾಹಿನಿ ಪಾಕ್ಷಿಕ ಏರ್ಪಡಿಸಿದ್ದ ಜಾಗತಿಕ ಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ತಮ್ಮ ಶಿವಾಣಿ ಕಥೆಗೆ ಮೊದಲ ಬಹುಮಾನ (ವಿದೇಶದಲ್ಲಿ ನೆಲೆಸಿರುವವರು ಬರೆದ ಕಥೆಗಳು ವಿಭಾಗ) ಪಡೆದಿದ್ದಾರೆ.
ಮಿಸ್ಸೌರಿಯ ಸೇಂಟ್ ಲೂಯಿಸ್‌ನಲ್ಲಿ ನೆಲೆಸಿರುವ ಡಾ. ಅಶ್ವತ್ಥ ಎನ್.ರಾವ್ ಅವರ ಕುಡಿ ಒಂದೆ ಬೇರೆ ಬೇರೆ ಬಣ್ಣದ ಹೂವುಗಳೆರಡು ಕಥೆ ದ್ವಿತೀಯ ಬಹುಮಾನ ಪಡೆದಿದೆ. ವಾಷಿಂಗ್ಟನ್‌ನ ಕೆಂಟ್‌ನಲ್ಲಿರುವ ಶ್ರೀ ಕೂರ್ಗ್ ಅವರ ಚಕ್ರ ಪರಿಭ್ರಮಣೆ ಕಥೆ ತೃತೀಯ ಬಹುಮಾನ ಪಡೆದಿದೆ.
ಹೃದಯವಾಹಿನಿ ಪಾಕ್ಷಿಕ ಇತ್ತೀಚೆಗಷ್ಟೇ ವಿವಿಧ ವಿಭಾಗಗಳಲ್ಲಿ ಜಾಗತಿಕ ಮಟ್ಟದ ಕನ್ನಡ ಕಥಾ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಿತ್ತು . ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು ಎಂದು ಪಾಕ್ಷಿಕದ ಪ್ರಕಟಣೆ ತಿಳಿಸಿದೆ. ಅಂದಹಾಗೆ, ವಿಜೇತರಿಗೆ ಅಭಿನಂದನೆಗಳು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು










Click it and Unblock the Notifications