ಭಾರೀ ದುರಂತದ ಕಾರಣ ಕಾವೇರಿ ಕನ್ನಡ ಸಂಘದ ಗಣೇಶನ ಹಬ್ಬ ರದ್ದು
ವಾಷಿಂಗ್ಟನ್ ಡಿಸಿ : ನ್ಯೂಯಾರ್ಕ್‌ನಲ್ಲಿನ ವಿಶ್ವ ವ್ಯಾಪಾರ ಕೇಂದ್ರದ ಬೃಹತ್ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಕಾವೇರಿ ಕನ್ನಡ ಸಂಘ ತನ್ನ ಗಣೇಶನ ಹಬ್ಬದ ಕಾರ್ಯಕ್ರಮವನ್ನು ರದ್ದುಪಡಿಸಿದೆ.
ಸೆಪ್ಟೆಂಬರ್ 15ರಂದು ನಡೆಯಬೇಕಿದ್ದ ಗಣೇಶನ ಹಬ್ಬದ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ. ಅನಿರೀಕ್ಷಿತವಾಗಿ ಸಂಭವಿಸಿದ ಭಾರೀ ದುರಂತದ ಹಿನ್ನೆಲೆಯಲ್ಲಿ ಆಯೋಜಿತ ಕಾರ್ಯಕ್ರಮವನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಕಾವೇರಿಯ ಪ್ರಕಟಣೆ ತಿಳಿಸಿದೆ.
ಕನ್ನಡ ಸಂಘದ ಸದಸ್ಯರೆಲ್ಲರ ಸಹಕಾರವನ್ನು ಕೋರಿರುವ ಕಾವೇರಿ, ಗಣೇಶ ಹಬ್ಬಕ್ಕಾಗಿ ಉತ್ಸಾಹದಿಂದ ತಯಾರಿ ನಡೆಸಲು ಮುಂದೆ ಬಂದಿದ್ದ ಎಲ್ಲ ಉತ್ಸಾಹಿಗಳಿಗೂ ಕೃತಜ್ಞತೆ ಸಲ್ಲಿಸಿದೆ. ಹಬ್ಬದ ಆಚರಣೆಯ ಕಾರ್ಯಕ್ರಮ ರದ್ದಾದ ವಿಷಯವನ್ನು ಸ್ನೇಹಿತರಿಗೂ ತಿಳಿಸಲು ಪ್ರಕಟಣೆ ಕೋರಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications