ಪಂಡಿತ್‌ ಚೌರಾಸಿಯಾರಿಂದ ಬಾನ್ಸುರಿ ಕಚೇರಿ

Hariprasad Chowrasiaಮೇರಿಲ್ಯಾಂಡ್‌ : ಇದು ಅಪರೂಪದ ಕಾರ್ಯಕ್ರಮದ ಕರೆಯೋಲೆ. ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ ಅವರ ಬಾನ್ಸುರಿ ವಾದನ ಕಚೇರಿ ಜುಲೈ 8 ರಂದು ಮೇರಿಲ್ಯಾಂಡ್‌(Tawes Theatre, University of Maryland, College Park, MD) ನಲ್ಲಿ ನಡೆಯುತ್ತಿದೆ.

ಕಚೇರಿಯನ್ನು ಆಯೋಜಿಸಿರುವುದು ‘ಕ್ರೆೃ ’ ( ಚೈಲ್ಡ್‌ ರಿಲೀಫ್‌ ಆ್ಯಂಡ್‌ ಯು ) ಸಂಸ್ಥೆ.

ಲಾಭದತ್ತ ಮುಖ ಮಾಡದೆ, ರಾಜಕೀಯದ ಗೊಡವೆಗೆ ಹೋಗದೆ, ಮತದ ಹಂಗಿಲ್ಲದೆ ಕೆಲಸ ನಿರ್ವಹಿಸುತ್ತಿರುವ ‘ಕ್ರೆೃ’ ಸಂಸ್ಥೆಯ ಮೂಲ ಉದ್ದೇಶ ಮಕ್ಕಳ ಹಕ್ಕಿನ ಪೋಷಣೆ ಮತ್ತು ಅವರಿಗೆ ಶಿಕ್ಷಣ ಮತ್ತು ಮೂಲಭೂತ ಸೌಕರ್ಯ ನೀಡುವುದು.

ಮಕ್ಕಳ ಹಕ್ಕು ರಕ್ಷಣಾ ಹೊಣೆ ಹೊತ್ತ ಈ ಕ್ರೆೃ ಸಂಸ್ಥೆ ವಿಶ್ವ ವ್ಯಾಪಿ ಪ್ರಸಿದ್ಧಿ ಪಡೆದಿದೆ. ಫೋರ್ಡ್‌ ಫೌಂಡೇಷನ್‌, ಪಿಲ್ಸ್‌ಬರ್ರಿ ಫೌಂಡೇಷನ್‌ , ಇಂಫಿನಿಟಿ ಫೌಂಡೇಷನ್‌ ಮತ್ತು ಕಂಪ್ಯೂಟರ್‌ ಸಂಘಟನೆಗಳ ಜೊತೆಗೆ ಮೋಟೋರೋಲಾ, ಬ್ರಿಟಿಷ್‌ ಏರ್‌ವೇಸ್‌, ಎಂಸಿಐ ಅಂತಹ ಕಂಪೆನಿಗಳೊಂದಿಗೆ ಕೈ ಜೋಡಿಸಿಕೊಂಡು ದುಡಿಯುತ್ತಿದೆ.

ಜುಲೈ 8ರಂದು ಕ್ರೆೃ ಆಯೋಜಿಸುತ್ತಿರುವ ಚೌರಾಸಿಯಾ ಬಾನ್ಸುರಿ ಕಚೇರಿಗೆ ಟಿಕೇಟುಗಳನ್ನು ಈಗಾಗಲೇ ಹಂಚಲಾರಂಭಿಸಿದ್ದಾರೆ. ನಿಮ್ಮ ಉಪಸ್ಥಿತಿ ಸಮಾರಂಭಕ್ಕೆ ರಂಗು ತರುತ್ತದೆ ಅಂತ ಕ್ರೆೃ ಹೇಳಿದೆ. ಹೆಚ್ಚಿನ ವಿವರಗಳಿಗಾಗಿ www.us.cry.org ವೆಬ್‌ಸೈಟ್‌ ಸಂಪರ್ಕಿಸಬಹುದು. ಟಿಕೆಟ್‌ಗಳಿಗಾಗಿ 301 405-7847 ದೂರವಾಣಿ ಸಂಖ್ಯೆ ಸಂಪರ್ಕಿಸಿ.

ಇತರೆಡೆಗಳಲ್ಲಿ ಪಂಡಿತ್‌ ಚೌರಾಸಿಯಾ ಅವರ ಕಚೇರಿ ದಿನಾಂಕಗಳೂ ನಿಮ್ಮ ಮಾಹಿತಿಗೆ ಇಲ್ಲಿವೆ.

  • Atlanta, GA July 7th
  • Washington D.C July 8th
  • Phoenix, AR July 13th
  • Bay Area, CA July 14th
  • Seattle, WA July 15th
  • Columbus, OH July 21st

    ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+