ಹೊರನಾಡ ಕನ್ನಡಿಗರ ಕನ್ನಡಿ ‘ಹೊರನಾಡ ಸಂಗಾತಿ’ ಬಿಡುಗಡೆ
ಮಂಗಳೂರು: ಹೊರನಾಡ ಕನ್ನಡಿಗರ ಚಟುವಟಿಕೆಗಳನ್ನು ಕುರಿತು ತಿಳಿಸುವ ‘ಹೊರನಾಡ ಸಂಗಾತಿ’ ಕೃತಿಯನ್ನು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಇತ್ತೀಚೆಗೆ ಬಿಡುಗಡೆ ಮಾಡಿದರು.
ಟೀ ಅಂಗಡಿ ನಡೆಸುವವರಿಂದ ಭಾರೀ ಕೈಗಾರಿಕೆ ನಡೆಸುವ ಹೊರನಾಡ ಕನ್ನಡಿಗರ ಬಗೆಗಿನ ಮಾಹಿತಿ ಹೊಂದಿರುವ ಈ ಪುಸ್ತಕ ಉಪಯುಕ್ತವಾದುದು. ಇದನ್ನು ಪ್ರಕಟಿಸಿರುವ ಪ್ರಕಾಶಕರ ಶ್ರಮ ಶ್ಲಾಘನೀಯ ಎಂದು ಸದಾನಂದ ಶೆಟ್ಟಿ ಬಣ್ಣಿಸಿದರು. ಲೇಖಕ ಡಾ.ವಾಮನ ನಂದಾವರ, ಬ್ಯಾರಿ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಅಬ್ದುಲ್ ರಹಮಾನ್, ನ್ಯಾಯವಾದಿ ಇವಾನ್‌ಡಿಸೋಜ, ಮಂಗಳೂರು ನಗರ ಪಾಲಿಕೆ ಉಪ ಮೇಯರ್ ಲಾನ್ಸೆಲಟ್ ಪಿಂಟೊ ಹಾಗೂ ಹೊರನಾಡು ಸಂಗಾತಿ ಕೃತಿಯ ಸಂಪಾದಕ ನಾರಾಯಣ್ ಪ್ರಸಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಸಿದ್ಧ ಕಾರ್ಟೂನಿಗ ಆರ್.ಕೆ.ಲಕ್ಷ್ಮಣ್, ಪತ್ರಕರ್ತ ಎಂ.ವಿ.ಕಾಮತ್, ನ್ಯಾಯಮೂರ್ತಿಗಳಾದ ಸುರೇಶ್ ಹೊಸಬೆಟ್ಟು ಹಾಗೂ ಬಿ.ಎನ್.ಶ್ರೀಕೃಷ್ಣ , ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುರಳೀಧರ್, ಅಮರ ಚಿತ್ರ ಕಥಾ ಸಂಪಾದಕ ಅನಂತ ಪೈ, ರಿkುೕ ಮ್ಯಾಗಜಿನ್‌ನ ಮುಖ್ಯ ಸಂಪಾದಕ ರಾವೂಫ್ ಅಹಮದ್ ಇನ್ನಿತರ ಪ್ರಮುಖರ ಕುರಿತ ಮಾಹಿತಿಯನ್ನು ‘ಹೊರನಾಡ ಸಂಗಾತಿ’ ಹೊಂದಿದೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications