ಕ್ಯಾಲಿಫೋರ್ನಿಯಾದಲ್ಲಿ ಕ್ರಿಕೆಟ್‌ ಕೋಚಿಂಗ್‌ ಕ್ಯಾಂಪ್‌

ಕ್ಯಾಲಿಫೋರ್ನಿಯಾ: ಕ್ರಿಕೆಟ್‌ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಕ್ರಿಕೆಟ್‌ ಪ್ರಿಯರಿಗೆ ತರಬೇತಿ ನೀಡುವ ಉದ್ದೇಶದಿಂದ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಹೆಸರಾಂತ ಸ್ಪಿನ್‌ ಬೌಲರ್‌ ಬಿಷನ್‌ ಸಿಂಗ್‌ ಬೇಡಿ ಕ್ಯಾಲಿಫೋರ್ನಿಯಾಕ್ಕೆ ಭೇಟಿ ನೀಡುತ್ತಿದ್ದಾರೆ.

ದಕ್ಷಿಣ ಕ್ಯಾಲಿಫೋರ್ನಿಯಾ ಕ್ರಿಕೆಟ್‌ ಅಸೋಸಿಯೇಷನ್‌ನ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಲು ಆಗಸ್ಟ್‌ 11ರಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆವರೆಗೆ ಕೋಚಿಂಗ್‌ ಕಾರ್ಯಕ್ರಮ ನಡೆಯಲಿದೆ. ಎಲ್ಲ ಕ್ರಿಕೆಟ್‌ ಪ್ರಿಯರಿಗೂ ಕಾರ್ಯಕ್ರಮಕ್ಕೆ ಬರಲು ಅವಕಾಶವಿದೆ.

ಆಗಸ್ಟ್‌ 11ರಂದೇ ಬೆಳಗ್ಗೆ (at Airtel Plaza Hotel, 7277 Valjean Ave. Van Nuys, CFA 91406) 8.30ಕ್ಕೆ ಬಿಷನ್‌ಸಿಂಗ್‌ ಬೇಡಿಯವರ, ಸ್ಪಿನ್‌ ಸ್ಕೂಲ್‌ಗೆ ನಿಧಿ ಸಂಗ್ರಹ ಕಾರ್ಯ ನಡೆಯಲಿದೆ. ಕ್ರಿಕೆಟ್‌ ಪಟುಗಳಾದ ಶ್ರೀಕಾಂತ್‌, ಯೋಗ್‌ರಾಜ್‌ ಸಿಂಗ್‌, ಅಂತರರಾಷ್ಟ್ರೀಯ ಅಂಪೈರ್‌ ರಮಣಿ ಮತ್ತು ರಾಜೀಂದರ್‌ಸಿಂಗ್‌ ಘಾೖ ಮತ್ತಿತರರ ಹಾಜರಿಯನ್ನು ಈ ಸಂದರ್ಭದಲ್ಲಿ ನಿರೀಕ್ಷಿಸಲಾಗಿದೆ. ಆಗಸ್ಟ್‌ 10ರಂದು ಇನ್ನೊಂದು ಫಂಡ್‌ ರೈಸರ್‌ (at Star of India restaurant in San Diego ಕಾರ್ಯಕ್ರಮ ಆಯೋಜಿಸಲಾಗಿದೆ.

ವೂಡ್ಲಿ (Woodley, Van Nuys, CA) ಕ್ರಿಕೆಟ್‌ ಫೀಲ್ಡ್‌ನಲ್ಲಿ ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಯಿಂದ 2 ಗಂಟೆ ವರೆಗೆ ಕೋಚಿಂಗ್‌ ಇರುತ್ತದೆ. ಹೆಚ್ಚಿನ ಮಾಹಿತಿಗೆ ದಕ್ಷಿಣ ಕ್ಯಾಲಿಫೋರ್ನಿಯಾದ ಕ್ರಿಕೆಟ್‌ ಅಸೋಸಿಯೇಷನ್‌ನ ಉಪಾಧ್ಯಕ್ಷ ರಿಗೆ ಫೋನಾಯಿಸಬಹುದು : 818 346 4975/ 818 717 1162 ಅಥವಾ 818 209 9627. Email : [email protected], WebSite: www.atoctours.com. Fax: 818 883 4624 ರಾಜ್‌ಘಾೖ: 760 471 5383/ 858 538 0989. Email :[email protected], ನದೀಮ್‌ ಯೂಸಫ್‌ : 661 284 4055 ಅಥವಾ 661 251 6531.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+