ಡಿ.28- BMSCE AAA
ಬಿಎಂಎಸ್ ಕಾಲೇಜ್ ಆಫ್ ಅಮೆರಿಕನ್ ಅಲ್ಯೂಮ್ನಿ ಅಸೋಸಿಯೇಶನ್ (ಬಿಎಂಎಸ್‌ಸಿಇ ಎಎಎ) ನ BMS Alumni Day ಕಾರ್ಯಕ್ರಮ ಪಟ್ಟಿ ಈಗ ಸಿದ್ಧ . ಡಿಸೆಂಬರ್ 28 ರ ಶುಕ್ರವಾರ ಸಂಜೆ 5.30 ಕ್ಕೆ, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ಪ್ರಾರಂಭ. ಗೆಳೆತನ ನವೀಕರಿಸಲು, ನೆನಪುಗಳಿಗೆ ಇಸ್ತ್ರಿ ಹಾಕಲು ಸಿದ್ಧರಿದ್ದೀರಲ್ಲ !
ಮೊದಲಿಗೆ ಚಹಾ. ಆನಂತರ ಬಿಎಂಎಸ್‌ಸಿಇ ಪ್ರಾಂಶುಪಾಲರಾದ ಡಾ। ಎ. ಶ್ರೀನಿವಾಸನ್ ಅವರಿಂದ ಸ್ವಾಗತ. ಬಿಎಂಎಸ್‌ಸಿಇ ಎಎಎ ಉದ್ದೇಶ, ಗುರಿ, ಸಾಧನೆಗಳ ಕುರಿತು ಬಿಎಂಎಸ್‌ಸಿಇ ಎಎಎ, ಲಾಸ್ ಏಂಜಲೀಸ್‌ನ ಅಧ್ಯಕ್ಷರಾದ ಕೆ.ಎನ್. ಮೂರ್ತಿ ಹಾಗೂ ಲೋವಾ ಸ್ಟೇಟ್ ಯೂನಿವರ್ಸಿಟಿಯ ಪ್ರೊಫೆಸರ್ ಡಾ। ವಿಜಯ್ ವಿಠ್ಠಲ್ ಮಾತನಾಡುವರು.
ಕಾರ್ಯಕ್ರಮ ಕೇವಲ ಭಾಷಣಗಳಿಗೆ ಮಾತ್ರ ಮೀಸಲಲ್ಲ , ಮನರಂಜನೆ ಕಾರ್ಯಕ್ರಮಗಳೂ ಇವೆ. ನನ್ನ ಪ್ರೀತಿಯ ಹುಡುಗಿ ಖ್ಯಾತಿಯ ಗಾಯಕ ರಾಮ್‌ಪ್ರಸಾದ್ (ಯುಎಸ್‌ಎ) ಹಾಗೂ ಕೆ.ಎಸ್. ಸುರೇಖ ಅವರಿಂದ ಲಘು ಸಂಗೀತ ಕಾರ್ಯಕ್ರಮವಿದೆ.
ಬಿಎಂಎಸ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ನ್ಯಾಯಮೂರ್ತಿ ಸಿ.ಎನ್. ಅಶ್ವತ್ಥನಾರಾಯಣ ರಾವ್ ಹಾಗೂ ಶಿಕ್ಷಣ ತಜ್ಞ ಡಾ। ಎಚ್. ನರಸಿಂಹಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಡಾ। ವಿಜಯ್ ವಿಠ್ಠಲ್, Messrs ಕೆ.ಎನ್. ಮೂರ್ತಿ, ಬಿ.ಎ. ನಂಜಪ್ಪ , ಶಿವರಾಂ ಹಾಗೂ ಎಸ್.ಎ.ರಾಮು ಅವರು ನೀಡುವ ಸ್ಕಾಲರ್‌ಷಿಪ್ ವಿತರಣೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಬಿಎಂಎಸ್‌ಸಿಇ ಎಎಎಗೆ ಸಲ್ಲಿಸಿದ ವಿಶೇಷ ಕೊಡುಗೆಗಾಗಿ ಡಾ। ಮುರುಗೇಶ್ ಮುದಲಿಯಾರ್, ಡಾ। ಭಾಸ್ಕರ್ ನಾಯ್ಡು ಹಾಗೂ ಎನ್. ಚೌಡಯ್ಯ ಅವರಿಗೆ Messrs ಕೆ.ಎನ್. ಮೂರ್ತಿ ಹಾಗೂ ಬಿ.ಎ. ನಂಜಪ್ಪ ಅವರಿಂದ ಸ್ಮರಣ ಫಲಕ ಸಲ್ಲಲಿದೆ.
ಡಾ। ರಾಧಾಕೃಷ್ಣ ಅವರ ವಂದನಾರ್ಪಣೆಯಾಂದಿಗೆ ಕಾರ್ಯಕ್ರಮ ಮುಕ್ತಾಯ. ಗೆಳೆಯರೊಂದಿಗೆ ನೆನಪುಗಳ ಹಂಚಿಕೊಳ್ಳುತ್ತ ಹೊಟ್ಟೆ ತುಂಬಿಸಿಕೊಳ್ಳಬಹುದು. . ಬಿಎಂಎಸ್‌ಸಿಇ ಎಎಎ ಡಿನ್ನರ್ ವ್ಯವಸ್ಥೆ ಮಾಡಿದೆ.
ಕಾರ್ಯಕ್ರಮದ ಬಗೆಗೆ ಇನ್ನೂ ಹೆಚ್ಚಿನ ವಿವರಗಳನ್ನು ಬೆಂಗಳೂರಿನಲ್ಲಿನ ಬಿಎಂಎಸ್‌ಸಿಇ ಎಎಎ ಪ್ರತಿನಿಧಿ ಜಿ. ಶ್ರೀನಿವಾಸ್ ಅವರಿಂದ ಪಡೆಯಬಹುದು. ಶ್ರೀನಿವಾಸ್ ಅವರ ಇ- ಮೇಲ್ : seena74@hotmail.com
BMS Alumni Day ವರ್ಷಕ್ಕೊಂದು ಸಾರಿ ನಡೆಯುವ ಹಬ್ಬ. ಇದು ಬಿಎಂಎಸ್‌ಸಿಇ ಎಎಎ ಸದಸ್ಯರು ಒಟ್ಟಿಗೆ ಸೇರಲೊಂದು ವಾರ್ಷಿಕ ವೇದಿಕೆ. ಹಬ್ಬ ಪಸಂದಾಗಿರಲಿ. ನಿಮ್ಮ ನೆನಪಿನ ಬುತ್ತಿಗೊಂದು ನವಿಲುಗರಿ ಸೇರ್ಪಡೆಯಾಗಲಿ!
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಬಿಎಂಎಸ್‌ಸಿಇ ಎಎಗೆ ಬಂದ ವಸಂತ ; ಡಿ.28
‘ಬಿಎಂಎಸ್’ ಎನ್ನುವ ಪ್ರತಿಭೆಯ ಕಾರ್ಖಾನೆ!
ಬಿಎಂಎಸ್ ಕಾಲೇಜಿನ ವಿಶ್ವನಾಥ್ ಮೇಷ್ಟ್ರು