ಅ.14ರಂದು ಭೂಮಿಕಾ ಅಂಗಳದಲ್ಲಿ ಹಸುರುಹೊನ್ನಿನ ಅನಾವರಣ

ಭೂಮಿಕಾದ ತಿಂಗಳ ಅಂಗಳದಲ್ಲಿ ಈ ಬಾರಿಯ ಚರ್ಚೆಯ ವಿಷಯ ಡಾ. ಬಿ.ಜಿ.ಎಲ್‌. ಸ್ವಾಮಿ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ. ಅಕ್ಟೋಬರ್‌ 14ರ ಶನಿವಾರ ನಡೆಯುವ ಈ ಸಂವಾದ ಗೋಷ್ಠಿಗೆ ಸಾಹಿತ್ಯ ಪ್ರಿಯರೆಲ್ಲರಿಗೂ ಸ್ವಾಗತ, ಗೆಳೆಯರನ್ನೂ ಕರೆತನ್ನಿ!

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರು ಡಾ. ಎಂ. ಕೆ. ಪ್ರಭಾಕರ್‌. ರಾಕ್‌ವಿಲ್ಲೆಯ ಸಮುದಾಯಭವನದಲ್ಲಿ (Community Center, Rockville, MD) ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗುವ ಕಾರ್ಯಕ್ರಮಕ್ಕೆ ಐದು ನಿಮಿಷ ಮುಂಚಿತವಾಗಿ ಬಂದರೆ ಸಂತೋಷ.

ಹಸುರು ಹೊನ್ನಿನ ಡಾ. ಬಿ.ಜಿ.ಎಲ್‌. ಸ್ವಾಮಿ

ನಿಮಗೆ ಡಿ.ವಿ.ಗುಂಡಪ್ಪ ಗೊತ್ತಲ್ಲ ! ಮಂಕುತಿಮ್ಮನ ಕಗ್ಗ ಎಂದರೆ ತಕ್ಷಣಕ್ಕೆ ನೆನಪಾದೀತು. ಕನ್ನಡದ ಭಗವದ್ಗೀತೆ ಎಂದು ಹೆಸರಾದ ಕಗ್ಗದ ಕವಿ ಡಿ.ವಿ.ಜಿ. ಅವರ ಸುಪುತ್ರ ಬಿ.ಜಿ.ಎಲ್‌. ಸ್ವಾಮಿ. ಅಪ್ಪನಂತೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರ
ಶಸ್ತಿಯನ್ನು ಪಡೆದ ಸ್ವಾಮಿ, ಕನ್ನಡದ ಅಪರೂಪದ ಲೇಖಕರಲ್ಲೊಬ್ಬರು. ಬೆಂಗಳೂರು ಗುಂಡಪ್ಪ ಲಕ್ಷ್ಮಿನಾರಾಯಣ ಸ್ವಾಮಿ ಅವರ ಪೂರ್ಣ ಹೆಸರು.

ಮದರಾಸು ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿದ್ದ ಸ್ವಾಮಿ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಲ್ಲಿದರು. ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ ಅವರು ಕನ್ನಡ ಮತ್ತು ತಮಿಳು ಸಾಹಿತ್ಯದಲ್ಲಿ ಕೊಡು ಕೊಳ್ಳುವಿಕೆಯನ್ನು ಬೆಂಬಲಿಸಿದವರು.

ಸಸ್ಯಶಾಸ್ತ್ರವೆಂದರೆ, ಕೇವಲ ಶುಷ್ಕ ಶಾಸ್ತ್ರಸಾಹಿತ್ಯವಲ್ಲ ಎನ್ನುವುದನ್ನು ಹಸುರು ಹೊನ್ನು ಕೃತಿಯ ಮೂಲಕ ಸಾಧಿಸಿ ತೋರಿಸಿದ ಖ್ಯಾತಿ ಬಿ.ಜಿ.ಎಲ್‌. ಸ್ವಾಮಿ ಅವರದು. ಎದುರಿಗೆ ಕೂತು ಕಥೆ ಹೇಳುವಂತೆ ಬರೆಯುವ ಸ್ವಾಮಿ ಅವರ ಹಸುರು ಹೊನ್ನು ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ. ಸ್ವಾಮಿ ಅವರ ಇತರ ಕೃತಿಗಳಾದ ಪ್ರಾಧ್ಯಾಪಕನ ಪೀಠದಲ್ಲಿ, ತಮಿಳು ತಲೆಗಳ ನಡುವೆ, ನಡೆದಿದೆ ಬಾಳ ಕಾವೇರಿ, ಕಾಲೇಜು ರಂಗ, ಕಾಲೇಜು ತರಂಗ ಕೃತಿಗಳಲ್ಲಿ ಕೂಡ ಎದ್ದು ಕಾಣುವುದು ಅವುಗಳ ಓದಿಸಿಕೊಳ್ಳುವ ಗುಣವೇ.

ಭೂಮಿಕಾದ ಶನಿವಾರದ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ್‌ ಅವರು ಬಿಜಿಎಲ್‌ ಅವರ ಸಮಗ್ರ ಕೃತಿಯನ್ನು ವಿಮರ್ಶಿಸಿ, ವೈಜ್ಞಾನಿಕ ಕನ್ನಡಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಲಿದ್ದಾರೆ. ಇದು ಏಕಮುಖ ಭಾಷಣ ಕಾರ್ಯಕ್ರಮವಲ್ಲ. ನಿಮ್ಮ ಸಂಶಯಗಳಿಗೆ ಉತ್ತರ ನೀಡುವ ಯತ್ನವೂ ನಡೆಯುತ್ತದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ, ಡಾ. ವಿಜಯ ಮನೋಹರ(301-871-2234) ಅವರಿಗೊಂದು ಫೋನ್‌ ಹಚ್ಚಿ.

ಕಾರ್ಯಕ್ರಮದ ದಾರಿಕ್ಕೆ ಇಲ್ಲಿದೆ :

From Beltway to I270N to Exit 6
From I270 S to Exit # 6 which is Rt 28 (W.Montgomery Ave) towards Rockville.
This becomes Viers Mill Rd (Rte 586)
Make left at Norbeck Rd (Rt 28)
After 5 traffic lights, make right on to Bauer Drive.
Community center is on your left
Tel: 3014684015

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+