ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಂಗಾಟುಂಗಿ ಚುನಾವಣೆಯಲ್ಲಿ ‘ಅಕ್ಕ’ ನಿರ್ದೇಶಕರಾದವರು

By Staff
|
Google Oneindia Kannada News

ಸನ್ಮಾನ್ಯ ಅಕ್ಕ ಸದಸ್ಯರೆ ಹಾಗೂ ಕನ್ನಡಿಗರೆ,

ವಾಷಿಂಗ್ಟನ್ನಿನ ಅಮೆರಿಕ ಕನ್ನ ಕೂಟಗಳ ಆಗರ (ಅಕ್ಕ) ಕ್ಕೆ ಇನ್ನು 4 ವರ್ಷಗಳ ಅವಧಿಗೆ, ಅಂದರೆ 2001ರಿಂದ 2004ರವರೆಗೆ ಆಯ್ಕೆಯಾಗಿರುವ ನಿರ್ದೇಶಕರಿವರು-

  • ದಕ್ಷಿಣ ವಿಭಾಗದಿಂದ ಹಳೆಕೋಟೆ ಎನ್‌. ವಿಶ್ವಾಮಿತ್ರ
  • ಪಶ್ಚಿಮ ಕರಾವಳಿ ವಿಭಾಗದಿಂದ ಎಂ.ಕೃಷ್ಣಮೂರ್ತಿ
  • ಪಶ್ಚಿಮ ಮಧ್ಯ ವಿಭಾಗದಿಂದ ಅಮರ್‌ನಾಥ್‌ ಗೌಡ
  • ಪೂರ್ವ ವಿಭಾಗದಿಂದ ಎಚ್‌.ಎನ್‌.ಕೇಶವ ಬಾಬು.
ಕಳೆದ ಗುರುವಾರ, ಫೆಬ್ರವರಿ 22ರಂದು ‘ಅಕ್ಕ’ದ ಈ ಐತಿಹಾಸಿಕ ಚುನಾವಣೆಯ ಮತ ಎಣಿಕೆ ನಡೆಯಿತು. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಕರ್ನಾಟಕ ಸಾಂಸ್ಕೃತಿಕ ಒಕ್ಕೂಟದ ಚುನಾವಣಾ ಅಧಿಕಾರಿ ಬಿ.ಎನ್‌.ನಾಗರಾಜ್‌ ಹಾಗೂ ಇದೇ ಸಂಸ್ಥೆಯ ಹಿಂದಿನ ಅಧ್ಯಕ್ಷ ಮಲ್ಲಪ್ಪ ಯೆರಸಿ ಮತ ಎಣಿಕೆಯಲ್ಲಿ ನನಗೆ ಸಹಕಾರ ನೀಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು.

ಈ ಚುನಾವಣೆಯಲ್ಲಿ ತಾಳ್ಮೆ ತಾಳಿ, ಅರ್ಥಮಾಡಿಕೊಂಡು ಸಹಕರಿಸಿದ ನನ್ನ ಸಹವರ್ತಿಗಳಾದ ಡಾ.ಎಚ್‌.ಕೆ.ಚಂದ್ರಶೇಖರ್‌ ಹಾಗೂ ಡಾ. ನರಸಿಂಗರಾವ್‌, ಬೈ- ಲಾಸ್‌ ಕಮಿಟಿ ಅಧ್ಯಕ್ಷರಾದ ಎಚ್‌.ವಿ.ಕೃಷ್ಣಮೂರ್ತಿ, ವ್ಯವಸ್ಥಾಪಕರು, ನಿರ್ದೇಶಕರು ಮತ್ತು ಟ್ರಸ್ಟಿಗಳಿಗೆ; ಎಲ್ಲಕ್ಕೂ ಮಿಗಿಲಾಗಿ ಈ ಚುನಾವಣೆಯನ್ನು ಚರಿತ್ರಾರ್ಹವಾಗಿಸಿದ ಚುನಾಣೆಯ ಸ್ಪರ್ಧಾಳುಗಳು ಹಾಗೂ ಮತದಾರರಿಗೆ ನನ್ನ ಧನ್ಯವಾದಗಳು.

ಸದಸ್ಯರ ಒಮ್ಮತದಿಂದ ಉತ್ತಮ ನಿರ್ಣಯಗಳನ್ನು ಕೈಗೊಂಡು, ಅಳುಕು, ಸ್ವ- ಅನುಮಾನ ಬಿಟ್ಟು ‘ಅಕ್ಕ’ ದಿಟ್ಟ ಹೆಜ್ಜೆಗಳನ್ನು ಇಡಲಿದೆ ಎಂಬ ವಿಶ್ವಾಸ ನನ್ನದು.

-ವಿಶ್ವೇಶ್ವರ ದೀಕ್ಷಿತ್‌
ಚುನಾವಣಾ ಆಯುಕ್ತರು, ‘ಅಕ್ಕ’

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X