ಯಾದಗಿರಿ: ಚಿಂತನಹಳ್ಳಿ ಜಲಪಾತ, ಸಿದ್ದಲಿಂಗೇಶ್ವರರ ಐಕ್ಯಸ್ಥಳ ಕಾಣಿರಿ
ಕಲ್ಲು, ಬಂಡೆಗಳ ನಡುವೆ ಹರಿದು ಬರುವ ಜಲಧಾರೆ. ಧುಮ್ಮಿಕಿ ಹರಿದು ಸಾಗುವ ಹಾಲ್ನೋರೆ. ಮಳೆಗಾಲದಲ್ಲಿ ಭೋರ್ಗರೆದರೆ. ವರ್ಷಪೂರ್ತಿ ಶಾಂತವಾಗಿ ಜುಳು, ಜುಳು ಅಂಥ ಹರಿಯುವ ಗಂಗೆ. ಈ ಜಲಸೌಂದರ್ಯ ಕಾಣಸಿಗುವುದು ಯಾದಗಿರಿ ತಾಲೂಕಿನ ಚಿಂತನಹಳ್ಳಿ ಗ್ರಾಮದ ಬಳಿ.
ಜಿಲ್ಲಾ ಕೇಂದ್ರ ಯಾದಗಿರಿಯಿಂದ ಸುಮಾರು 35 ಕಿಲೋ ಮೀಟರ್ ಅಂತರದಲ್ಲಿ ಚಿಂತನಹಳ್ಳಿ ಗ್ರಾಮವಿದೆ. ಹಳ್ಳಿಯಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಹಚ್ಚ ಹಸಿರು ಆವರಸಿಕೊಂಡಿರುವ ಬೆಟ್ಟ, ಸುಂದರ ಗಿರಿಗಳಿವೆ.
ಹಸಿರು ತಪ್ಪಲಿನ ಮಧ್ಯೆ ಶರಣ ಗವಿ ಸಿದ್ದಲಿಂಗೇಶ್ವರರ ಐಕ್ಯಸ್ಥಳವಿದೆ. ಮಠಕ್ಕೆ ಆಗಮಿಸುವ ಭಕ್ತರು, ಹಸಿರು ಹೊದ್ದು ಮಲಗಿರುವ ಗಿರಿಶಿಖರ, ಜಲಧಾರೆ ಕಂಡು ಸಂಭ್ರಮಿಸುತ್ತಾರೆ.

ಶರಣ ಸಿದ್ದಲಿಂಗೇಶ್ವರರ ಸನ್ನಿಧಿ
ನೂರಾರು ವರ್ಷಗಳ ಹಿಂದೆ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ವನಗುಂಟಿ ಗ್ರಾಮದಲ್ಲಿ ಜನಿಸಿದ ಶರಣ ಸಿದ್ದಲಿಂಗೇಶ್ವರರು, ಲೋಕ ಪರ್ಯಟನೆ ಕೈಗೊಂಡರಂತೆ. ತಮ್ಮ ಕೊನೆಯ ಕಾಲಘಟ್ಟದಲ್ಲಿ ಚಿಂತನಹಳ್ಳಿ ಹೊರವಲಯದ ಬೆಟ್ಟದಲ್ಲಿರುವ ಕಲ್ಲಿನ ಗುಹೆಯಲ್ಲಿ ನೆಲೆಸಿದರು. ಅದೇ ಗುಹೆಯಲ್ಲಿ ಕಾಲವಾದರಂತೆ.

ಗವಿ ಸಿದ್ದಲಿಂಗೇಶ್ವರ ಐಕ್ಯಸ್ಥಳ
ಅಲ್ಲಿನಿಂದ ಗವಿ ಸಿದ್ದಲಿಂಗೇಶ್ವರ ಎಂದು ಹೆಸರಾಯಿತು ಎಂಬುದು ಹಿರಿಯರ ಮಾತು. ದರ್ಶನಕ್ಕೆ ತೆರಳುವ ಭಕ್ತರು ಗವಿಯ ಮೇಲ್ಭಾಗದಲ್ಲಿ ಹರಿಯುವ ಜಲಧಾರೆಯ ಅಡಿಯಲ್ಲಿ ಮಿಂದೆದ್ದು ಹೋಗಬೇಕು. ಯಾದಗಿರಿ ಜಿಲ್ಲೆಯೂ ಆಗಾಗ ಬರಗಾಲಕ್ಕೆ ತುತ್ತಾಗುವುದು ಸಾಮಾನ್ಯ. ಆದರೆ ಗವಿ ಸಿದ್ದಲಿಂಗೇಶ್ವರ ಮಠದ ಬಳಿಯ ನೀರಿನ ತೊರೆ ಹರಿಯುವುದನ್ನು ಮಾತ್ರ ನಿಲ್ಲಿಸಿಲ್ಲ.

ಚಿಂತನಹಳ್ಳಿಯ ಮಠ
ಚಿಂತನಹಳ್ಳಿಯ ಮಠ ಹಾಗೂ ಜಲಪಾತ ನೋಡಲು ರಾಜ್ಯದ ವಿವಿಧ ಜಿಲ್ಲೆ ಮತ್ತು ನೆರೆಯ ಸೀಮಾಂಧ್ರ, ತೆಲಂಗಾಣದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದರೆ ಧಾರ್ಮಿಕ ಹಾಗೂ ಪ್ರವಾಸಿ ತಾಣದಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ.

ಕನಿಷ್ಠ ಮೂಲಸೌಕರ್ಯಗಳಿಲ್ಲ
ಇಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ ಇದು ಭಕ್ತರು ಮತ್ತು ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿಯವರೆಗೆ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಗೋಲ್ಮಾಲ್ಗೆ ಬಲಿಯಾಗಿವೆ. ಐತಿಹಾಸಿ ಧಾರ್ಮಿಕ, ನಿಸರ್ಗದತ್ತ ಸ್ಥಳಕ್ಕೆ ಅಭಿವೃದ್ಧಿಯ ಕಾಯಕಲ್ಪಬೇಕಿದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications