ಸೈಟ್ ಹಂಚದೆ ವಂಚನೆ, ಬಿಜೆಪಿ ಮುಖಂಡರ ವಿರುದ್ಧ ಎಫ್ಐಆರ್

By: ಯಾದಗಿರಿ ಪ್ರತಿನಿಧಿ
Subscribe to Oneindia Kannada

ಯಾದಗಿರಿ, ನವೆಂಬರ್ 14: ಅವರೆಲ್ಲ ಕನಸಿನ ಗೋಪುರಕ್ಕಾಗಿ ಕಷ್ಟಪಟ್ಟು ದುಡ್ಡು ಕೊಟ್ಟಿದ್ದರು. ಸೈಟ್​ಗಾಗಿ ಹಣ ಪಡೆದು ಮೂರು ವರ್ಷಗಳೇ ಕಳೆದಿವೆ. ಆದರೆ, ನಿವೇಶನ ಮಾತ್ರ ನೀಡದೆ ವಂಚಿಸಲಾಗ್ತಿದೆ. ಹೀಗಾಗಿ, ಯಾದಗಿರಿ ಬಿಜೆಪಿ ಮುಖಂಡ ಸೇರಿ ಇಬ್ಬರ ವಿರುದ್ಧ ಎಫ್​ಐಆರ್​​​​​ ದಾಖಲಾಗಿದೆ.

ಯಾದಗಿರಿ ಜಿಲ್ಲಾ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರು ಹಾಗೂ ಬಾಪುಗೌಡ ಮಾಡಗಿ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಪಿ ಡೆವಲಪರ್ಸ್​​​​​ ಹೆಸರಿನಲ್ಲಿ ಸುಮಾರು 50ಕ್ಕೂ ಹೆಚ್ಚು ಜನರಿಂದ ಸೈಟ್​ ನೀಡೋದಾಗಿ ಕಂತಿನಲ್ಲಿ ಹಣ ಪಡೆದಿದ್ದಾರಂತೆ.

ತಿಂಗಳಿಗೆ ಹದಿನೈದು ನೂರು ರೂಪಾಯಿಯಂತೆ 65 ಕಂತುಗಳಲ್ಲಿ 97,500 ರೂಪಾಯಿ ಪಡೆದಿದ್ದಾರೆ. ಐದು ವರ್ಷಗಳ ಬಳಿಕ ಗ್ರಾಹಕರಿಗೆ ಹೆಸರಿಗೆ ಸೈಟ್​​ ನೋಂದಣಿ ಮಾಡದೆ ವಂಚಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ನಿವೇಶನ ನೀಡುವಂತೆ ಒತ್ತಾಯಿಸುತ್ತಿದ್ರೂ ಸುಳ್ಳು ಹೇಳುತ್ತ ಸಾಗುತ್ತಿದ್ದಾರಂತೆ.

 ಯಾದಗಿರಿ ನಗರ ಠಾಣೆಯಲ್ಲಿ ದೂರು

ಯಾದಗಿರಿ ನಗರ ಠಾಣೆಯಲ್ಲಿ ದೂರು

ಸೈಟ್​​ಗಾಗಿ ತುಂಬಿದ ಹಣ ಚೀಟಿ ತೋರಿಸುತ್ತಿರುವ ಮಹಿಳೆಯರು. ಸಂಪೂರ್ಣವಾಗಿ ಹಣ ಕಟ್ಟಿದ್ರೂ ಕೈ ತಲುಪದ ನಿವೇಶನಗಳು. ಸೈಟ್​ ನೀಡದೆ ವಂಚಿಸಿದ ಆರೋಪದಡಿ ಬಿಜೆಪಿ ಮುಖಂಡನ ವಿರುದ್ಧ ಎಫ್ಐಆರ್​. ಯಾದಗಿರಿ ಜಿಲ್ಲಾ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರು ಹಾಗೂ ಬಾಪುಗೌಡ ಮಾಡಗಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಪಿ ಡೆವಲಪರ್ಸ್​​​ ಮೂಲಕ ವಂಚನೆ

ಬಿಪಿ ಡೆವಲಪರ್ಸ್​​​ ಮೂಲಕ ವಂಚನೆ

ಅದು 2009ರ ಕಾಲಘಟ್ಟ. ಯಾದಗಿರಿ ನೂತನ ಜಿಲ್ಲೆಯಾದ ಬಳಿಕ ರಿಯಲ್​​ ಎಸ್ಟೇಟ್​​​ ದಂಧೆ ಜೋರಾಗಿ ನಡೆದಿತ್ತು. ಇದೇ ವೇಳೆ ಬಿಪಿ ಡೆವಲಪರ್ಸ್​​​ ಮೂಲಕ ಬಿಜೆಪಿ ಮುಖಂಡ ವೆಂಕಟರೆಡ್ಡಿ ಅಬ್ಬೆತುಮಕೂರು ಹಾಗೂ ಬಾಪುಗೌಡ ಮಾಡಗಿ ನಿವೇಶನ ಆಸೆ ತೋರಿಸಿ ಜನರಿಗೆ ಜಾಲ ಬೀಸಿದ್ರು. ಆಗ ನಗರದ ಹೊಸಹಳ್ಳಿ ಕ್ರಾಸ್​​​ ಬಳಿಯಿರೋ ಹೌಸಿಂಗ್​ ಬೋರ್ಡ್​​ ಕಾಲೋನಿಯ ಸುತ್ತಮುತ್ತ ಸ್ಥಳ ತೋರಿಸಿದ್ರು.

420 ಕೇಸ್​ ದಾಖಲಿಸಲಾಗಿದೆ

420 ಕೇಸ್​ ದಾಖಲಿಸಲಾಗಿದೆ

2009ರಿಂದ 2014ರವರೆಗೆ ಸಾಕಷ್ಟು ಜನ ಕಂತು ಕಟ್ಟಿದ್ದು ಸಂಪೂರ್ಣ ಹಣ ಪಾವತಿಸಿದ್ದಾರೆ. ಆದ್ರೆ ಇನ್ನೂವರೆಗೂ ಸೈಟ್​​ ಮಾತ್ರ ಗ್ರಾಹಕರ ಕೈಗೆ ಸಿಕ್ಕಿಲ್ಲ. ಸೈಟ್​ಗಾಗಿ ಹಣ ಕಟ್ಟಿದವರಿಗೆ ಬಿಜೆಪಿ ಮುಖಂಡ ವೆಂಕಟರೆಡ್ಡಿ ಅಬ್ಬೆತುಮಕೂರನ್ನ ಸಂಪರ್ಕಿಕ್ಕೆ ಸಿಗುತ್ತಿಲ್ಲವಂತೆ. ಇನ್ನೂ ಎಫ್​ಐಆರ್​​ ಬಗ್ಗೆ ಪ್ರತಿಕ್ರಿಯಿಸಿದ ಯಾದಗಿರಿ ಎಸ್ಪಿ, ಇಬ್ಬರ ಮೇಲೆ 420 ಕೇಸ್​ ದಾಖಲಿಸಲಾಗಿದೆ.

ನಗರದ ಪ್ರದೇಶದಲ್ಲಿ ನಮ್ಮದೊಂದು ಸೂರಿರಲಿ

ನಗರದ ಪ್ರದೇಶದಲ್ಲಿ ನಮ್ಮದೊಂದು ಸೂರಿರಲಿ

ನಗರದ ಪ್ರದೇಶದಲ್ಲಿ ನಮ್ಮದೊಂದು ಸೂರಿರಲಿ ಎಂಬ ಆಸೆಯಿಂದ ಹಣ ಕಟ್ಟಿದವರು ಚಿಂತೇಗಿಡಾಗಿದ್ದಾರೆ. ಜನರ ಕನಸನ್ನೇ ಬಂಡವಾಳ ಮಾಡಿಕೊಂಡ ಬಿಪಿ ಡೆವಲಪರ್ಸ್​​​ ಸೈಟ್​ ನೀಡದೇ ಕೈ ಎತ್ತುತ್ತಿದೆ. ಸದ್ಯ ಬಿಜೆಪಿ ಮುಖಂಡ ಸೇರಿ ಮತ್ತೋರ್ವನ ವಿರುದ್ಧ ದೂರು ದಾಖಲಾಗಿದ್ದು ಗ್ರಾಹಕರಿಗೆ ನ್ಯಾಯಸಿಗುವಂತಾಗಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Yadgir :BJP leaders of district unit allegedly involved in real estate fraud and not distributed sites to the poor villagers. FIR against BJP leader filed.
Please Wait while comments are loading...