ಯಾದಗಿರಿಯಲ್ಲಿ ಧಾರಾಕಾರ ಮಳೆ; ಗೋಡೆ ಕುಸಿದು ಮಹಿಳೆ ಸಾವು

ಯಾದಗಿರಿ, ಜುಲೈ 21: ಯಾದಗಿರಿ ಜಿಲ್ಲೆಯಲ್ಲಿ ನಿನ್ನೆ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

Recommended Video

      Elephant : ಈ ಆನೆಯ ಕೋಪ ನೋಡಿದ್ರೆ ಭಯ ಆಗುತ್ತೆ | Angry Elephant found in Bandipur National Park | Oneindia Kannada

      ಬಟ್ಟೆ ತೊಳೆಯುವಾಗ ಸಾವಿತ್ರಮ್ಮ ಎಂಬ ವೃದ್ಧೆ ಮೇಲೆ ಮನೆಯ ಗೋಡೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದರೊಂದಿಗೆ, ಭಾರಿ ಮಳೆಯಿಂದಾಗಿ ಶಹಾಪುರ ಮಾರ್ಗದ ರಸ್ತೆಯ ರೈಲ್ವೆ ಸೇತುವೆಯ ರಸ್ತೆಯೂ ಕುಸಿದು ಬಿದ್ದಿದೆ. ರಸ್ತೆ ಕುಸಿತದ ಹಿನ್ನೆಲೆಯಲ್ಲಿ ಮುಂಜಾಗ್ರತೆಗಾಗಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.

      ಯಾದಗಿರಿ ತಾಲೂಕಿನ ಹೊಸಳ್ಳಿ ತಾಂಡಾದ ಸಮೀಪವಿರುವ ಗಿರಿನಗರ ಕಾಲೋನಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಯು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನಿರಂತರ ಮಳೆಯಾಗುತ್ತಿದ್ದು, ಮೂರು ದಿನಗಳಿಂದ ಗಿರಿನಗರ ಕಾಲೋನಿಯಲ್ಲಿ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಜನರು ಮಳೆಯ ಸಮಸ್ಯೆಯೊಂದಿಗೆ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ.

      Woman Dies By Wall Collapse Due To Heavy Rain In Yadagiri

      ಯಾದಗಿರಿಯ ಅಂಬೇಡ್ಕರ್ ನಗರದಲ್ಲೂ 6 ಮನೆಗಳಿಗೆ ನೀರು ನುಗ್ಗಿದೆ. ಹೊಸಳ್ಳಿ ಕ್ರಾಸ್​ನಲ್ಲಿ ತಗ್ಗು ಪ್ರದೇಶದ ಮನೆಯ ಪಾರ್ಕಿಂಗ್ ಜಾಗದಲ್ಲಿ ಭಾರಿ ಪ್ರಮಾಣದ ನೀರು ನುಗ್ಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+