ಮಂಚಕ್ಕೆ ಕರೆದ ಯಾದಗಿರಿ ಸ್ವಾಮೀಜಿ; ಚಾಟ್, ವಿಡಿಯೋ, ಆಡಿಯೋ ಔಟ್

Recommended Video

      ಮಂಚಕ್ಕೆ ಕರೆದ ಯಾದಗಿರಿ ಸ್ವಾಮೀಜಿ; ಚಾಟ್, ವಿಡಿಯೋ, ಆಡಿಯೋ ಔಟ್

      ಯಾದಗಿರಿ, ಸೆಪ್ಟೆಂಬರ್ 18: ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧ ಸ್ವಾಮೀಜಿಯ ಅಕ್ರಮ ಸಂಬಂಧವೊಂದು ಸುದ್ದಿಯಾಗಿದ್ದು, ಮಹಿಳೆಯನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದಾರೆ.

      ಆ ಸ್ವಾಮೀಜಿ ಬೇರಾರೂ ಅಲ್ಲ, ಜಿಲ್ಲೆಯ ಸುರಪುರದ ಹುಣಸಿಹೊಳಿ ಗ್ರಾಮದ ಕಣ್ವ ಪೀಠದ ಶ್ರೀ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿ. ಮೈಸೂರು ಮೂಲದ ನಂದಿನಿ ಎಂಬುವರ ಜೊತೆ ವಾಟ್ಸ್ ಆಪ್ ಮೂಲಕ ಅಸಭ್ಯಕರವಾಗಿ ಸಂಭಾಷಣೆ ನಡೆಸಿದ್ದು ಎನ್ನಲಾದ ಸುದ್ದಿ, ಚಿತ್ರಗಳು ಮತ್ತು ಆಡಿಯೋಗಳು ಅನಾಮಧೇಯ ವ್ಯಕ್ತಿಯಿಂದ ಹೊರ ಬಂದಿವೆ.

      ಮಹಿಳೆಯ ವಾಟ್ಸ್ ಆಪ್ ನಂಬರ್ ಸಂಪಾದಿಸಿದ ಸ್ವಾಮೀಜಿ ದೈಹಿಕ ಸಂಬಂಧ ಬೆಳೆಸುವಂತೆ ಆಹ್ವಾನ ನೀಡಿದ್ದಾರೆ. ಸಮಸ್ಯೆ ಹೇಳಿಕೊಳ್ಳುವ ನೆಪದಲ್ಲಿ ಬರುವಂತೆ ಕೇಳಿಕೊಂಡಿದ್ದಾರೆ. ಯಾರಿಗೂ ವಿಷಯ ಗೊತ್ತಾಗುವುದಿಲ್ಲ ಎಂದೂ ಭರವಸೆ ನೀಡಿ ಚಾಟ್ ಮಾಡಿದ್ದಾರೆ. ಆಕೆಗೆ ​ಫೋಟೋ, ವೀಡಿಯೋ, ಆಡಿಯೋಗಳನ್ನು ಕಳಿಸಿರುವುದು ಈಗ ವೈರಲ್ ಆಗಿವೆ.

      Vidyavaridhi Swamiji Illegal Relationship Audio Viral

      ಆದರೆ ಈ ಆಪಾದನೆಯನ್ನು ತಳ್ಳಿಹಾಕಿರುವ ಸ್ವಾಮೀಜಿ, ಮಹಿಳೆಯ ಪತಿ ವಿರುದ್ಧ ಹನಿಟ್ರ್ಯಾಪ್​​ ಆರೋಪ ಮಾಡಿದ್ದಾರೆ. ಮಠಕ್ಕೆ ಆಗದವರು ನನ್ನ ಹೆಸರನ್ನು ಕೆಡಿಸಲು ಹೀಗೆ ಮಾಡುತ್ತಿದ್ದಾರೆ. ನಾನು ಹೆಚ್ಚಾಗಿ ಮೊಬೈಲ್ ಬಳಸುತ್ತಿರಲಿಲ್ಲ. ನನ್ನ ಫೋನಿಗೆ ಲಾಕ್ ಅನ್ನೂ ಇಡುತ್ತಿರಲಿಲ್ಲ. ಆಗ ನನ್ನ ಮೊಬೈಲ್ ದುರ್ಬಳಕೆ ಆಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

      ಈ ಸ್ವಾಮೀಜಿಗೆ ಈಗಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು, ಅಕ್ರಮವಾಗಿ ಮಾರಾಟ ಮಾಡಿರುವ ಆರೋಪವೂ ಸ್ವಾಮಿ ಮೇಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+