ಯಾದಗಿರಿಯಲ್ಲಿ ಮಚ್ಚಿನಿಂದ ಕೊಚ್ಚಿ ಅರ್ಚಕನ ಬರ್ಬರ ಹತ್ಯೆ

Posted By:
Subscribe to Oneindia Kannada

ಯಾದಗಿರಿ, ನವೆಂಬರ್ 9: ದೇವಸ್ಥಾನದ ಪೂಜಾರಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದಲ್ಲಿಗುರುವಾರ ನಡೆದಿದೆ.

55 ವರ್ಷದ ಹನುಮಂತರಾಯ ನಾಯಕೋಡಿ ಕೊಲೆಯಾದವರು. ಮಹಲರೋಜಾ ಗ್ರಾಮದ ಯಮನೂರೇಶ್ವರ ದೇವಾಲಯದ ಪೂಜಾರಿಯಾಗಿದ್ದ ಹನುಮಂತರಾಯನನ್ನು ಅದೇ ಗ್ರಾಮದ ನಿಂಗಪ್ಪ ಎನ್ನುವಾತ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

Temple priest murdered in Mahalaroja village yadgiri district

ಹನುಮಂತರಾಯ ಬಹಿರ್ದೆಸೆಗೆ ಹೋಗಿ ವಾಪಸ್ ಬರುತ್ತಿದ್ದಾಗ ನಿಂಗಪ್ಪ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಹನುಮಂತರಾಯ ಅವರನ್ನ ಚಿಕಿತ್ಸೆಗಾಗಿ ಕಲಬುರಗಿಗೆ ಸಾಗಿಸುವಾಗ ಮಾರ್ಗ ಸಾವನ್ನಪ್ಪಿದ್ದಾರೆ.

ಕೊಲೆ ಹಿನ್ನೆಲೆಯಲ್ಲಿ ಕೋಲಿ ಸಮಾಜದವರು ಬಸವೇಶ್ವರ ವೃತ್ತದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Temple priest Hnumantharaya murdered by Ningappa in Mahalaroja village Shorapur taluka Yadgiri district on November 9th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ