ಯಾದಗಿರಿಯಲ್ಲಿ ಹೊಸ ಬಾಂಬ್ ಸಿಡಿಸಿದ ಮಾಲೀಕಯ್ಯ ಗುತ್ತೇದಾರ್
ಯಾದಗಿರಿ, ಸೆಪ್ಟೆಂಬರ್ 19: 'ರಾಜ್ಯ ರಾಜಕಾರಣದಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಿಜೆಪಿಗೆ ಸಾಕಷ್ಟು ಜನ ಬರುವವರಿದ್ದಾರೆ' ಎಂದು ಹೊಸ ಬಾಂಬ್ ಸಿಡಿಸಿದ್ದಾರೆ ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್.
ಯಾದಗಿರಿಯಲ್ಲಿ ರಾಜ್ಯ ರಾಜಕೀಯ ಬೆಳವಣಿಗೆಯ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಗುತ್ತೇದಾರ್, 'ಮಲ್ಲಿಕಾರ್ಜುನ ಖರ್ಗೆ ಅವರಿಂದ ಕಾಂಗ್ರೆಸ್ಸಿನ ಹಲವು ನಾಯಕರಿಗೆ ಮೋಸವಾಗಿದೆ. ಅವರ ಬಗ್ಗೆ ನಮಗೆಲ್ಲ ಸಾಕಷ್ಟು ಗೌರವವಿತ್ತು. ಅವರನ್ನು ನಾವೆಲ್ಲ ಎರಡನೇ ಅಂಬೇಡ್ಕರ್ ಎಂದೇ ಕರೆಯುತ್ತಿದ್ದೆವು. ಆದರೆ ಅವರು ಕುಟುಂಬದ ಹಿರಿ ಮನುಷ್ಯರಾಗಿ, ನಮ್ಮಂಥ ಕಿರಿಯರನ್ನೆಲ್ಲ ಸಮಾನವಾಗಿ ನೋಡುವ ಬದಲು ತಮಗೆ ಬೇಕಾದವರನ್ನು ಮಾತ್ರ ಬೆಳೆಸಿದರು' ಎಂದು ದೂರಿದರು.
"ಮಲ್ಲಿಕಾರ್ಜುನ ಖರ್ಗೆ ಅವರು ಧೃತರಾಷ್ಟ್ರ. ಪ್ರಿಯಾಂಕ್ ಖರ್ಗೆ ದುರ್ಯೋಧನ. ತಮ್ಮ ಮಗನಿಗೆ ಒಳ್ಳೆಯ ಹುದ್ದೆ ಸಿಗಬೇಕು ಎಂಬ ಕಾರಣಕ್ಕೆ ಹಲವು ಉತ್ತಮ ನಾಯಕರನ್ನು ಅವರು ಮೂಲೆಗುಂಪು ಮಾಡಿದರು" ಎಂದು ಗುತ್ತೇದಾರ್ ಖರ್ಗೆ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಕಲಬುರಗಿಯ ಅಫ್ಜಲ್ಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಅವರು ಸುಮಾರು 10 ಸಾವಿರ ಮತಗಳ ಅಂತರದಿದ ಕಾಂಗ್ರೆಸ್ ನ ಎಂ ವೈ ಪಾಟೀಲ ಅವರ ವಿರುದ್ಧ ಸೋಲುಂಡಿದ್ದರು. ಸಾಕಷ್ಟು ನಾಯಕರು ಬಿಜೆಪಿಗೆ ಬರ್ತಾರೆ.












Click it and Unblock the Notifications