ಯಾದಗಿರಿ: ರಾಸಲೀಲೆಯಲ್ಲಿ ತೊಡಗಿದ್ದ ಯುವಕನ ಬರ್ಬರ ಹತ್ಯೆ

Posted By:
Subscribe to Oneindia Kannada

ಯಾದಗಿರಿ, ನವೆಂಬರ್ 24: ಮಹಿಳೆ ಜತೆ ರಾಸಲೀಲೆಯಲ್ಲಿ ತೊಡಗಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಾದಗಿರಿ ತಾಲ್ಲೂಕಿನ ಕೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಪರಸ್ತ್ರೀ ಸಹವಾಸ ಮಾಡಿದ ಬೆಳಪು ಮಸೀದಿ ಮೌಲ್ವಿಗೆ ಸಮಾ ಏಟು

ಇಸಾಕ್ (32) ಕೊಲೆಯಾದ ವ್ಯಕ್ತಿ. ಇದೆ ಗ್ರಾಮದ ಏಸುಮಿತ್ರ ಎಂಬಾತನ ಪತ್ನಿ ನಿರ್ಮಲಾ ಹಾಗೂ ಇಸಾಕ್ ಮಧ್ಯೆ ಹಲವು ದಿನಗಳಿಂದ ಅನೈತಿಕ ಸಂಬಂಧ ಇತ್ತು. ಆದರೆ, ಕಳೆದ ರಾತ್ರಿ ಇವರಿಬ್ಬರೂ ರಾಸಲಿಲೆಯಲ್ಲಿ ತೊಡಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ನಿರ್ಮಲಾಳ ಪತಿ ಹಾಗೂ ಕುಟುಂಬಸ್ಥರು ಇಸಾಕ್ ನನ್ನ ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿ ಶುಕ್ರವಾರ ಬೆಳಗಿನ ಜಾವ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಅಕ್ರಮ ಸಂಬಂಧದ ಶಂಕೆ, ಪತ್ನಿಯನ್ನು ಕತ್ತಿಯಿಂದ ಕಡಿದು ಕೊಂದ ಪತಿ

Man stripped and lynched over illicit affair with a married woman in Yadagiri

ಘಟನೆ ತಿಳಿದ ಗುರುಮಿಟ್ಕಲ್ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯ ಪತಿ ಏಸುಮಿತ್ರನನ್ನ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಈ ಕುರಿತು ಗುರುಮಿಟ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Man stripped and lynched over illicit affair with a married woman in Yadagiri on Friday. deceased identified as Isak (32).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ