ಸ್ಟಂಟ್ ಮಾಡಿ ಹಾಸಿಗೆ ಹಿಡಿದ ದುನಿಯಾ ವಿಜಯ್ ಅಭಿಮಾನಿ

ಯಾದಗಿರಿ, ನವೆಂಬರ್ 04: ನಟ ದುನಿಯಾ ವಿಜಯ್​ ಅಭಿಮಾನಿ. ಬ್ಲಾಕ್​ ಕೋಬ್ರಾ ಎಂದರೆ ಆ ಜಂಗ್ಲಿಗೆ ಎಲ್ಲಿಲ್ಲದ ಅಭಿಮಾನ. ಅಂಥ ಅಭಿಮಾನದಿಂದಲೇ ಸ್ಟಂಟ್​​ ಮಾಡಿ ಹಾಸಿಗೆ ಹಿಡಿದಿದ್ದಾನೆ. ಇದೀಗ ಚಿಕಿತ್ಸೆಗೆ ಹಣದ ಅಗತ್ಯವಿದ್ದು ನಟ ವಿಜಯ್​​ ಅವರಿಗೆ ಮನವಿ ಮಾಡುತ್ತಿದ್ದಾನೆ.

ಕೈ, ತೋಳ್ಮೇಲೆ ಜಂಗ್ಲಿ, ಜಾನಿ ಎಂಬ ಅಚ್ಚೆ. ಮನೆಯ ಗೋಡೆಯ ತುಂಬ ನೆಚ್ಚಿನ ನಟ ಫೋಟೋಗಳು. ನಟ ದುನಿಯಾ ವಿಜಯ್​​ನಂತೆ ಸ್ಟಂಟ್​​ ಮಾಡಿ ಎರಡು ಕಾಲಿಗೆ ಗಾಯ ಮಾಡಿಕೊಂಡಿರೋ ಅಭಿಮಾನಿ. ಆಸ್ಪತ್ರೆ ಖರ್ಚಿಗೆ ದುಡ್ಡಿಲ್ಲದೇ ಹಾಸಿಗೆ ಹಿಡಿದ ಜಂಗ್ಲಿ.

ಈ ಅತಿರೇಕದ ಅಭಿಮಾನಿ ಹುಲಗಪ್ಪ ಅಲಿಯಾಸ್​​ ಜಂಗ್ಲಿ. ಊರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಜ್ಜಲ್​​​. ಇತ್ತಿಚೇಗೆ ಸ್ನೇಹಿತರ ಜೊತೆ ಕುಳಿತಿದ್ದಾಗ ನಟ ದುನಿಯಾ ವಿಜಯ್​​ ಅಭಿಮಾನಿಯಾದ ನೀನು ಅವರಂತೆಯೇ ಸ್ಟಂಟ್​ ಮಾಡು ಎಂದು ಚಾಲೆಂಜ್
ಮಾಡಿದ್ದಾರೆ.

ಸವಾಲಾಗಿ ಸ್ವೀಕರಿಸಿದ ವಜ್ಜಲ್ ಗ್ರಾಮದ ಜಂಗ್ಲಿ

ಸವಾಲಾಗಿ ಸ್ವೀಕರಿಸಿದ ವಜ್ಜಲ್ ಗ್ರಾಮದ ಜಂಗ್ಲಿ

ಇದನ್ನೇ ಸವಾಲಾಗಿ ಸ್ವೀಕರಿಸಿದ ವಜ್ಜಲ್​ ಗ್ರಾಮದ ಯುವಕ ಹುಲಗಪ್ಪ ಅಲಿಯಾಸ್​​ ಜಂಗ್ಲಿ ಸುಮಾರು 15 ಅಡಿ ಎತ್ತರದ ಗೋಡೆ ಮೇಲಿಂದ ಹಾರಿದ್ದಾನೆ. ಆಗ ಎರಡು ಕಾಲಿನ ಪಾದದ ಮೂಳೆಗಳು ತಪ್ಪಿವೆ. ಈಗ ಎಂದಿನಂತೆ ಓಡಾಡಲು ಆಗಲ್ಲ. ಹೀಗಾಗಿ ಹಾಸಿಗೆ ಹಿಡಿದಿದ್ದಾನೆ. ಇನ್ನೂ ಹೆಚ್ಚಿನ ಚಿಕಿತ್ಸೆ ದೂರದ ಆಸ್ಪತ್ರೆಗೆ ತೆರಳಲು ಹಣವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾನೆ.

ಹಣಕಾಸಿನ ನೆರವು ಮಾಡಿ

ಹಣಕಾಸಿನ ನೆರವು ಮಾಡಿ

ಆಸ್ಪತ್ರೆಗೆ ತೆರಳಲು ಹಣವಿಲ್ಲ,ಹೀಗಾಗಿ ಚಿಕಿತ್ಸೆಗಾಗಿ ಹಣಕಾಸಿನ ನೆರವು ಮಾಡಿ ಎಂದು ನಟ ದುನಿಯಾ ವಿಜಯ್​​ ಬಳಿ ಮನವಿ ಮಾಡಿದ್ದಾನೆ. ವಜ್ಜಲ್​ ಗ್ರಾಮದ ಹುಲಗಪ್ಪ, ದುನಿಯಾ ಸಿನಿಮಾದಿಂದಲೂ ನಟ ವಿಜಯ್​ ಅವರ ಅಭಿಮಾನಿ. ವಿಜಯ್​ ಅಭಿನಯದ ಎಲ್ಲಾ ಸಿನಿಮಾಗಳನ್ನ ತಪ್ಪದೇ ವೀಕ್ಷಣೆ ಮಾಡುತ್ತಾನೆ.

ವಿಜಯ್​ ಅವರದ್ದೇ ಫೋಟೊಗಳು

ವಿಜಯ್​ ಅವರದ್ದೇ ಫೋಟೊಗಳು

ಇನ್ನೂ ನಟ ವಿಜಯ್​ ಹುಟ್ಟು ಹಬ್ಬವೆಂದರೇ ಎಲ್ಲಿಲ್ಲದ ಸಂಭ್ರಮ. ಹುಲಗಪ್ಪನ ಮನೆಯ ತುಂಬಾ ನಟ ದುನಿಯಾ ವಿಜಯ್​ ಅವರದ್ದೇ ಫೋಟೊಗಳು. ಇಂಥ ಅಭಿಮಾನಿ ಅತಿರೇಕದ ಅಭಿಮಾನ ತೋರಲು ಹೋಗಿ ಸಂಕಟದಲ್ಲಿದ್ದಾನೆ.

ಹುಲಗಪ್ಪ ಮನೆಗೆ ಹಿರಿಯ ಮಗ

ಹುಲಗಪ್ಪ ಮನೆಗೆ ಹಿರಿಯ ಮಗ

ತಂದೆಯನ್ನ ಕಳೆದುಕೊಂಡಿರೋ ಹುಲಗಪ್ಪ ಮನೆಗೆ ಹಿರಿಯ ಮಗ. ಟೆಂಟ್​ ಹೌಸ್​​ಗಳಲ್ಲಿ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದ. ಆದರೆ, ಈಗ ಹುಲಗಪ್ಪನ ತಾಯಿಯೇ ಕೂಲಿ ಮಾಡಿ ಕುಟುಂಬ ನಡೆಸುತ್ತಿದ್ದಾಳೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸುವಷ್ಟು ಕುಟುಂಬ ಆರ್ಥಿಕವಾಗಿ ಸಶಕ್ತವಾಗಿಲ್ಲ. ಹೀಗಾಗಿ, ನಾಟಿ ಔಷಧಿ ಮೊರೆ ಹೋಗಿದ್ದಾರೆ. ಆದ್ರೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ.

ಇಂಥ ಮನಸ್ಥಿತಿಯಿಂದ ಯುವಕರು ಹೊರ ಬರಬೇಕಿದೆ

ಇಂಥ ಮನಸ್ಥಿತಿಯಿಂದ ಯುವಕರು ಹೊರ ಬರಬೇಕಿದೆ

ಚಿತ್ರನಟರ ಅಭಿಯನಯಕ್ಕೆ ಮನಸೋಲುವ ಯುವಕರು ಅವರಂತೆಯೇ ಅನುಸರಿಸಲು ಹೋಗುತ್ತಾರೆ. ಇದರಿಂದ ಅನಾಹುತಗಳಿಗೆ ಈಡಾಗುತ್ತಿದ್ದಾರೆ. ಅದು ಹೈದ್ರಾಬಾದ್​ ಕರ್ನಾಟಕ ಭಾಗದಲ್ಲಿ ಅತಿಯಾದ ಅಭಿಮಾನದಿಂದ ಸಮಸ್ಯೆ ಅನುಭವಿಸುವವರು ಹೆಚ್ಚಾಗುತ್ತಿದ್ದಾರೆ. ಇದರಿಂದ ಅವರ ಭವಿಷ್ಯ, ಕುಟುಂಬ ಎಲ್ಲರಿಗೂ ತೊಂದರೆ. ಇಂಥ ಮನಸ್ಥಿತಿಯಿಂದ ಯುವಕರು ಹೊರ ಬರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+