ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿ ಎಂದರೆ ಲಂಬಾಣಿ ಯುವತಿಯರ ಹಬ್ಬ..!

By ನಮ್ಮ ಪ್ರತಿನಿಧಿ
|
Google Oneindia Kannada News

ದೀಪಾವಳಿಯು ಬರೀ ಬಾಣ, ಬಿರುಸುಗಳ ಸದ್ದಲ್ಲ. ಆದರಾಚೆಯೂ ಸಾಂಪ್ರದಾಯಿಕವಾದ ವಿಶಿಷ್ಟ ಆಚರಣೆ. ಅದರಲ್ಲೂ ಲಂಬಾಣಿ ಸಮುದಾಯದವರು ಬೆಳಕಿನ ಹಬ್ಬ ದೀಪಾವಳಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಇನ್ನೂ ದೀಪಾವಳಿಯು ಲಂಬಾಣಿ ಯುವತಿಯರ ಹಬ್ಬವೆಂದೂ ಕರೆಯುತ್ತಾರೆ.

ಬೆಟ್ಟ-ಗುಡ್ಡದಲ್ಲಿ ವಿವಿಧ ಬಗೆಯ ಹೂಗಳನ್ನ ಸಂಗ್ರಹಿಸುತ್ತಿರೋ ಯುವತಿಯರು. ಮನೆ ಮನೆಗೆ ತೆರಳಿ ಸೆಗಣಿ ಮೇಲೆ ಹೂಗಳಿಂದ ಅಲಂಕಾರ. ಬಳಿಕ ಸಾಂಪ್ರದಾಯಿಕ ಬಟ್ಟೆ ಧರಿಸಿ ವಾದ್ಯಗೋಷ್ಠಿಗೆ ಹೆಜ್ಜೆ ಹಾಕ್ತಿರೋ ಹೆಂಗೆಳೆಯರು.

ಈ ಸಾಂಪ್ರದಾಯಿಕ ವಿಶಿಷ್ಟ ಆಚರಣೆ ಕಂಡು ಬಂದಿದ್ದು ಗಡಿನಾಡು ಯಾದಗಿರಿ ತಾಲೂಕಿನ ಆಶನಾಳ ತಾಂಡಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬೆಳಕಿನ ಹಬ್ಬ ದೀಪಾವಳಿಯು ಲಂಬಾಣಿಗರಿಗೆ ವಿಶೇಷ ಹಾಗೂ ಸಂಭ್ರಮದ ಹಬ್ಬ.

ಆಧುನಿಕ ಭರಾಟೆಯಲ್ಲಿ ಜಾನಪದ ಸೊಗಡಿನ ಅನೇಕ ನೃತ್ಯ ಪ್ರಕಾರಗಳು, ಕಲೆಗಳು ಮರೆಯಾಗುತ್ತಿದೆ. ಆದರೆ ಲಂಬಾಣಿ ಸಮುದಾಯದವರು ಇಂದಿಗೂ ತಮ್ಮ ಸಂಪ್ರಾದಯದ ನೃತ್ಯಗಳನ್ನ ಉಳಿಸಿಕೊಂಡು ಬರುತ್ತಿರುವುದು ವಿಶೇಷ. ಹದಿನೈದು ದಿನಗಳ ಕಾಲ ತಾಂಡಾಗಳಲ್ಲಿ ದೀಪಾವಳಿಯ ಹಬ್ಬ ಸಂಭ್ರಮ ಮನೆ ಮಾಡಿರುತ್ತೆ.

ದೀಪಾವಳಿಯ ಮರು ದಿನದಿಂದ ಹಬ್ಬ

ದೀಪಾವಳಿಯ ಮರು ದಿನದಿಂದ ಹಬ್ಬ

ದೀಪಾವಳಿಯ ಮರು ದಿನದಂದು ಯುವತಿಯರು ಬೆಳಿಗ್ಗೆಯೇ ಕಾಡು ಜಾತಿಯ ವಿವಿಧ ಹೂಗಳನ್ನ ತಂದು ಪರಸ್ಪರ ನೀಡಿ ಶುಭಾಶಯ ಕೋರಿದರು.

ಕಾಡು ಜಾತಿಯ ವಿವಿಧ ಹೂ

ಕಾಡು ಜಾತಿಯ ವಿವಿಧ ಹೂ

ಕಾಡು ಜಾತಿಯ ವಿವಿಧ ಹೂಗಳನ್ನ ತಂದ ಬಳಿಕ ಲಂಬಾಣಿ ಹಾಡುಗಳನ್ನು ಹಾಡುತ್ತ ತಾಂಡಾದ ಮನೆಗಳಿಗೆ ತೆರಳಿ ಸೆಗಣಿಯ ಮೇಲೆ ಬಗೆ ಬಗೆಯ ಹೂಗಳನ್ನು ಹಾಕಿ ಅಲಂಕಾರ ಮಾಡಿದರು.

ತಾಂಡಾದ ದೇವಸ್ಥಾನದ ಬಳಿ

ತಾಂಡಾದ ದೇವಸ್ಥಾನದ ಬಳಿ

ಇದಾದ ಬಳಿಕ ತಾಂಡಾದ ದೇವಸ್ಥಾನದ ಬಳಿ ತೆರಳಿದರು. ಬಣ್ಣ ಬಣ್ಣದ ಉಡುಗೆ ತೊಟ್ಟಿದ್ದ ಯುವತಿಯರು ತಮಟೆ ತಾಳಕ್ಕೆ ಅನುಣವಾಗಿ ನೃತ್ಯ ಮಾಡುವುದು ನೋಡುಗರಲ್ಲಿ ಸಂಭ್ರಮ ಉಂಟು ತರತ್ತಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ಯುವತಿಯರು ನೃತ್ಯ ಮಾಡಿ ಸಂತಸ ಪಟ್ಟರು.

ಮನೆಗಳಿಗೆ ತೆರಳಿ ದೀಪ ಹಚ್ಚುತ್ತಾರೆ

ಮನೆಗಳಿಗೆ ತೆರಳಿ ದೀಪ ಹಚ್ಚುತ್ತಾರೆ

ದೀಪಾವಳಿ ಆರಂಭಕ್ಕೂ 15 ದಿನಗಳ ಮುಂಚೆಯೇ ದಿನಾಲೂ ಸಂಜೆ ಲಂಬಾಣಿ ಯುವತಿ ಯುವತಿಯ ದೇವಸ್ಥಾನದ ಬಳಿ ನೃತ್ಯ ಮಾಡುತ್ತಾರೆ. ಬೆಳಕಿನ ಹಬ್ಬ ದೀಪಾವಳಿಯ ದಿನ ತಾಂಡಾದ ಮನೆಗಳಿಗೆ ತೆರಳಿ ದೀಪ ಹಚ್ಚುತ್ತಾರೆ.

ಲಂಬಾಣಿಗಳ ವಿಶೇಷ ಹಬ್ಬ

ಲಂಬಾಣಿಗಳ ವಿಶೇಷ ಹಬ್ಬ

ಮರುದಿನದಂದು ಬೆಳಿಗ್ಗೆಯಿಂದ ಸಂಜೆಯವರೆಗೆ ತಮಟೆ ನಾದಕ್ಕೆ ತಕ್ಕಂತೆ ಲಂಬಾಣಿ ಶೈಲಿಯ ನೃತ್ಯ ಮಾಡಿ ಹಬ್ಬ ಆಚರಿಸಿದರು. ಇದು ಅನಾದಿಕಾಲದಿಂದಲೂ ಲಂಬಾಣಿಗರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ. ದೀಪಾವಳಿವೆಂದರೆ ಲಂಬಾಣಿ ಸಮುದಾಯದವರಿಗೆ ವಿಶೇಷ ಹಬ್ಬ.

English summary
Deepavali : Yadgir Lambani Girls traditional folk dance
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X