• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಷಿಂಗ್ಟನ್‌ನಲ್ಲಿ ಕೋವಿಡ್‌ ಲಸಿಕೆ ಪಡೆದ ವಯಸ್ಕರಿಗೆ ಉಚಿತ ಗಾಂಜಾ!

|
Google Oneindia Kannada News

ವಾಷಿಂಗ್ಟನ್‌, ಜೂ. 09: ಅಮೆರಿಕದ ವಾಷಿಂಗ್ಟನ್ ರಾಜ್ಯವು ತನ್ನ ಕೊರೊನಾ ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸುವ ಸಲುವಾಗಿ, ವಯಸ್ಕರಿಗೆ ''ಜಾಯಿಂಟ್ಸ್ ಫಾರ್ ಜಬ್ಸ್'' ಪ್ರಚಾರವನ್ನು ಪ್ರಾರಂಭಿಸಿದೆ. ವಾಷಿಂಗ್ಟನ್ ರಾಜ್ಯದಲ್ಲಿ 21 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಕರು ಲಸಿಕೆ ಪಡೆದ ನಂತರ ಉಚಿತ ಗಾಂಜಾವನ್ನು ಪಡೆಯಬಹುದಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ಬಗ್ಗೆ ಸೋಮವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ರಾಜ್ಯದ ಮದ್ಯ ಮತ್ತು ಗಾಂಜಾ ಮಂಡಳಿ, ಈ ಪ್ರಚಾರವು ತಕ್ಷಣವೇ ಪರಿಣಾಮಕಾರಿಯಾಗಿದೆ. ಜುಲೈ 12 ರವರೆಗೆ ಈ ''ಜಾಯಿಂಟ್ಸ್ ಫಾರ್ ಜಬ್ಸ್'' ಅಭಿಯಾನ ನಡೆಯಲಿದೆ ಎಂದು ತಿಳಿಸಿದೆ.

ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಗಾಂಜಾ ಫ್ರೀ..! ಆಫರ್ ಕೇಳಿ ಜನರಿಗೆ ಬಿಗ್ ಶಾಕ್..!ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಗಾಂಜಾ ಫ್ರೀ..! ಆಫರ್ ಕೇಳಿ ಜನರಿಗೆ ಬಿಗ್ ಶಾಕ್..!

21 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಲಸಿಕೆ ಕೇಂದ್ರದಲ್ಲಿ ತಮ್ಮ ಮೊದಲ ಅಥವಾ ಎರಡನೆಯ ಡೋಸ್‌ ಪಡೆದ ನಂತರ ತಮ್ಮ ಅಂಗಡಿಗಳಲ್ಲಿ ಗಾಂಜಾ ಒದಗಿಸಲು ಗಾಂಜಾ ಚಿಲ್ಲರೆ ವ್ಯಾಪಾರಿಗಳಿಗೆ ಅನುಮತಿ ನೀಡುವುದಾಗಿ ಮಂಡಳಿ ತಿಳಿಸಿದೆ. ಇನ್ನು ಲಸಿಕೆ ಪಡೆದವರಿಗೆ ಅಂಗಡಿಗಳು ಗಾಂಜಾ ಕೀಲುಗಳನ್ನು ನೀಡಬಹುದು. ಆದರೆ ಇತರೆ ಗಾಂಜಾದ ಸೇವಿಸುವ ಉತ್ಪನ್ನಗಳನ್ನು ನೀಡುವಂತಿಲ್ಲ ಎಂದು ಕೂಡಾ ಪ್ರಕಟಣೆಯಲ್ಲಿ ಮಂಡಳಿ ತಿಳಿಸಿದೆ.

ನ್ಯೂಯಾರ್ಕ್ ಟೈಮ್ಸ್ ಡೇಟಾಬೇಸ್ ಪ್ರಕಾರ, ವಾಷಿಂಗ್ಟನ್‌ನಲ್ಲಿ 58 ಪ್ರತಿಶತದಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ನೀಡಲಾಗಿದ್ದರೆ, 49 ಪ್ರತಿಶತದಷ್ಟು ಜನರಿಗೆ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ.

ಏತನ್ಮಧ್ಯೆ, ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಹೊಂದಿರುವ ನಿವಾಸಿಗಳು ಉಚಿತ ಬಿಯರ್, ವೈನ್ ಅಥವಾ ಕಾಕ್‌ಟೈಲ್‌ ಅನ್ನು ಕೂಡಾ ಪಡೆಯಬಹುದಾಗಿದೆ ಎಂದು ವಾಷಿಂಗ್ಟನ್‌ನ ಮದ್ಯ ಮತ್ತು ಗಾಂಜಾ ಮಂಡಳಿ ಇತ್ತೀಚೆಗೆ ಘೋಷಿಸಿತು. ಹಾಗೆಯೇ ಅರಿಝೋನಾ ಔಷಧಾಲಯವು ಕೊರೊನಾ ಲಸಿಕೆ ಪಡೆಯುವ 21 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಉಚಿತ ಗಾಂಜಾ ಕೀಲುಗಳು ಅಥವಾ ಅಮಲು ಅಂಟುಗಳನ್ನು ಒದಗಿಸುತ್ತದೆ ಎಂದು ಹೇಳಿದೆ.

ಗೋವಾದಲ್ಲಿ ಗಾಂಜಾ ಬೆಳೆಯಲು ಅನುಮತಿ ಬೇಡ ಎಂದ ಸಿಎಂಗೋವಾದಲ್ಲಿ ಗಾಂಜಾ ಬೆಳೆಯಲು ಅನುಮತಿ ಬೇಡ ಎಂದ ಸಿಎಂ

ಯುಎಸ್ ರಾಜ್ಯಗಳು ಮತ್ತು ನಗರಗಳು ಏಪ್ರಿಲ್ ಮಧ್ಯದಲ್ಲಿ ಲಸಿಕೆ ಪಡೆದವರ ಸಂಖ್ಯೆಯೂ ತೀರಾ ಕಡಿಮೆಯಾಗುತ್ತಾ ಬಂದ ಕಾರಣ ಲಸಿಕೆ ವೇಗ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ನ್ಯೂಜೆರ್ಸಿಯಲ್ಲಿ ಉಚಿತ ಬಿಯರ್, ನ್ಯೂಯಾರ್ಕ್ ಮತ್ತು ಓಹಿಯೋದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಗೆಲ್ಲುವ ಅಭಿಯಾನವನ್ನು ಆರಂಭಿಸಿದೆ. ಹಲವಾರು ರಾಜ್ಯಗಳು 1 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ನಗದು ಬಹುಮಾನದೊಂದಿಗೆ ಲಾಟರಿಗಳನ್ನು ಪ್ರಾಯೋಜಿಸಿವೆ.

ಅಮೆರಿಕದ 50 ರಾಜ್ಯಗಳ ಪೈಕಿ ಈವರೆಗೂ 15 ರಾಜ್ಯಗಳಲ್ಲಿ ಗಾಂಜಾ ಲೀಗಲ್ ಆಗಿದೆ. ಇದನ್ನ ಬಿಟ್ಟರೆ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಗಾಂಜಾ ಔಷಧ ತಯಾರಿಕೆಗೆ ಬಳಸಬಹುದು. ಇತ್ತೀಚಿನ ದಿನದಲ್ಲಿ ಅಮೆರಿಕದ ಒಂದೊಂದೇ ರಾಜ್ಯಗಳು ಗಾಂಜಾ ಲೀಗಲ್ ಮಾಡುತ್ತಿವೆ.

(ಒನ್‌ಇಂಡಿಯಾ ಸುದ್ದಿ)

English summary
USA's Washington state Offers free marijuana joints for adults who get covid vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X