ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Viral Video: 900 ಮಂದಿಯನ್ನು ಒಮ್ಮೆಗೆ ಕಂಪನಿಯಿಂದ ಹೊರಕಳಿಸಿದ ಸಿಇಒ ವಿಶಾಲ್

|
Google Oneindia Kannada News

ನ್ಯೂಯಾರ್ಕ್, ಡಿಸೆಂಬರ್ 7: ಕೊರೊನಾವೈರಸ್ ಸಂಕಷ್ಟ ಕಾಲದಲ್ಲಿ ಹತ್ತು ಹಲವು ಸಂಸ್ಥೆಗಳಿಗೆ ಸಣ್ಣ ಪುಟ್ಟ ಮೀಟಿಂಗ್ ನಡೆಸಲು ಜೂಮ್ ಮೀಟಿಂಗ್ ಸಹಕಾರಿಯಾಗಿದ್ದು ನೆನಪಿರಬಹುದು. ಈಗ ಇದೇ ಜೂಮ್ ಮೀಟಿಂಗ್‌ವೊಂದರ ವಿಡಿಯೋ ವೈರಲ್ ಆಗಿದೆ. ಕೇವಲ 3 ನಿಮಿಷದ ಮೀಟಿಂಗ್‌ನಲ್ಲಿ 900 ಮಂದಿಯನ್ನು ಕೆಲಸ ತೊರೆಯುವಂತೆ ಭಾರತೀಯ ಮೂಲದ ಸಿಇಒ ಸೂಚಿಸಿರುವ ವಿಡಿಯೋ ವೈರಲ್ ಆಗಿದೆ.

ಈ ಸಾಮೂಹಿಕ ಉದ್ಯೋಗ ಕಡಿತ ನಡೆದಿದ್ದು, ನ್ಯೂಯಾರ್ಕ್ ಮೂಲದ ಅಡಮಾನ ಸಾಲ ನೀಡುವ ಬೆಟರ್ ಡಾಟ್ ಕಾಂ ಎಂಬ ಸಂಸ್ಥೆಯಲ್ಲಿ ಹಾಗೂ ಅಷ್ಟು ಮಂದಿಯನ್ನು ಕೆಲ ನಿಮಿಷದಲ್ಲೇ ಕೆಲಸ ತೊರೆಯಿರಿ ಎಂದಿದ್ದು, ಭಾರತೀಯ ಮೂಲದ ಸಿಇಒ ವಿಶಾಲ್ ಗರ್ಗ್.

ಅಮೆರಿಕದಲ್ಲಿ ಈಗ ರಜೆದಿನಗಳು ಆರಂಭವಾಗುತ್ತಿದ್ದು, ಸುದೀರ್ಘ ರಜೆಗೂ ಮುನ್ನ ಕಂಪನಿಯಿಂದ ಏನಾದರೂ ಸೌಲಭ್ಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಮೀಟಿಂಗ್ ನಲ್ಲಿ ಭಾಗವಹಿಸಿದ್ದ ಸಿಬ್ಬಂದಿಗಳಿಗೆ ತಕ್ಷಣವೇ ಪಿಂಕ್ ಸ್ಲಿಪ್ ಸಿಕ್ಕಿದೆ. ಬೆಟರ್ ಡಾಟ್ ಕಾಂ ಸಂಸ್ಥೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇ 9ರಷ್ಟು ತಗ್ಗಿಸಿಕೊಂಡಿದ್ದು, ಎಲ್ಲರನ್ನು ಜೂಮ್ ಮೀಟಿಂಗ್ ನಲ್ಲೇ ವಜಾಗೊಳಿಸಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

Viral Video: New-York based CEO fires 900 employees on a three-minute Zoom call

ಯುಎಸ್ ಹಾಗೂ ಭಾರತದಲ್ಲಿ ಕಚೇರಿ ಹೊಂದಿರುವ ಸಂಸ್ಥೆಯ 900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಿಇಒ ಮೂರು ನಿಮಿಷಗಳ ಜೂಮ್ ಕರೆ ಮೂಲಕ ಸಮಯದಲ್ಲಿ ಹಠಾತ್ತನೆ ವಜಾ ಮಾಡಿದ್ದಾರೆ. ಈ ಎಲ್ಲಾ ಉದ್ಯೋಗಿಗಳಿಗೆ ಯುಎಸ್ ನಲ್ಲಿ ರಜಾದಿನಗಳು ಪ್ರಾರಂಭವಾಗುವ ಸ್ವಲ್ಪ ಮುಂಚೆಯೇ ತಮ್ಮನ್ನು ವಜಾಗೊಳಿಸಲಾಗುವುದು ಎಂದು ತಿಳಿದಿರಲಿಲ್ಲ. ಮಾರುಕಟ್ಟೆಯ ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯು ಸಾಮೂಹಿಕ ವಜಾಗೊಳಿಸುವಿಕೆಯ ಹಿಂದಿನ ಕಾರಣಗಳಾಗಿವೆ ಎಂದು ಭಾರತೀಯ-ಅಮೆರಿಕನ್ ಸಿಇಒ ವಿಶಾಲ್ ಹೇಳಿದರು. ಇದು ತಾವು ಕೈಗೊಂಡಿರುವ ಎರಡನೇ ಸುತ್ತಿನ ಲೇ-ಆಫ್‌ ಎಂದು ಕೂಡಾ ಜೂಮ್ ಮೀಟಿಂಗ್ ವೇಳೆ ಹೇಳುವುದನ್ನು ಗಮನಿಸಬಹುದು.

ಮೀಟಿಂಗ್ ವೇಳೆ ತನ್ನ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಗರ್ಗ್ , "ನಾನು ನಿಮ್ಮ ಬಳಿಗೆ ಉತ್ತಮ ಸುದ್ದಿಯೊಂದಿಗೆ ಬಂದಿಲ್ಲ. ಮಾರುಕಟ್ಟೆ ಬದಲಾಗಿದೆ ಮತ್ತು ಬದುಕಲು ನಾವು ಅದರೊಂದಿಗೆ ಚಲಿಸಬೇಕಾಗುತ್ತದೆ, ಆಶಾದಾಯಕವಾಗಿ, ನಾವು ನಮ್ಮ ಧ್ಯೇಯವನ್ನು ಅಭಿವೃದ್ಧಿಪಡಿಸಲು ಮತ್ತು ತಲುಪಿಸಲು ಮುಂದುವರಿಯಬಹುದು. ಇದು ನೀವು ಕೇಳಲು ಬಯಸುವ ಸುದ್ದಿ ಅಲ್ಲ. ಆದರೆ ಅಂತಿಮವಾಗಿ, ಇದು ನನ್ನ ನಿರ್ಧಾರವಾಗಿತ್ತು ಮತ್ತು ನೀವು ಅದನ್ನು ನನ್ನಿಂದ ಕೇಳಬೇಕೆಂದು ನಾನು ಬಯಸುತ್ತೇನೆ. ಇದು ನಿಜವಾಗಿಯೂ, ನಿಜವಾಗಿಯೂ ಸವಾಲಿನ ನಿರ್ಧಾರವಾಗಿದೆ. ನನ್ನ ವೃತ್ತಿಜೀವನದಲ್ಲಿ ಇದು ಎರಡನೇ ಬಾರಿಗೆ ನಾನು ಇದನ್ನು ಮಾಡುತ್ತಿದ್ದೇನೆ ಮತ್ತು ನಾನು ಇದನ್ನು ಮಾಡಲು ಬಯಸುವುದಿಲ್ಲ. ಕೊನೆಯ ಬಾರಿ ನಾನು ಅದನ್ನು ಮಾಡಿದಾಗ, ನಾನು ಅಳುತ್ತಿದ್ದೆ. ಈ ಬಾರಿ ನಾನು ಬಲಶಾಲಿಯಾಗುತ್ತೇನೆ ಎಂದು ಭಾವಿಸುತ್ತೇನೆ. ಆದರೆ ನಾವು ಕಂಪನಿಯ ಸುಮಾರು 15 ಪ್ರತಿಶತವನ್ನು ವಜಾಗೊಳಿಸುತ್ತಿದ್ದೇವೆ ... ಮಾರುಕಟ್ಟೆ, ದಕ್ಷತೆ ಮತ್ತು ಕಾರ್ಯಕ್ಷಮತೆ ಮತ್ತು ಉತ್ಪಾದಕತೆ... ನೀವು ಈ ಕರೆಯಲ್ಲಿದ್ದರೆ, ನೀವು ದುರದೃಷ್ಟಕರ ಗುಂಪಿನ ಭಾಗವಾಗಿದ್ದೀರಿ. ಇಲ್ಲಿ ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗಿದೆ.'' ಎಂದಿದ್ದಾರೆ.

Viral Video: New-York based CEO fires 900 employees on a three-minute Zoom call

ಜೂಮ್ ಕರೆ ಸಭೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ವಜಾಗೊಂಡ ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವಜಾಗೊಳಿಸಿದ ಉದ್ಯೋಗಿಗಳು ನಾಲ್ಕು ವಾರಗಳ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶ, ಒಂದು ತಿಂಗಳ ಸಂಪೂರ್ಣ ಪ್ರಯೋಜನಗಳು ಮತ್ತು ಎರಡು ತಿಂಗಳ ಕವರ್-ಅಪ್‌ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ, ಇದಕ್ಕಾಗಿ ಕಂಪನಿಯು ಪ್ರೀಮಿಯಂ ಪಾವತಿಸುತ್ತದೆ ಎಂದು ಅವರು ಹೇಳಿದರು.

ಈ ನಡುವೆ ರಜೆಯ ಮೊದಲು ಉದ್ಯೋಗಿಗಳನ್ನು ವಜಾ ಮಾಡಿದ್ದಕ್ಕಾಗಿ ಸಿಇಒ ಅವರನ್ನು ಅನೇಕರು ಟೀಕಿಸಿದ್ದಾರೆ, ಆದರೆ ಇತರರು ಕಾರ್ಪೊರೇಟ್ ಸಂಸ್ಕೃತಿಯನ್ನು ದೂಷಿಸಿದ್ದಾರೆ. ಇತರರು ಈ ನಿರ್ಧಾರವನ್ನು ಹೃದಯವಿದ್ರಾವಕ ಎಂದು ಕರೆದರು ಮತ್ತು ವಜಾ ಮಾಡಿದ ಉದ್ಯೋಗಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಡೈಲಿ ಮೇಲ್ ವರದಿ ಪ್ರಕಾರ ಗರ್ಗ್ ಸಂಸ್ಥೆಗೆ ಕಳೆದ ವಾರವೇ 750 ಮಿಲಿಯನ್ ಡಾಲರ್ ಹೂಡಿಕೆ ಪಡೆದುಕೊಂಡಿದೆ. ಸಾಫ್ಟ್ ಬ್ಯಾಂಕ್ ಬೆಂಬಲ ಹೊಂದಿರುವ ಸಂಸ್ಥೆಯ ಮೌಲ್ಯ 7 ಬಿಲಿಯನ್ ಡಾಲರ್ ನಷ್ಟಿದೆ.

ನ್ಯೂಯಾರ್ಕ್ ವಿವಿಯಲ್ಲಿ ಬಿಸಿನೆಸ್ ಸ್ಟಡಿ ವಿಷಯ ಅಧ್ಯಯನ ಮಾಡಿರುವ ಗರ್ಗ್, 2016ರಲ್ಲಿ ಸಂಸ್ಥೆ ಸ್ಥಾಪಿಸಿದರು. ಗೋಲ್ಡ್ ಮನ್ ಸಾಚ್ಸ್, ಕ್ಲಿನರ್ ಪರ್ಕಿನ್ಸ್ ಆರ್ಥಿಕ ಬೆಂಬಲ ಪಡೆದುಕೊಂಡಿತ್ತು. 2020ರಲ್ಲಿ ತಮ್ಮ ಸಂಸ್ಥೆ ಶೇ 400ರಷ್ಟು ಪ್ರಗತಿ ಕಂಡಿದ್ದು, 2021ರಲ್ಲಿ 3 ಪಟ್ಟು ಅಧಿಕ ಲಾಭ ಗಳಿಸಲಿದೆ ಎಂದು ಗರ್ಗ್ ಹೇಳಿದ್ದರು.

English summary
Viral Video: New-York based mortgage lender on Wednesday fired over 900 employees on a Zoom call just before the holiday season kicked off in the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X