ಅಮೆರಿಕದಲ್ಲಿ ಕಾಶ್ಮೀರ ದನಿ, ವೈರಲ್ ಆಯ್ತು ಮಹಿಳೆಯ ಭಾಷಣ

ವಾಷಿಂಗ್ಟನ್, ನವೆಂಬರ್ 15: ಅಮೆರಿಕದ ವಾಷಿಂಗ್ಟನ್ ನಲ್ಲಿ ನಡೆದ ಮಾನವ ಹಕ್ಕಿನ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಭಾರತೀಯ ಅಂಕಣಕಾರ್ತಿಯೊಬ್ಬರು ಮಾಡಿದ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುನಂದಾ ವಸಿಷ್ಠ ಎಂಬ ಅಂಕಣಕಾರ್ತಿ ಕಾಶ್ಮೀರದಲ್ಲಿ ನಡೆಯುತ್ತಿರುವ ದಂಗೆಗಳನ್ನು ವಿರೋಧಿಸಿ ಮಾಡಿದ ಭಾಷಣವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ನಾಯಕರು ಪ್ರಶಂಸಿಸಿದ್ದಾರೆ.

"ಕಾಶ್ಮೀರವಿಲ್ಲದೆ ಭಾರತವಿಲ್ಲವೇ ಇಲ್ಲ ಕಾಶ್ಮೀರ, ಪಂಜಾಬ್ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ದಂಗೆಗಳನ್ನು ತಡೆದರೆ ಮಾನವ ಹಕ್ಕು ಉಲ್ಲಂಘನೆಗೂ ಶಾಶ್ವತ ಪರಿಹಾರ ದೊರಕಿದಂತಾಗುತ್ತದೆ" ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಅವರ ಈ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಭಾಷಣದಲ್ಲೇನಿದೆ?

ಭಾಷಣದಲ್ಲೇನಿದೆ?

"ನನ್ನ ತಂದೆ ಕಾಶ್ಮಿರಿ ಹಿಂದು, ನನ್ನ ತಾಯಿಯೂ ಕಾಶ್ಮೀರಿ ಹಿಂದು, ನಾನೂ ಕಾಶ್ಮೀರಿ ಹಿಂದು. ನಮ್ಮ ಬದುಕು, ನಮ್ಮ ಪ್ರಪಂಚ ಎಲ್ಲವೂ ಕಾಶ್ಮೀರ" ಎನ್ನುತ್ತಲೇ ಮಾತಿಗೆ ಶುರುವಿಟ್ಟರು ಸುನಂದಾ ವಸಿಷ್ಠ

ಭಾರತ 5000 ವರ್ಷ ಹಳೆಯ ನಾಗರಿಕತೆ

ಭಾರತ 5000 ವರ್ಷ ಹಳೆಯ ನಾಗರಿಕತೆ

"ನಾವು ಯಾವತ್ತೂ ಕಾಶ್ಮೀರವನ್ನು ಆಕ್ರಮಿಸಲಿಲ್ಲ. ಏಕೆಂದರೆ ಅದು ಭಾರತದ್ದೇ ಅವಿಭಾಜ್ಯ ಅಂಗ. ಭಾರವೆಂದರೆ 70 ವರ್ಷ ಹಳೆಯ ದೇಶವಲ್ಲ, ಆದರೆ 5000 ವರ್ಷ ಹಳೆಯ ನಾಗರಿಕತೆ. ಕಾಶ್ಮೀರವಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಕಾಶ್ಮೀರವಿಲ್ಲ" -ಸುನಂದಾ ವಾಸಿಷ್ಠ

ಇಡೀ ಜಗತ್ತೂ ಮೌನವಾಗಿತ್ತು!

ಇಡೀ ಜಗತ್ತೂ ಮೌನವಾಗಿತ್ತು!

"ಇಂದು ಮಾನವ ಹಕ್ಕಿನ ಬಗ್ಗೆ ಈ ರೀತಿ ಚರ್ಚೆ ನಡೆಯುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಏಕೆಂದರೆ ಅಂದು ನನ್ನ ಕುಟುಂಬ ಮತ್ತು ನನ್ನಂಥ ಎಷ್ಟೋ ಜನ ತಮ್ಮ ಮನೆ, ಬದುಕು, ಬದುಕಿನ ಹಾದಿ ಎಲ್ಲವನ್ನೂ ಕಳೆದುಕೊಂಡಾಗ ಈ ಜಗತ್ತು ಮೌನವಾಗಿತ್ತು"- ಸುನಂದಾ ವಸಿಷ್ಠ

ನಿರಾಶ್ರಿತರಾದ ಕಾಶ್ಮೀರಿಗಳು

ನಿರಾಶ್ರಿತರಾದ ಕಾಶ್ಮೀರಿಗಳು

"1990 ರ ದಶಕದಲ್ಲಿ 400000 ಕ್ಕೂ ಹೆಚ್ಚು ಕಾಶ್ಮಿರಿಗಳನ್ನು ಕಾಶ್ಮೀರದಿಂದ ಹೊರಗಟ್ಟಲಾಯ್ತು. ಆಗ ಯಾರೂ ಮಾತನಾಡಲಿಲ್ಲ. ಮಾನವ ಹಕ್ಕು ಉಲ್ಲಂಘನೆಯ ಧ್ವನಿ ಎತ್ತಲಿಲ್ಲ. ಆಗಿನಿಂದಲೇ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಎಗ್ಗಿಲ್ಲದಂತೆ ಆರಂಭವಾಗಿದ್ದು"- ಸುನಂದಾ ವಸಿಷ್ಠ

ಮಾನವ ಹಕ್ಕು ಹೋರಾಟಗಾರರು ಎಲ್ಲಿದ್ದರು?

ಮಾನವ ಹಕ್ಕು ಹೋರಾಟಗಾರರು ಎಲ್ಲಿದ್ದರು?

ಉಗ್ರರಿಂದ ನಾವು ತೀರಾ ಬರ್ಬರವಾಗಿ ಸಾಯುವುದನ್ನು ತಪ್ಪಿಸಲು ನನ್ನ ತಾತನೇ ಅಡುಗೆ ಮನೆಯ ಚಾಕುವಿನಿಂದ ನಮ್ಮನ್ನು ಕೊಲ್ಲಲು ಮುಂದಾದಾಗ ಯಾರು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರು. ನಮ್ಮ ಆತ್ಮೀಯರನ್ನು, ಸಂಬಮಧಿಗಳನ್ನು ಪಾಕಿಸ್ತಾನಿ ಉಗ್ರರು ಕೊಲ್ಲುವಾಗ ಈ ಮಾನವ ಹಕ್ಕು ಹೋರಾಟಗಾರರೆಲ್ಲ ಎಲ್ಲಿದ್ದರು? - ಸುನಂದಾ ವಸಿಷ್ಠ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+