ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆ ಮಾಡಿ ಎಂದ ಅಮೆರಿಕ ಸೆನೆಟರ್

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 04: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆ ಮಾಡುವಂತೆ ಅಮೆರಿಕದ ಹಿರಿಯ ಸೆನೆಟರ್ ಲಿಂಡ್ಸೆ ಗ್ರಹಾಂ ಕರೆ ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಕೂಡ ಮಾಡಿರುವ ಅವರು, ಸದ್ಯದ ಪರಿಸ್ಥಿತಿಯನ್ನು ಸರಿಪಡಿಸುವ ಏಕೈಕ ವ್ಯಕ್ತಿಗಳು ಇರುವುದು ರಷ್ಯಾದಲ್ಲಿಯೇ, "ರಷ್ಯಾದಲ್ಲಿ ಬ್ರೂಟಸ್ ಇದೆಯೇ?" ರೋಮನ್ ಆಡಳಿತಗಾರ ಜೂಲಿಯಸ್ ಸೀಸರ್‌ನ ಹಂತಕರಲ್ಲಿ ಒಬ್ಬನನ್ನು ಉಲ್ಲೇಖಿಸಿ ಸೆನೆಟರ್ ಲಿಂಡ್ಸೆ ಗ್ರಹಾಂ ಕೇಳಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳುವುದು ಹೇಗೆ, ರಷ್ಯಾದಲ್ಲಿ ಯಾರಾದರೊಬ್ಬರು ಈ ವಿಚಾರದಲ್ಲಿ ದಿಟ್ಟ ಕ್ರಮ ಕೈಗೊಂಡು ಅಧ್ಯಕ್ಷರನ್ನು ಮುಗಿಸಿಬಿಡಬೇಕು ಎಂದು ಫಾಕ್ಸ್ ನ್ಯೂಸ್ ಟಿವಿಯ ನಿರೂಪಕ ಸೀನ್ ಹ್ಯಾನಿಟಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

 ನವನಾಜಿಗಳ ನಿರ್ಮೂಲನೆಯನ್ನು ಮಾಡೇ ಮಾಡುತ್ತೇವೆ ಎಂದ ರಷ್ಯಾ ನವನಾಜಿಗಳ ನಿರ್ಮೂಲನೆಯನ್ನು ಮಾಡೇ ಮಾಡುತ್ತೇವೆ ಎಂದ ರಷ್ಯಾ

ಕಳೆದ ವಾರ ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಸಾರಿದ ನಂತರ ಇದುವರೆಗೆ 350 ನಾಗರಿಕರು ಹತ್ಯೆಯಾಗಿದ್ದು 10 ಲಕ್ಷಕ್ಕೂ ಅಧಿಕ ಮಂದಿ ದೇಶ ಬಿಟ್ಟು ಪಲಾಯನಗೈದಿದ್ದಾರೆ ಎಂದು ಉಕ್ರೇನ್ ಹೇಳಿದೆ. ತಾವು ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಯುದ್ಧ ಮಾಡುತ್ತಿಲ್ಲ ಎಂದು ರಷ್ಯಾ ಪ್ರತಿಪಾದಿಸಿಕೊಂಡು ಬರುತ್ತಿದ್ದರೂ ಸಾಕ್ಷಿಗಳು ಮಾತ್ರ ಅದಕ್ಕೆ ವ್ಯತಿರಿಕ್ತವಾಗಿವೆ.

US Senator Calls For Putin Assassination: Somebody In Russia Has To

ಅಮೆರಿಕ ಕಾಂಗ್ರೆಸ್ ನಲ್ಲಿ 20 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಸೆನೆಟರ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಅತ್ಯಾಪ್ತರಾಗಿದ್ದಾರೆ. ರಷ್ಯಾ ಅಧ್ಯಕ್ಷರ ಯುದ್ಧ ಅಪರಾಧ ಮತ್ತು ಮಾನವೀಯತೆ ವಿರುದ್ಧ ಅಪರಾಧ ಎಂದು ಬಣ್ಣಿಸಿದ್ದಾರೆ.

ರಷ್ಯಾವು ಉಕ್ರೇನ್‌ ಮೇಲೆ ಸಮರ ಸಾರುತ್ತಿದೆ, ರಷ್ಯಾದ ಅಧ್ಯಕ್ಷನನ್ನು ಹಿಡಿದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಉದ್ಯಮಿ ಘೋಷಿಸಿದ್ದರು.
ವ್ಲಾಡಿಮಿರ್ ಪುಟಿನ್ ಅವರನ್ನು ಜೀವಂತ ಅಥವಾ ಮೃತ ಸ್ಥಿತಿಯಲ್ಲಿ ಹಿಡಿದುಕೊಟ್ಟವರಿಗೆ 1 ಮಿಲಿಯನ್ ಡಾಲರ್ ಬಹುಮಾನವನ್ನು ರಷ್ಯಾದ ಉದ್ಯಮಿಯೊಬ್ಬರು ಘೋಷಿಸಿದ್ದರು.

ಪುಟಿನ್ ಅವರನ್ನು ರಷ್ಯಾ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ "ವಾರ್ ಕ್ರಿಮಿನಲ್" ಎಂಬ ಆರೋಪದಲ್ಲಿ ಬಂಧಿಸಿ ಸಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವವರ ಅಧಿಕಾರಿಗಳಿಗೆ $1,000,000 ಬಹುಮಾನ ನೀಡುವುದಾಗಿ ಅಲೆಕ್ಸ್ ಕೊನನಿಖಿನ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು.

ಪುಟಿನ್ ರಷ್ಯಾ ಅಧ್ಯಕ್ಷರಲ್ಲ ಅವರು ಅಧಿಕಾರಕ್ಕೆ ಬಂದಿದ್ದೇ ರಷ್ಯಾದಲ್ಲಿನ ಅಪಾರ್ಟ್ ಮೆಂಟ್ ಕಟ್ಟಡಗಳನ್ನು ಉಡಾಯಿಸುವ ವಿಶೇಷ ಕಾರ್ಯಾಚಾರಣೆ ಹಾಗೂ ಮುಕ್ತ ಚುನಾವಣೆಗಳನ್ನು ತೆಗೆದು, ತಮ್ಮ ವಿರೋಧಿಗಳನ್ನು ಹತ್ಯೆ ಮಾಡುವ ಮೂಲಕ. ರಷ್ಯಾದ ಜನಾಂಗದವನಾಗಿ, ಪ್ರಜೆಯಾಗಿ ರಷ್ಯಾವನ್ನು ಡಿನಾಜಿಫಿಕೇಷನ್ (ನಾಜೀಕರಣದಿಂದ ಮುಕ್ತ ಮಾಡುವುದು) ನನ್ನ ನೈತಿಕ ಕರ್ತವ್ಯ ಎಂದು ಭಾವಿಸುತ್ತೇನೆ. ನಾನು ಉಕ್ರೇನ್ ಗೆ ನನ್ನ ಬೆಂಬಲವನ್ನು ಮುಂದುವರೆಸುತ್ತೇನೆ" ಎಂದು ಅಲೆಕ್ಸ್ ಕೊನನಿಖಿನ್ ಹೇಳಿದ್ದರು.

Recommended Video

'ಯುದ್ಧ ಬೇಡ' ರಷ್ಯಾ ನಡೆ ವಿರೋಧಿಸಿ ಲೈವ್ ನಲ್ಲೇ ರಾಜೀನಾಮೆ ಕೊಟ್ಟ ರಷ್ಯಾ ಚಾನಲ್ | Oneindia Kannada

English summary
Senior US senator Lindsey Graham called for "somebody in Russia" to assassinate President Vladimir Putin after Moscow's invasion of Ukraine in a televised interview Thursday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X