ಮುರಿದ ಬ್ಯಾಲೆಟ್, ಉದ್ದದ ಕ್ಯೂ ಮತ್ತು ಅಕ್ರಮ! ಇದು ಅಮೆರಿಕ ಚುನಾವಣೆ!

ವಾಷಿಂಗ್ಟನ್, ನವೆಂಬರ್ 07: ಅಮೆರಿಕ ಸಂಸತ್ತಿಗೆ ನಡೆಯುತ್ತಿರುವ ಮಧ್ಯಂತರ ಚುನಾವಣೆಯಲ್ಲಿ ಮುರಿದ ಬ್ಯಾಲೆಟ್ ಗಳು, ಮತದಾರರ ಉದ್ದದ ಸಾಲುಗಳು ಮತ್ತು ಒಂದಷ್ಟು ಅಕ್ರಮಗಳು ನಡೆದ ಕುರಿತು ವರದಿಯಾಗಿದೆ.

ದೀಪಾವಳಿ ವಿಶೇಷ ಪುರವಣಿ

ಮಂಗಳವಾರದಂದು ವಾಷಿಂಗ್ಟನ್ ಡಿ ಸಿ ಮತ್ತು 50 ರಾಜ್ಯಗಳು ಚುನಾವಣೆಯನ್ನು ಎದುರಿಸಿದವು. ಕಳೆದ 50 ವರ್ಷಗಳಲ್ಲೇ ಅತೀ ಹೆಚ್ಚು ಮತದಾನ ದಾಖಲಾಗಿದ್ದು, ಇತಿಹಾಸ ನಿರ್ಮಿಸಿದೆ.

ಹೌಸ್ ಆಫ್ ರೆಪ್ರಸಂಟೇಟಿವ್ಸ್ (ಪ್ರತಿನಿಧಿ ಸಭೆ) ನ ಎಲ್ಲಾ 435 ಸ್ಥಾನಗಳಿಗೆ ಮತ್ತು ಸಂಸತ್ತಿನ 100 ರಲ್ಲಿ 35 ಸ್ಥಾನಗಳಿಗೆ ಚುನಾವಣೆ ನಡೆಯಿತು. 50 ರಲ್ಲಿ 36 ರಾಜ್ಯಗಳಿಗೆ ಗವರ್ನರ್ ಗಳನ್ನೂ ಈ ಸಂದರ್ಭದಲ್ಲಿ ಆರಿಸಲಾಗುತ್ತಿದೆ.

US midterm polls: Many voting irregularities reported

ಚುನಾವಣೆಯ ಸಮಯದಲ್ಲಿ ಅಲ್ಪಸಂಖ್ಯಾತರನ್ನು ನಿರ್ಲಕ್ಷ್ಯಿಸಲಾಗಿದೆ, ಮತದಾರರನ್ನು ಸರಿಯಾಗಿ ನಡೆಸಿಕೊಳ್ಳಲಾಗಿಲ್ಲ, ಅಲ್ಲಲ್ಲಿ ಅಕ್ರಮಗಳು ನಡೆದಿವೆ ಎಂದು ವೋಟಿಂಗ್ ರೈಟ್ ಕಾರ್ಯಕರ್ತರು ದೂರು ನೀಡಿದ್ದು, ಇದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೈಫಲ್ಯ ಎಂದೇ ಕರೆಯಲಾಗುತ್ತಿದೆ.

ಡೆಮಾಕ್ರೆಟಿಕ್ ಪಕ್ಷ ಹೌಸ್ ಆಫ್ ರೆಪ್ರಸಂಟೇಟಿವ್ಸ್ ಅನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಸಾಕಷ್ಟು ಸವಾಲು ನೀಡುತ್ತಿದ್ದರೆ, ಸೆನೆಟ್ ಅನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ರಿಪಬ್ಲಿಕನ್ ಪಕ್ಷ ಯಶಸ್ವಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+