ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದ ಇಲ್ಲಿಯವರೆಗೂ ಒಂದುವರೆ ಲಕ್ಷಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ. ದಿನೇ ದಿನೇ ಸಾವಿನ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ವಿಶ್ವದ ದೊಡ್ಡಣ್ಣ ಅಂತಲೇ ಕರೆಯಿಸಿಕೊಳ್ಳುವ ಅಮೇರಿಕಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ಜಾಸ್ತಿ ಆಗಿದೆ.

ಕೊರೊನಾ ವೈರಸ್ ನಿಂದ ಅಮೇರಿಕಾ ಅಕ್ಷರಶಃ ಜರ್ಜರಿತವಾಗಿದೆ. ಈ ನಡುವೆ ನೋವೆಲ್ ಕೊರೊನಾ ವೈರಸ್ 'ಮೂಲ' ಮತ್ತು ಜನ್ಮ ರಹಸ್ಯದ ಬಗ್ಗೆ ತರಹೇವಾರಿ ವರದಿಗಳು ಪ್ರಕಟ ಆಗುತ್ತಿವೆ.

ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!

ಹೀಗಿರುವಾಗಲೇ, ಚೀನಾದ ವುಹಾನ್ ಲ್ಯಾಬ್ ನಿಂದಲೇ ಕೊರೊನಾ ವೈರಸ್ 'ಸೋರಿಕೆ' ಆಯ್ತಾ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಅಮೇರಿಕಾ ತನಿಖೆ ಆರಂಭಿಸಿದೆ. ಅರ್ಥಾತ್ ಕೊರೊನಾ ಜನ್ಮ ರಹಸ್ಯದ ವ್ಯೂಹವನ್ನು ಅಮೇರಿಕಾ ಬೇಧಿಸಲು ಹೊರಟಿದೆ.

ಡೊನಾಲ್ಡ್ ಟ್ರಂಪ್ ಹೇಳಿಕೆ

ಡೊನಾಲ್ಡ್ ಟ್ರಂಪ್ ಹೇಳಿಕೆ

''ವುಹಾನ್ ಲ್ಯಾಬ್ ನಿಂದ ಕೊರೊನಾ ವೈರಸ್ 'ಎಸ್ಕೇಪ್' ಆದ ಬಗ್ಗೆ ತನಿಖೆ ನಡೆಯುತ್ತಿದೆ. ಇದರಲ್ಲಿ ಅರ್ಥ ಇದೆ ಎಂದೆನಿಸುತ್ತಿದೆ'' ಎಂದು ವೈಟ್ ಹೌಸ್ ನ್ಯೂಸ್ ಕಾನ್ಫರೆನ್ಸ್ ವೇಳೆ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪೂರ್ಣ ಪ್ರಮಾಣದ ತನಿಖೆ ಆರಂಭ

ಪೂರ್ಣ ಪ್ರಮಾಣದ ತನಿಖೆ ಆರಂಭ

ವುಹಾನ್ ಲ್ಯಾಬ್ ನಿಂದ ಕೊರೊನಾ ವೈರಸ್ 'ಎಸ್ಕೇಪ್' ಆಯ್ತೋ, ಇಲ್ವೋ ಎಂಬುದರ ಬಗ್ಗೆ ಯು.ಎಸ್ ಪೂರ್ಣ ಪ್ರಮಾಣದ ತನಿಖೆ ನಡೆಸುತ್ತಿದೆ. ವುಹಾನ್ ಲ್ಯಾಬ್ ಮತ್ತು ಕೊರೊನಾ ವೈರಸ್ ಮೂಲದ ಬಗ್ಗೆ ತನಿಖಾ ತಂಡದ ಸದಸ್ಯರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿತ್ತು.

ಗುಡುಗಿದ ಡೊನಾಲ್ಡ್ ಟ್ರಂಪ್

ಗುಡುಗಿದ ಡೊನಾಲ್ಡ್ ಟ್ರಂಪ್

''ತನಿಖೆ ನಡೆಯುತ್ತಿದೆ. ಕೊರೊನಾ ವೈರಸ್ ಎಲ್ಲಿಂದ ಬಂತು ಅಂತ ನಾವು ಕಂಡು ಹಿಡಿಯುತ್ತೇವೆ. ಕೊರೊನಾ ವೈರಸ್ ನಿಂದಾಗಿ 184 ದೇಶಗಳು ಒದ್ದಾಡುವಂತಾಗಿದೆ'' ಎಂದು ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿ ಗುಡುಗಿದ್ದಾರೆ.

ಇನ್ಮೇಲೆ ಆರ್ಥಿಕ ಸಹಾಯ ಇಲ್ಲ

ಇನ್ಮೇಲೆ ಆರ್ಥಿಕ ಸಹಾಯ ಇಲ್ಲ

ಇದೇ ವೇಳೆ ''ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಲೆವೆಲ್-4 ಲ್ಯಾಬ್ ಗೆ ಆರ್ಥಿಕ ನೆರವು ನೀಡುವುದನ್ನೂ ನಿಲ್ಲಿಸುತ್ತೇವೆ. ಒಬಾಮಾ ಆಡಳಿತದ ಕಾಲದಲ್ಲಿ ವುಹಾನ್ ಲ್ಯಾಬ್ ಗೆ 3.7 ಮಿಲಿಯನ್ ಡಾಲರ್ ಹಣ ಸಹಾಯ ಮಾಡಿತ್ತು. ನಾವು ಅದನ್ನು ಈ ಕೂಡಲೆ ನಿಲ್ಲಿಸುತ್ತೇವೆ'' ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟ ಪಡಿಸಿದ್ದಾರೆ.

English summary
United States is conducting full scale investigation into whether Coronavirus escaped from lab in Wuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X