ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಕ್ಕೆ ಅತಿದೊಡ್ಡ ಬೆದರಿಕೆ ಚೀನಾ: ಗುಪ್ತಚರ ಇಲಾಖೆ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 4: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ವಿರುದ್ಧದ ಕಠಿಣ ವಾಗ್ದಾಳಿಗೆ ಪುಷ್ಟಿ ನೀಡಿರುವ ಅಮೆರಿಕದ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು, ಚೀನಾವು ಎರಡನೆಯ ವಿಶ್ವಯುದ್ಧದ ಬಳಿಕ ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ಅತಿದೊಡ್ಡ ಬೆದರಿಕೆಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.

'ಗುಪ್ತಚರ ಮಾಹಿತಿ ಸ್ಪಷ್ಟವಾಗಿದೆ. ಚೀನಾವು ಅಮೆರಿಕ ಮತ್ತು ಭೂಗ್ರಹದ ಉಳಿದ ಭಾಗಗಳನ್ನು ಆರ್ಥಿಕವಾಗಿ, ಸೈನ್ಯವಾಗಿ ಮತ್ತು ತಾಂತ್ರಿಕವಾಗಿ ತನ್ನ ಹಿಡಿತದಲ್ಲಿ ಪ್ರಾಬಲ್ಯ ಮೆರೆಯಲು ಬಯಸಿದೆ' ಎಂದು ರಾಷ್ಟ್ರೀಯ ಗುಪ್ತಚರದ ನಿರ್ದೇಶಕ ಜಾನ್ ರಾಕ್ಟಿಫೆ ಪತ್ರಿಕಾ ಲೇಖನವೊಂದರಲ್ಲಿ ಹೇಳಿದ್ದಾರೆ.

ಚೀನಾ ವಿರುದ್ಧ 'ಹೈಡ್ರೋಜನ್ ಬಾಂಬ್’ ಪ್ರಯೋಗಿಸಲಿದೆ ಭಾರತ..!ಚೀನಾ ವಿರುದ್ಧ 'ಹೈಡ್ರೋಜನ್ ಬಾಂಬ್’ ಪ್ರಯೋಗಿಸಲಿದೆ ಭಾರತ..!

ಮಾಜಿ ರಿಪಬ್ಲಿಕನ್ ಸಂಸದರಾದ ರಾಕ್ಟಿಫೆ ಅವರನ್ನು ಕಳೆದ ವರ್ಷ ಟ್ರಂಪ್ ಅವರು ಅಮೆರಿಕದ ಪ್ರಮುಖ ಗುಪ್ತಚರ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. 'ಇಂದು ಅಮೆರಿಕಕ್ಕೆ ಚೀನಾ ಬಹುದೊಡ್ಡ ಬೆದರಿಕೆಯಾಗಿದೆ. ಜತೆಗೆ ಎರಡನೆಯ ವಿಶ್ವಯುದ್ಧಾನಂತರ ಜಗತ್ತಿನೆಲ್ಲೆಡೆ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೂ ದೊಡ್ಡ ಬೆದರಿಕೆಯಾಗಿದೆ' ಎಂದು ಅವರು ಹೇಳಿದ್ದಾರೆ.

US Intelligence Says China Is The Biggest Threat To America And Worldwide

ಚೀನಾ ಮೇಲೆ ಗಮನ ಹೆಚ್ಚಿಸಲು ಗುಪ್ತಚರ ಇಲಾಖೆಗೆ ವಾರ್ಷಿಕ ಬಜೆಟ್‌ನಲ್ಲಿ 85 ಬಿಲಿಯನ್ ಡಾಲರ್ ಹಣವನ್ನು ಹಂಚಿಕೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಚೀನಾವು ಅಮೆರಿಕದ ಕಂಪೆನಿಗಳನ್ನು ತನ್ನ ವಶಪಡಿಸಿಕೊಳ್ಳಲು ಬಯಸಿದೆ. ಅಮೆರಿಕದ ಬೌದ್ಧಿಕ ಕಂಪೆನಿಗಳನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುವುದು, ಅವುಗಳನ್ನು ನಕಲು ಮಾಡುವುದು ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಕಂಪೆನಿಗಳನ್ನು ನಾಶಪಡಿಸುವುದು ಅದರ ಉದ್ದೇಶ ಎಂದು ಆರೋಪಿಸಿದ್ದಾರೆ.

ಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿಸಿದ ಚೀನಾಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿಸಿದ ಚೀನಾ

ರಾಕ್ಟಿಫೆ ಅವರ ಆರೋಪಗಳನ್ನು ಚೀನಾ ರಾಯಭಾರ ಕಚೇರಿ ನಿರಾಕರಿಸಿದೆ. ವಾಸ್ತವಗಳನ್ನು ತಿರುಚಲಾಗುತ್ತಿದೆ ಮತ್ತು ಈ ಹೇಳಿಕೆಗಳು ಬೂಟಾಟಿಕೆಯಿಂದ ಕೂಡಿದೆ ಎಂದು ಅದು ಹೇಳಿದೆ. ಅಮೆರಿಕ ಈಗಲೂ ಶೀತಲಸಮರದ ಮನಸ್ಥಿತಿಯನ್ನು ಮುಂದುವರಿಸುತ್ತಿದ್ದು, ತನ್ನ ಜನರಲ್ಲಿ ಸೈದ್ಧಾಂತಿಕ ಪೂರ್ವಗ್ರಹಗಳನ್ನು ಬಿತ್ತುತ್ತಿದೆ ಎಂದು ಆರೋಪಿಸಿದೆ.

English summary
US intelligence director John Racliffe said China is the biggest threat to democracy and freedom worldwide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X