ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್‌ಗೆ ಮತ್ತೊಂದು ಸಂಕಷ್ಟ: ಕಾನೂನು ಉಲ್ಲಂಘನೆ ಆರೋಪದಡಿ ತನಿಖೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 7: ಅಮೆರಿಕ ಅಧ್ಯಕ್ಷೀಯ ಚುನಾವಣೆ ಎಲ್ಲ ಪ್ರಕ್ರಿಯೆಗಳು ಮುಗಿಯುವ ವೇಳೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತಷ್ಟು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ಟ್ರಂಪ್ ಅವರ ಪ್ರಚಾರ ತಂಡವು ಚುನಾವಣೆಯ ದಿನದಂದು ತನ್ನ ಮುಖ್ಯ ಕಾರ್ಯನಿರ್ವಹಣಾ ಕೇಂದ್ರವನ್ನಾಗಿ ಶ್ವೇತಭವನವನ್ನು ಬಳಸಿಕೊಳ್ಳುವ ಮೂಲಕ ಫೆಡರಲ್ ಕಾನೂನಿನ ಉಲ್ಲಂಘನೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಅಮೆರಿಕದ ವಿಶೇಷ ಕೌನ್ಸೆಲ್ ಕಚೇರಿ ತನಿಖೆ ಆರಂಭಿಸಿದೆ.

'ಹ್ಯಾಚ್ ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಆರೋಪಗಳಿಗೆ ಸಂಬಂಧಿಸಿದಂತೆ ವಿಶೇಷ ಘಟಕವು ತನಿಖೆ ಆರಂಭಿಸಿದೆ ಎಂಬುದಾಗಿ ತನಿಖೆ ನಡೆಸುವಂತೆ ತಾವು ಮಾಡಿದ್ದ ಮನವಿಗೆ ಸಂಯುಕ್ತ ರಾಷ್ಟ್ರ ಕಾವಲುನಾಯಿಯಾಗಿರುವ ವಿಶೇಷ ಕೌನ್ಸೆಲ್ ಕಚೇರಿ ಗುರುವಾರ ಪ್ರತಿಕ್ರಿಯೆ ನೀಡಿದೆ' ಎಂದು ಡೆಮಾಕ್ರಟಿಕ್ ಪ್ರತಿನಿಧಿ ಬಿಲ್ ಪಾಸ್ಕ್ರೆಲ್ ತಿಳಿಸಿದ್ದಾರೆ.

300ಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ ಎಂದ ಜೋ ಬಿಡೆನ್! 300ಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ ಎಂದ ಜೋ ಬಿಡೆನ್!

ಚುನಾವಣಾ ದಿನವಾದ ಮಂಗಳವಾರ ಶ್ವೇತಭವನದ ನಿವಾದಲ್ಲಿನ ಲಿವಿಂಗ್ ಕೊಠಡಿಯಿಂದಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕ್ರಿಯೆಗಳನ್ನು ಗಮನಿಸಿದ್ದರು. ಬಳಿಕ ಪೂರ್ವ ಕೊಠಡಿಯಲ್ಲಿ ನೆರೆದಿದ್ದ ಸುಮಾರು 200 ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದರು.

US Elections: Special Counsel Probing Donald Trump Capaigns Use Of White House

ಶ್ವೇಭವನದಲ್ಲಿರುವ ಈಸೆನ್ ಹೋವರ್ ಕಾರ್ಯಕಾರಿ ಕಚೇರಿಯ ಕಟ್ಟಡದ ಪಕ್ಕದಲ್ಲಿರುವ ಜಾಗವನ್ನು ಡೊನಾಲ್ಡ್ ಟ್ರಂಪ್ ಪ್ರಚಾರ ಸಮರ ಕೊಠಡಿಯಂತೆ ಬಳಸಿಕೊಂಡಿದ್ದರು. ಇದು ಕಾನೂನಿನ ಉಲ್ಲಂಘನೆ ಎಂದು ಆರೋಪಿಸಿದ್ದ ಪಾಸ್ಕ್ರೆಲ್, ಈ ಬಗ್ಗೆ ತನಿಖೆ ನಡೆಸುವಂತೆ ವಿಶೇಷ ಕೌನ್ಸೆಲ್ ಹೆನ್ರಿ ಕೆರ್ನರ್ ಅವರಿಗೆ ಸೂಚಿಸಿದ್ದರು.

English summary
US Elections: US Office of Special Counsel has opened a probe on Donald Trump's campaign using White House on Election Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X