• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

‘ದಯವಿಟ್ಟು ಟ್ರಂಪ್‌ಗೆ ವೋಟ್ ಹಾಕಬೇಡಿ’: ಹೀಗೆ ಹೇಳಿದ್ದು ಯಾರು ಗೊತ್ತಾ..?

|

ಟ್ರಂಪ್ ವಿರುದ್ಧ ಅವರದ್ದೇ ದೇಶದ ನಾಗರಿಕರು ರೊಚ್ಚಿಗೆದ್ದಿರೋದು ಹಳೇ ಸುದ್ದಿ. ಆದರೆ ಈಗ ವಿಶ್ವದಾದ್ಯಂತ ಟ್ರಂಪ್ ವಿರುದ್ಧ ಆಕ್ರೋಶ ಮೊಳಗುತ್ತಿದೆ. ಇನ್ನೇನು ಚುನಾವಣೆಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇರುವಾಗಲೇ ಹೋರಾಟಗಾರರು ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಪರಿಸರ ರಕ್ಷಣೆಗೆ ಹೋರಾಡುತ್ತಿರುವ 17 ವರ್ಷದ ಗ್ರೇಟಾ ಥನ್ಬರ್ಗ್, ಈ ಬಾರಿ ಟ್ರಂಪ್‌ಗೆ ವೋಟ್ ಹಾಕ್ಬೇಡಿ ಅಂತಾ ಮನವಿ ಮಾಡಿದ್ದಾರೆ. ಗ್ರೇಟಾ ಅತಿ ಕಿರಿಯ ವಯಸ್ಸಿನಲ್ಲೇ ಪರಿಸರ ಸಂರಕ್ಷಣೆಗಾಗಿ ಹೋರಾಟಕ್ಕೆ ಧುಮುಕಿದ ಬಾಲಕಿ. ಅಲ್ಲದೆ ಇತ್ತೀಚೆಗೆ ತನಗೆ ಬಂದಿದ್ದ ಬಹುಮಾನದ ಮೊತ್ತವನ್ನೇ ಪರಿಸರ ಸಂರಕ್ಷಣೆಗೆ ದಾನ ಮಾಡಿದ್ದರು.

ಕೊವಿಡ್ ಹೋರಾಟಕ್ಕೆ 100,000 ಡಾಲರ್ ದೇಣಿಗೆ ನೀಡಿದ ಗ್ರೇಟಾ ಥನ್

ಭೂ ವಾತಾವರಣ ರಕ್ಷಣೆಗಾಗಿ 1 ಮಿಲಿಯನ್ ಡಾಲರ್ ದಾನ ಮಾಡಿದ್ದರು. 'ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬಂತೆ ಗ್ರೇಟಾ ಈ ಸಣ್ಣ ವಯಸ್ಸಿನಲ್ಲೇ ವಿಶ್ವ ನಾಯಕರ ಬೆವರಿಳಿಸಿದ್ದಾಳೆ. ಪರಿಸರವನ್ನು ಹಾಳು ಮಾಡುತ್ತಿರುವ ನಾಯಕರ ವಿರುದ್ಧ ನೇರವಾಗಿ ಆಕ್ರೋಶ ಹೊರಹಾಕಿದ ಕೀರ್ತಿ ಗೇಟಾಗೆ ಸಲ್ಲುತ್ತದೆ. ಆದರೆ ಇಂತಹ ಹೋರಾಟಗಾರ್ತಿ ಈವರೆಗೂ ರಾಜಕೀಯದಿಂದ ದೂರ ಉಳಿದಿದ್ದರು. ಈ ಬಾರಿ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದು, ಜೋ ಬಿಡೆನ್‌ರನ್ನ ಅಮೆರಿಕನ್ನರು ಒಗ್ಗಟ್ಟಿನಿಂದ ಆರಿಸಿ ಎಂದು ಮನವಿ ಮಾಡಿದ್ದಾಳೆ.

ಟ್ರಂಪ್ v/s ಗ್ರೇಟಾ: ಯಾರು ಗ್ರೇಟ್..?

ಟ್ರಂಪ್ v/s ಗ್ರೇಟಾ: ಯಾರು ಗ್ರೇಟ್..?

ಟ್ರಂಪ್ ಹಾಗೂ ಗ್ರೇಟಾ ಥನ್ಬರ್ಗ್ ನಡುವೆ ನಡೆಯುತ್ತಿರುವ ಹೋರಾಟ ಇಂದು ಅಥವಾ ನಿನ್ನೆಯದಲ್ಲ ಈ ಮುಸುಕಿನ ಗುದ್ದಾಟ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಹಿಂದೆ ಟ್ರಂಪ್ ಗ್ರೇಟಾ ಬಗ್ಗೆ ಟ್ವೀಟ್ ಮಾಡಿ ನೀನು ಶಾಂತವಾಗಿರು ಎಂದು ಹೇಳಿದ್ದರು. ಇದಕ್ಕೆ ಗ್ರೇಟಾ ಸರಿಯಾಗೇ ತಿರುಗೇಟು ನೀಡಿದ್ದರು. ಇಷ್ಟು ವಾದ, ವಿವಾದ ನಡೆದರೂ ಗ್ರೇಟಾ ಎಂದಿಗೂ ಅಮೆರಿಕದ ರಾಜಕೀಯದಲ್ಲಿ ಮೂಗು ತೂರಿಸಿರಲಿಲ್ಲ. ಆದರೆ ಈ ಬಾರಿ ಬಿಡೆನ್ ಪರವಾಗಿ ನಿಲುವು ತಾಳಿದ್ದು, ಟ್ರಂಪ್‌ಗೆ ಮತ ಹಾಕಬೇಡಿ ಅಂತಾ ಗ್ರೇಟಾ ಮನವಿ ಜನರಲ್ಲಿ ಮಾಡಿಕೊಂಡಿದ್ದಾಳೆ.

ವಾತಾವರಣ ತಣ್ಣಗಾಗುತ್ತೆ, ವಿಜ್ಞಾನಿಗಳಿಗೆ ಗೊತ್ತಿಲ್ಲ..!

ವಾತಾವರಣ ತಣ್ಣಗಾಗುತ್ತೆ, ವಿಜ್ಞಾನಿಗಳಿಗೆ ಗೊತ್ತಿಲ್ಲ..!

ಅರೆ ಹೀಗೆ ಹೇಳಿದ್ದು ಬೇರೆ ಯಾರೂ ಅಲ್ಲ ಸ್ವಾಮಿ, ಖುದ್ದು ಅಮೆರಿಕ ಅಧ್ಯಕ್ಷರೂ ಆಗಿರುವ ಜಗತ್ತಿನ ಶಕ್ತಿಶಾಲಿ ನಾಯಕ ಡೊನಾಲ್ಡ್ ಟ್ರಂಪ್. ಹಾವಾಮಾನ ವೈಪರಿತ್ಯದ ಬಗ್ಗೆ ಸಂವಾದ ಒಂದರಲ್ಲಿ ಉತ್ತರಿಸುವಾಗ ಟ್ರಂಪ್ ಬಾಯಿಗೆ ಬಂದಂತೆ ಮಾಡನಾಡಿದ್ದರು. ವಾತಾವರಣ ತಣ್ಣಗಾಗುತ್ತೆ, ಆದರೆ ವಿಜ್ಞಾನಿಗಳಿಗೆ ಗೊತ್ತಾದಂತಿಲ್ಲ ಎಂದಿದ್ದರು. ಇದು ಜಗತ್ತನ್ನೇ ಕೆರಳಿ ಕೆಂಡವಾಗುವಂತೆ ಮಾಡಿತ್ತು. ಇಷ್ಟೇ ಅಲ್ಲ ಅಮೆರಿಕದ ಕ್ಯಾಲಿಫೋರ್ನಿಯ ಸ್ಟೇಟ್‌ನಲ್ಲಿ ಕಾಡ್ಗಿಚ್ಚು ಧಗಧಗಿಸುವ ಸಂದರ್ಭದಲ್ಲೂ ಟ್ರಂಪ್ ಹೀಗೆ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು.

ಕ್ಯಾಲಿಫೋರ್ನಿಯ ಈಗ ಅಕ್ಷರಶಃ ನರಕ

ಕ್ಯಾಲಿಫೋರ್ನಿಯ ಈಗ ಅಕ್ಷರಶಃ ನರಕ

ಕಳೆದ ತಿಂಗಳು ಕ್ಯಾಲಿಫೋರ್ನಿಯ ನೋಡಲು ಥೇಟ್ ನರಕದಂತೆ ಬದಲಾಗಿತ್ತು. ಎಲ್ಲವೂ ಸುಟ್ಟು ಕರಕಲಾಗಿ ಹೋಗಿತ್ತು. ಸಾವಿರಾರು ಮನೆಗಳು ಬೆಂಕಿ ಕೆನ್ನಾಲಿಗೆಗೆ ಸಿಲುಕಿ ನಾಶವಾಗಿದ್ದವು. 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬೆಂಕಿ ಹಬ್ಬಿ, 28 ಭಾಗಗಳಲ್ಲಿ ಬೆಂಕಿ ಹಿಡಿತಕ್ಕೆ ಸಿಗದೆ ಧಗಧಗಿಸಿತ್ತು. ಆಗ ಸಂವಾದಲ್ಲಿ ಪಾಲ್ಗೊಂಡಿದ್ದ ಟ್ರಂಪ್‌ ಹವಾಮಾನ ವೈಪರಿತ್ಯದ ಬಗ್ಗೆ ಮಾತನಾಡಿದ್ದರು.

ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದ ಟ್ರಂಪ್

ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದ ಟ್ರಂಪ್

ಸಂವಾದದ ಸಂದರ್ಭ ಕೇಳಿಬಂದಿದ್ದ ಪ್ರಶ್ನೆಗೆ ಟ್ರಂಪ್ ಉತ್ತರ ನೀಡುವಾಗ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು. ಕ್ಯಾಲಿಫೋರ್ನಿಯ ಸ್ಟೇಟ್‌ನಲ್ಲಿ ಹೊತ್ತಿರುವ ಕಾಡ್ಗಿಚ್ಚು ಹವಾಮಾನ ವೈಪರಿತ್ಯದ ಪರಿಣಾಮವೇ ಎಂದು ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತಾ, ಇಲ್ಲ ಇಲ್ಲ ವಾತಾವರಣ ಈಗ ತಣ್ಣಗಾಗುತ್ತಿದೆ. ಕಾದು ನೋಡಿ, ಬಹುಶಃ ಇದು ವಿಜ್ಞಾನಕ್ಕೆ ತಿಳಿದಂತಿಲ್ಲ ಎಂದಿದ್ದರು. ಟ್ರಂಪ್ ನೀಡಿದ್ದ ಹೇಳಿಕೆ ವಿರುದ್ಧ ಪರಿಸರ ಹೋರಾಟಗಾರರು, ವಿಜ್ಞಾನಿಗಳು ಹರಿಹಾಯ್ದಿದ್ದರು. ಟ್ರಂಪ್ ಎದುರಾಳಿ ಬಿಡೆನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಟ್ರಂಪ್ ಬೆಂಕಿ ಹಚ್ಚುವವ ಎಂದಿದ್ದರು.

ಡೊನಾಲ್ಡ್ ಟ್ರಂಪ್ ನಿದ್ದೆಗೆಡಿಸುತ್ತಿರುವ ಆ ಹುಡುಗಿ ಯಾರು?

English summary
Environmental fighter Greta Thunberg has held a barrage against Trump. Greta also appealed to US voters to Cast their vote to Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X