ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆ: 276 ನಕಲಿ ಖಾತೆಗಳನ್ನು ರದ್ದುಗೊಳಿಸಿದ ಫೇಸ್‌ಬುಕ್

|
Google Oneindia Kannada News

ಮೆಲ್ನೋ ಪಾರ್ಕ್, ಅಕ್ಟೋಬರ್ 09: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ 276 ನಕಲಿ ಖಾತೆಗಳನ್ನು ಫೇಸ್‌ಬುಕ್ ರದ್ದುಗೊಳಿಸಿದೆ.

ಮತದಾರರ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಈ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು.

ಜೋ ಬೈಡೆನ್ ಗೆದ್ರೂ ''ಕಮ್ಯೂನಿಸ್ಟ್'' ಕಮಲಾ ಅಧ್ಯಕ್ಷೆಯಾಗ್ತಾರೆ: ಟ್ರಂಪ್ಜೋ ಬೈಡೆನ್ ಗೆದ್ರೂ ''ಕಮ್ಯೂನಿಸ್ಟ್'' ಕಮಲಾ ಅಧ್ಯಕ್ಷೆಯಾಗ್ತಾರೆ: ಟ್ರಂಪ್

ಈಗ ಫೇಸ್‌ಬುಕ್ ನಿಂದ ನಿಷೇಧಕ್ಕೊಳಗಾಗಿರುವ ರಾಲಿ ಫೋರ್ಜ್ ಸಂಸ್ಥೆ 2018ರ ಮಧ್ಯಂತರ ಚುನಾವಣೆಗೂ ಮೊದಲಿನಿಂದಲೇ ಕಾರ್ಯಪ್ರವೃತ್ತರಾಗಿದ್ದು, ನಕಲಿ ಖಾತೆಗಳ ಮೂಲಕ ಡೆಮಾಕ್ರೆಟಿಕ್ ಪಕ್ಷ ಹಾಗೂ ಅದರ ಅಭ್ಯರ್ಥಿಗಳನ್ನು ಟೀಕಿಸುವ ಮತ್ತು ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದವರನ್ನು ಪ್ರಶಂಶಿಸುವಂತಹ ಪೋಸ್ಟ್‌ಗಳನ್ನು ಪ್ರಕಟಿಸುತ್ತಿತ್ತು.

US Elections: Facebook Removes Fake Accounts Linked To Conservative Group

ನಕಲಿ ಖಾತೆಗಳನ್ನು ತೆರೆದಿದ್ದ ಅರಿಜೊನಾ ಮೂಲದ ರಾಲಿ ಫೋರ್ಜ್ ಎಂಬ ಡಿಜಿಟಲ್ ಸಂವಹನ ಸಂಸ್ಥೆಯನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಟರ್ನಿಂಗ್ ಪಾಯಿಂಟ್ ಆಕ್ಷನ್ ಸಂಸ್ಥೆಯು ಟ್ರಂಪ್ ಪರವಾದ ಸಂದೇಶಗಳು ಹಾಗೂ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಯುವ ಸಮುದಾಯವನ್ನು ಬಳಸಿಕೊಳ್ಳುತ್ತಿದೆ. ಅದಕ್ಕಾಗಿ ಅವರಿಗೆ ಹಣವನ್ನೂ ಕೂಡ ನೀಡುತ್ತಿದೆ. ಇದು ಫೇಸ್‌ಬುಕ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ಸುದ್ದಿ ಪ್ರಕಟಿಸಿತ್ತು.

ಕೊರೊನಾ ಸೋಂಕು ಒಂದು ಸಾಮಾನ್ಯ ಜ್ವರವಷ್ಟೇ ಎಂದು ಡೊನಾಲ್ಡ್ ಟ್ರಂಪ್ ಮಾಡಿದ್ದ ಟ್ವೀಟನ್ನು ಫೇಸ್‌ಬುಕ್‌ ಇತ್ತೀಚೆಗಷಷ್ಟೇ ಡಿಲೀಟ್ ಮಾಡಿತ್ತು.

English summary
Facebook has removed 276 accounts that used fake profiles to pose as right-leaning Americans and comment on news articles, often in favour of President Donald Trump, the company announced on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X