ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ತಿಂಗಳ ಬಳಿಕ ಡೊನಾಲ್ಡ್ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಂಡ ಬಾಲಕಿ ಗ್ರೆಟಾ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 6: ಜಾಗತಿಕ ತಾಪಮಾನ ನಿಯಂತ್ರನದ ಕುರಿತಾದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುವ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದ ಮಾತುಗಳಿಗೆ ಪರಿಸರ ಹೋರಾಟದಿಂದ ಗುರುತಿಸಿಕೊಂಡ ಬಾಲಕಿ ಗ್ರೆಟಾ ಥನ್‌ಬರ್ಗ್ ಈಗ ತಿರುಗೇಟು ನೀಡಿದ್ದಾರೆ. ಟ್ರಂಪ್ ಅವರಿಗೆ ತೀಕ್ಷ್ಣ ಉತ್ತರ ನೀಡಲು ಅವರು 11 ತಿಂಗಳ ಬಳಿಕ ಅಮೆರಿಕ ಚುನಾವಣೆ ಫಲಿತಾಂಶವನ್ನು ಬಳಸಿಕೊಂಡಿದ್ದಾರೆ.

2019ರಲ್ಲಿ 'ಟೈಮ್ಸ್' ಪತ್ರಿಕೆಯ ವರ್ಷದ ವ್ಯಕ್ತಿ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿದ್ದ ಗ್ರೆಟಾ ಥನ್‌ಬರ್ಗ್ ಅವರನ್ನು ಡೊನಾಲ್ಡ್ ಟ್ರಂಪ್ ಅಣಕಿಸಿದ್ದರು. ಡೊನಾಲ್ಡ್ ಟ್ರಂಪ್ ಅವರ ಹಿಂದಿನ ಮಾತುಗಳನ್ನೇ ಬಳಸಿಕೊಂಡಿರುವ ಗ್ರೆಟಾ, ಮತದಾನದಲ್ಲಿ ಮೋಸ ನಡೆಸಿದೆ ಎಂಬ ಟ್ರಂಪ್ ಆರೋಪವನ್ನು ಲೇವಡಿ ಮಾಡಿದ್ದಾರೆ.

120 ವರ್ಷದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನ120 ವರ್ಷದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನ

'ಎಷ್ಟು ಹಾಸ್ಯಾಸ್ಪದ. ಡೊನಾಲ್ಡ್ ಟ್ರಂಪ್ ಮೊದಲು ತಮ್ಮ ಕೋಪ ನಿಯಂತ್ರಣ ಸಮಸ್ಯೆಯತ್ತ ಗಮನ ಹರಿಸಬೇಕು. ಬಳಿಕ ತಮ್ಮ ಸ್ನೇಹಿತರೊಬ್ಬರ ಜತೆಗೆ ಒಳ್ಳೆಯ ಹಳೆಯ ಶೈಲಿಯ ಸಿನಿಮಾ ನೀಡಲು ಹೋಗಬೇಕು. ಚಿಲ್, ಡೊನಾಲ್ಡ್ ಚಿಲ್!' ಎಂದು ಗ್ರೆಟಾ ಥನ್‌ಬರ್ಗ್ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ.

ಟ್ರಂಪ್ ಟ್ವೀಟ್‌ಗೆ ವ್ಯಂಗ್ಯ

ಟ್ರಂಪ್ ಟ್ವೀಟ್‌ಗೆ ವ್ಯಂಗ್ಯ

ಮತ ಎಣಿಕೆಯಲ್ಲಿ ಮೋಸ ನಡೆಯುತ್ತಿದೆ ಎಂದು ಪದೇ ಪದೇ ಆಧಾರರಹಿತ ಆರೋಪ ಮಾಡುತ್ತಿರುವ ಡೊನಾಅಲ್ಡ್ ಟ್ರಂಪ್ ಗುರುವಾರ 'ಮತ ಎಣಿಕೆ ನಿಲ್ಲಿಸಿ' ಎಂದು ಟ್ವೀಟ್ ಮಾಡಿದ್ದರು. ಅನ್ನು ರೀ ಟ್ವೀಟ್ ಮಾಡಿರುವ ಗ್ರೆಟಾ, ವ್ಯಂಗ್ಯವಾಡಿದ್ದಾರೆ.

ಗ್ರೆಟಾಳನ್ನು ಟೀಕಿಸಿದ್ದ ಟ್ರಂಪ್

ಗ್ರೆಟಾಳನ್ನು ಟೀಕಿಸಿದ್ದ ಟ್ರಂಪ್

ಡೊನಾಲ್ಡ್ ಟ್ರಂಪ್ 2019ರ ಡಿಸೆಂಬರ್‌ನಲ್ಲಿ ತಮ್ಮನ್ನು ಲೇವಡಿ ಮಾಡಲು ಬಳಸಿದ್ದ ಸಾಲುಗಳನ್ನೇ ಗ್ರೆಟಾ ಬಳಸಿದ್ದಾರೆ. 17 ವರ್ಷದ ಹವಾಮಾನ ಹೋರಾಟಗಾರ್ತಿ ಗ್ರೆಟಾ ಅವರನ್ನು ವರ್ಷದ ವ್ಯಕ್ತಿ ಎಂದು ಹೆಸರಿಸಿದ್ದ ಟೈಮ್ ಮ್ಯಾಗಜೀನ್ ನಿರ್ಧಾರವನ್ನು ಟೀಕಿಸಿದ್ದ ಟ್ರಂಪ್, 'ಎಷ್ಟು ಹಾಸ್ಯಾಸ್ಪದ. ಗ್ರೆಟಾ ಮೊದಲು ತನ್ನ ಕೋಪ ನಿಯಂತ್ರಣ ಸಮಸ್ಯೆಯತ್ತ ಗಮನ ಹರಿಸಬೇಕು. ಬಳಿಕ ತಮ್ಮ ಸ್ನೇಹಿತರೊಬ್ಬರ ಜತೆಗೆ ಒಳ್ಳೆಯ ಹಳೆಯ ಶೈಲಿಯ ಸಿನಿಮಾ ನೀಡಲು ಹೋಗಬೇಕು. ಚಿಲ್, ಗ್ರೆಟಾ ಚಿಲ್!' ಎಂದು ವ್ಯಂಗ್ಯವಾಡಿದ್ದರು.

ವಂಚನೆ ಆರೋಪಕ್ಕೆ ಸಿಗದ ಬೆಂಬಲ: ಸ್ವಪಕ್ಷೀಯರಿಂದಲೇ ಟ್ರಂಪ್‌ಗೆ ಮುಜುಗರವಂಚನೆ ಆರೋಪಕ್ಕೆ ಸಿಗದ ಬೆಂಬಲ: ಸ್ವಪಕ್ಷೀಯರಿಂದಲೇ ಟ್ರಂಪ್‌ಗೆ ಮುಜುಗರ

ಗ್ರೆಟಾಗೆ ಭಾರಿ ಬೆಂಬಲ

ಗ್ರೆಟಾಗೆ ಭಾರಿ ಬೆಂಬಲ

ಗ್ರೆಟಾ ಮಾಡಿರುವ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಲಕ್ಷಾಂತರ ಮಂದಿ ಅದನ್ನು ಮೆಚ್ಚಿಕೊಂಡಿದ್ದಾರೆ. 2019ರಲ್ಲಿ ಟ್ರಂಪ್ ಮಾಡಿದ್ದ ಟ್ವೀಟ್ ಅನ್ನು ಸುಮಾರು ಎರಡು ಲಕ್ಷ ಜನರು ಮೆಚ್ಚಿಕೊಂಡಿದ್ದರು. ಆದರೆ ಗ್ರೆಟಾ ಗುರುವಾರ ಮಾಡಿರುವ ಟ್ವೀಟ್ ಈಗಾಗಲೇ ಹತ್ತು ಲಕ್ಷಕ್ಕೂ ಅಧಿಕ ಲೈಕ್‌ ಮತ್ತು ಶೇರ್‌ಗಳನ್ನು ಪಡೆದಿದೆ.

ಟೀಕೆಗೊಳಗಾದ ಟ್ರಂಪ್

ಟೀಕೆಗೊಳಗಾದ ಟ್ರಂಪ್

ತಮ್ಮಿಂದ ಚುನಾವಣೆಯನ್ನು ಕಿತ್ತುಕೊಳ್ಳಲಾಗಿದೆ. ಕಾನೂನುಬದ್ಧವಾಗಿ ಚುನಾವಣೆಯ ನಡೆದರೆ ತಾವೇ ಗೆಲ್ಲುವುದು ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಅಲ್ಲದೆ, ಈ ಆರೋಪದೊಂದಿಗೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅವರು ಚುನಾವಣೆಯಲ್ಲಿ ವಂಚನೆ ನಡೆಸಿರುವ ಆರೋಪಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ. ಹೀಗಾಗಿ ಟ್ರಂಪ್ ಅವರ ನಡೆಯನ್ನು ಅವರದೇ ರಿಪಬ್ಲಿಕನ್ ಪಕ್ಷದ ಸದಸ್ಯರೇ ಟೀಕಿಸಿದ್ದಾರೆ.

English summary
US Elections: Climate activist girl Greta Thunberg trolled Donald Trump with his own words used to mock her 11 months back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X