ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ಎ ಮುಂದಿನ ಅಧ್ಯಕ್ಷ ಜೋ ಬೈಡನ್ : ನ್ಯಾನ್ಸಿ ಪೆಲೋಸಿ

|
Google Oneindia Kannada News

ವಾಶಿಂಗ್ಟನ್, ನವೆಂಬರ್.06: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಹೊರ ಬೀಳುವುದಕ್ಕೂ ಮೊದಲೇ ಜೋ ಬಿಡೆನ್ ಅವರೇ ಮುಂದಿನ ಅಮೆರಿಕಾ ಅಧ್ಯಕ್ಷರು ಎಂದು ಡೆಮಾಕ್ರೆಟಿಕ್ ಕಾಂಗ್ರೆಸ್ಸಿನ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕರೆದಿದ್ದಾರೆ.

ಶುಕ್ರವಾರ ಬೆಳಗ್ಗೆ ಹೊತ್ತಿಗಿನ ಫಲಿತಾಂಶವನ್ನೇ ಗಮನಿಸಿದಾಗ ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಶ್ವೇತಭವನ ಪ್ರವೇಶಿಸುವುದು ಖಚಿತವಾಗಲಿದೆ. ಉಭಯ ನಾಯಕರು ಗೆಲುವು ಸಾಧಿಸುತ್ತಾರೆ ಎಂದು ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ರನ್ನು ಹಿಂದಿಕ್ಕಿದ ಜೋ ಬಿಡೆನ್ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ರನ್ನು ಹಿಂದಿಕ್ಕಿದ ಜೋ ಬಿಡೆನ್

US Election Updates: Joe Biden Is US President-Elect; Says Democrat Nancy Pelosi

ಈ ಚುನಾವಣೆಯಲ್ಲೇ ನಿರ್ಣಾಯಕ ಎನಿಸಿದ್ದ ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ರನ್ನು ಜೋ ಬಿಡೆನ್ ಹಿಂದಿಕ್ಕಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ 31412 ಮತಗಳ ಪೈಕಿ ಶೇ.87ರಷ್ಟು ಮತಗಳು ಜೋ ಬಿಡೆನ್ ಅವರ ಪಾಲಾಗಿದ್ದು, 3760 ಮತಗಳನ್ನು ಮಾತ್ರ ಟ್ರಂಪ್ ಪಡೆದುಕೊಂಡಿದ್ದಾರೆ. ಇದರಿಂದಾಗಿ ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡೆನ್, ಟ್ರಂಪ್ ಅವರಿಗಿಂತ 8867 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

"ಜೋ ಬಿಡೆನ್ ರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವುದಕ್ಕೆ ದೃಢ ಸಂಕಲ್ಪ ಮಾಡಿದ್ದಾರೆ. ಇಂದು ನಮ್ಮ ದೇಶಕ್ಕೆ ಸಂತೋಷದ ದಿನ. ಜೋ ಬಿಡೆನ್ ಏಕೀಕೃತ ವ್ಯಕ್ತಿ, ಏಕೆಂದರೆ ಅವರಲ್ಲಿ ಜನರನ್ನು ಒಟ್ಟುಗೂಡಿಸಲು ದೃಢ ನಿಶ್ಚಯವಿದೆ" ಎಂದು ನ್ಯಾನ್ಸಿ ಫೆಲೋಸಿ ಹೇಳಿದ್ದಾರೆ.

264 ಮತಗಳನ್ನು ಪಡೆದುಕೊಂಡಿರುವ ಬಿಡೆನ್ ಅವರಿಗೆ ಪೆನ್ಸಿಲ್ವೇನಿಯಾದ ಗೆಲುವೊಂದೇ ಸಾಕು. ಅಧ್ಯಕ್ಷ ಸ್ಥಾನಕ್ಕೆ ಏರಲು ಬೇಕಾದ 270 ಮತಗಳನ್ನು ಪಡೆದುಕೊಂಡು ಬಿಡುತ್ತಾರೆ. ಈಗಾಗಲೇ ಪೆನ್ಸಿಲ್ವೇನಿಯಾದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿರುವ ಅವರ ಗೆಲುವು ನಿಶ್ಚಿತವಾಗಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಮುನ್ನಡೆ ಜೋ ಬಿಡೆನ್ 264 ಮತಗಳನ್ನು ಪಡೆದುಕೊಳ್ಳುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 214 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.

English summary
US Presidential Election Updates: Joe Biden Is US President-Elect; Says Democrat Nancy Pelosi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X