ಅಮೆರಿಕದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ
ವಾಷಿಂಗ್ಟನ್, ಜುಲೈ 10: ಅಮೆರಿಕದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ಪಾಕಿಸ್ತಾನ ಪೈಲಟ್‌ಗಳ ಪ್ರಮಾಣಪತ್ರದ ಬಗ್ಗೆ ಅಮೆರಿಕ ವಿಮಾನಯಾನ ಪ್ರಾಧಿಕಾರ ಸಾಕಷ್ಟು ಸಂದೇಹ ಹೊಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಯುರೋಪಿಯನ್ ಯೂನಿಯನ್ ಆವಿಯೇಷನ್ ಸೇಫ್ಟಿ ಏಜೆನ್ಸಿಯು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಮುಂದಿನ ಆರು ತಿಂಗಳಿಗೆ ನಿಷೇಧಿಸಿದೆ. ಪಾಕಿಸ್ತಾನ ಪೈಲಟ್‌ಗಳಿಗೆ ನೀಡಿರುವ ತರಬೇತಿ ಪ್ರಮಾಣ ಪತ್ರದ ಕುರಿತು ಸಾಕಷ್ಟು ಅನುಮಾನವನ್ನು ಅಮೆರಿಕ ವ್ಯಕ್ತಪಡಿಸಿದೆ.

ಅಮೆರಿಕ ವಿಮಾನಗಳ ಹಾರಾಟ ನಿಷೇಧಿಸಿರುವ ಕುರಿತು ಪಾಕಿಸ್ತಾನ ಮಾಹಿತಿ ನೀಡಿದೆ. ಇತ್ತೀಚೆಗಷ್ಟೇ ಪಾಕಿಸ್ತಾನ ವಿಮಾನ ಅಪಘಾತ ಸಂಭವಿಸಿ 97 ಮಂದಿ ಮೃತಪಟ್ಟಿದ್ದರು. ಬಳಿಕ ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಪೈಲಟ್ ಕೊರೊನಾ ವಿಚಾರವಾಗಿ ಮಾತನಾಡುತ್ತಿದ್ದರು, ಹೀಗಾಗಿ ಅವರ ಯೋಚನೆ ವಿಮಾನದ ಕಡೆ ಇರಲಿಲ್ಲ ಎಂಬುದು ಸ್ಪಷ್ಟವಾದ ಕಾರಣ ಸಧ್ಯಕ್ಕಂತೂ ಪಾಕಿಸ್ತಾನ ವಿಮಾನ ಹಾರಾಟ ಅವಕಶ್ಯಕತೆ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.












Click it and Unblock the Notifications