• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲ ಹಿಂದೂ ಮಹಿಳೆ ತುಳಸಿ ಸ್ಪರ್ಧೆ!?

|

ವಾಷಿಂಗ್ಟನ್, ನವೆಂಬರ್ 12: 2020ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಯುಎಸ್ ಕಾಂಗ್ರೆಸ್ ನಲ್ಲಿನ ಹಿಂದೂ ಜನಪ್ರತಿನಿಧಿ ತುಳಸಿ ಗಬ್ಬರ್ದ್ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಲಾಸ್ ಏಂಜಲೀಸ್ ನಲ್ಲಿ ಶುಕ್ರವಾರ ಸಮಾವೇಶವೊಂದರಲ್ಲಿ ಮಾತನಾಡಿದ ಭಾರತೀಯ-ಅಮೆರಿಕನ್ ಡಾ.ಸಂಪತ್ ಶಿವಾಂಗಿ ಮಾತನಾಡಿ, ಇವರು ತುಳಸಿ ಗಬ್ಬರ್ದ್. ಮೂವತ್ತೇಳು ವರ್ಷ. ಅವರು 2020ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ಹೇಳಿದ್ದಾರೆ.

ಹವಾಯಿಯಿಂದ ನಾಲ್ಕು ಸಲ ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ ತುಳಸಿ ಸಮ್ಮುಖದಲ್ಲೇ ಈ ಹೇಳಿಕೆ ನೀಡಿದ್ದಾರೆ. ಅಲ್ಲಿ ಸೇರಿದ್ದವರನ್ನು ಉದ್ದೇಶಿಸಿ ಮಾತನಾಡಿದ ತುಳಸಿ, ಈ ಬಗ್ಗೆ ಹೌದು ಅಥವಾ ಇಲ್ಲ ಅಂತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಕ್ರಿಸ್ ಮಸ್ ಗೆ ಸ್ವಲ್ಪ ಮುಂಚೆ ನಿರ್ಧರಿಸಲಾಗುವುದು. ಅದು ಅಧಿಕೃತ ಘೋಷಣೆ ಆಗಬೇಕು ಅಂತಲೂ ಇಲ್ಲ. ಮುಂದಿನ ವರ್ಷಕ್ಕೂ ಹೋಗಬಹುದು. ಅಲ್ಲಿಯವರೆಗೆ ಆಕೆಯ ಆಲೋಚನೆ ಬಗ್ಗೆ ಜನರಿಗೆ ಪರಿಚಯ ಆಗಬೇಕು ಎಂಬುದೇ ಉದ್ದೇಶ ಎಂದು ಸುದ್ದಿ ಮಾಧ್ಯಮ ವರದಿ ಮಾಡಿದೆ.

ಯುಎಸ್ ಚುನಾವಣೆ: ಪುನಾರಾಯ್ಕೆಯಾದ ನಾಲ್ವರು ಭಾರತೀಯರು

ತುಳಸಿ ಹಾಗೂ ಆಕೆ ತಂಡದವರು ದೇಣಿಗೆ ನೀಡುವವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಅದರಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಇಂಡೋ-ಅಮೆರಿಕನ್ನರು ಒಳಗೊಂಡಿದ್ದಾರೆ. ಭಾರತೀಯ-ಅಮೆರಿಕನ್ ಸಮುದಾಯದಲ್ಲಿ ತುಳಸಿ ಬಹಳ ಪ್ರಖ್ಯಾತರು. ಅಮೆರಿಕದಲ್ಲಿ ಯಹೂದಿಗಳನ್ನು ಬಿಟ್ಟರೆ ಅತಿ ಹೆಚ್ಚು ಸಮುದಾಯ ಇದು. ಅಮೆರಿಕದ ಹಲವು ಮುಖ್ಯ ರಾಜ್ಯಗಳ ಚುನಾವಣೆಗಳಲ್ಲಿ ಇಂಡೋ ಅಮೆರಿಕನ್ನರು ಪ್ರಮುಖ ಪಾತ್ರ ವಹಿಸುತ್ತಾರೆ.

ಒಂದು ವೇಳೆ ತುಳಸಿ ಗಬ್ಬರ್ದ್ ಅದ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡುವುದೇ ಖಾತ್ರಿಯಾದರೆ ಅಲ್ಲಿನ ಪ್ರಮುಖ ಪಕ್ಷವೊಂದರಿಂದ ವೈಟ್ ಹೌಸ್ ಗೆ ಸ್ಪರ್ಧೆ ಮಾಡುತ್ತಿರುವ ಮೊದಲ ಹಿಂದೂ ಅಭ್ಯರ್ಥಿ ಆಕೆ. ಒಂದು ವೇಳೆ ಆಕೆ ಆಯ್ಕೆಯಾದರೆ ಅತ್ಯಂತ ಚಿಕ್ಕ ವಯಸ್ಸಿಗೆ ಆಯ್ಕೆಯಾದ ಮೊದಲ ಮಹಿಳೆ ಆಗುತ್ತಾರೆ.

Results are coming! ಟ್ರಂಪ್ ರನ್ನು ಮತ್ತೆ ಅಪ್ಪಿಕೊಂಡಿತಾ ಅಮೆರಿಕ?

ಕಳೆದ ವಾರ ತುಳಸಿ ಅವರು ಅಮೆರಿಕದ ಪ್ರತಿನಿಧಿಗಳ ಸಭೆಗೆ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ.

English summary
Tulsi Gabbard, the first Hindu lawmaker in the US Congress, is considering to run for American presidency in 2020, according to sources close to her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X