ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ರಕ್ಷಣಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್

|
Google Oneindia Kannada News

ವಾಷಿಂಗ್ಟನ್, ಮೇ 7: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಕ್ಷಣಾ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಈ ಸುದ್ದಿಯನ್ನು ಸ್ವತಃ ವೈಟ್‌ಹೌಸ್‌ ಕೂಡ ದೃಢಪಡಿಸಿದೆ.

ವೈಟ್‌ಹೌಸ್‌ನಲ್ಲಿ ಕಾರ್ಯನಿರ್ವಹಿಸುವ ಯುಎಸ್ ಮಿಲಿಟರಿ ಪಡೆಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ವೈಟ್‌ಹೌಸ್ ವೈದ್ಯಕೀಯ ಸಿಬ್ಬಂದಿ ಬುಧವಾರ ಖಚಿತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಪರೀಕ್ಷೆಗೆ ಒಳಪಡಿಸಿದ್ದು, ವರದಿ ನೆಗಿಟಿವ್ ಬಂದಿದೆ'' ವೈಟ್‌ಹೌಸ್ ಉಪ ಕಾರ್ಯದರ್ಶಿ ಹೊಗನ್ ಗಿಡ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ತಾನೇ ರೂಪಿಸಿದ ಕಾನೂನನ್ನು 'ಪಾಲಿಸುವುದಿಲ್ಲ' ಎಂದ ಡೊನಾಲ್ಡ್ ಟ್ರಂಪ್ ತಾನೇ ರೂಪಿಸಿದ ಕಾನೂನನ್ನು 'ಪಾಲಿಸುವುದಿಲ್ಲ' ಎಂದ ಡೊನಾಲ್ಡ್ ಟ್ರಂಪ್

ರಕ್ಷಣಾ ಸಿಬ್ಬಂದಿಗಳು ವೈಟ್‌ಹೌಸ್‌ಗೆ ಮೀಸಲಾಗಿರುವ ಮಿಲಿಟರಿ ಘಟಕದ ಸದಸ್ಯರಾಗಿದ್ದು, ಅಧ್ಯಕ್ಷ ಮತ್ತು ಕುಟುಂಬಕ್ಕೆ ಬಹಳ ಹತ್ತಿರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಧ್ಯಕ್ಷರ ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದಂತೆ ಈ ರಕ್ಷಣಾ (Valets) ಸಿಬ್ಬಂದಿಗಳು ಗಮನ ಹರಿಸುತ್ತಾರೆ. ವಿದೇಶಗಳಿಗೆ ಹೋದಾಗಲೂ ಅಧ್ಯಕ್ಷರ ಜೊತೆ ಇರ್ತಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಟ್ರಂಪ್ ಅವರಿಗೂ ವೈದ್ಯರು ಪರೀಕ್ಷಿಸಿದ್ದಾರೆ ಎಂದು ವರದಿಯಾಗಿದೆ.

Trump Personal Security Has Tested Positive For Coronavirus

ದೇಶದಲ್ಲಿ ಸೋಂಕು ಹೆಚ್ಚು ಹರಡುತ್ತಿರುವುದರಿಂದ ಟ್ರಂಪ್ ಹಾಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರೊಂದಿಗೆ ನಿಯಮಿತವಾಗಿ ಚರ್ಚೆ ನಡೆಸುವ ಹಿರಿಯ ಸಿಬ್ಬಂದಿಗಳನ್ನು ಇನ್ನೂ ವಾರಕ್ಕೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ ಎಂದು ಸಿಎನ್‌ಎನ್‌ ಪ್ರಕಟಿಸಿದೆ.

ಅಂದ್ಹಾಗೆ, ವೈಟ್‌ಹೌಸ್‌ನಲ್ಲಿ ಕ್ಷಿಪ್ರ ಕೊರೊನಾ ಪರೀಕ್ಷೆ ನಡೆಸಲಾಗುತ್ತೆ. ಈ ವಿಧಾನದಲ್ಲಿ ಸುಮಾರು 15 ನಿಮಿಷದಲ್ಲಿ ಫಲಿತಾಂಶ ಹೊರಬೀಳುತ್ತೆ ಎಂದು ಹೇಳಲಾಗುತ್ತೆ. ಇನ್ನು ವೈಟ್‌ಹೌಸ್‌ ಕಚೇರಿಯಲ್ಲಿ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬ ಆರೋಪವೂ ಇದೆ.

English summary
US President Donald Trump's personal security has tested positive for deadly coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X