ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಟ್ಟರೂ ಬುದ್ಧಿ ಬರಲಿಲ್ವಾ..? ಟ್ರಂಪ್ ಮಾಡಿದ ಎಡವಟ್ಟೇನು..?

|
Google Oneindia Kannada News

ಅಮೆರಿಕದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಸ್ವತಃ ಅಮೆರಿಕ ಅಧ್ಯಕ್ಷರಿಗೂ ಡೆಡ್ಲಿ ವೈರಸ್ ಅಟ್ಯಾಕ್ ಆಗಿತ್ತು. ಆದರೆ ಇದೆಲ್ಲವನ್ನೂ ಟ್ರಂಪ್ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಕೆಲದಿನಗಳ ಹಿಂದಷ್ಟೇ ಕೊರೊನಾ ಸೋಂಕಿಗೆ ತುತ್ತಾಗಿ ತಮ್ಮ ಅಧಿಕೃತ ನಿವಾಸ ವೈಟ್‌ಹೌಸ್ (White house)ಗೆ ಮರಳಿರುವ ಟ್ರಂಪ್ ಇದೀಗ ಸಾರ್ವಜನಿಕ ಸಭೆಗೆ ಆಹ್ವಾನ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ವೈಟ್‌ಹೌಸ್ ಬಾಲ್ಕನಿಯಿಂದ ಬೆಂಬಲಿಗರನ್ನು ಉದ್ದೇಶಿಸಿ ಟ್ರಂಪ್ ಮಾತನಾಡಿದ್ದಾರೆ. ಆದರೆ ಪರಿಸ್ಥಿತಿ ಅಂದುಕೊಂಡಷ್ಟು ಸುಲಭವಾಗಿಲ್ಲ. ಅಮೆರಿಕದಲ್ಲಿ ಈಗಾಗಲೇ ಬರೋಬ್ಬರಿ 79 ಲಕ್ಷ ಕೊರೊನಾ ಕೇಸ್‌ಗಳು ಕನ್ಫರ್ಮ್ ಆಗಿ, 2 ಲಕ್ಷ 18 ಸಾವಿರ ಜನರು ಕೊರೊನಾಗೆ ಬಲಿಯಾಗಿದ್ದಾರೆ. ಆದರೆ ಸ್ವತಃ ಕೊರೊನಾ ಸೋಂಕಿತರಾಗಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಚೇತರಿಸಿಕೊಳ್ಳುವ ಮೊದಲೇ ಸಾರ್ವಜನಿಕ ಸಭೆ ಕರೆದಿದ್ದೇಕೆ ಎಂದು ವಿಪಕ್ಷ ನಾಯಕರು ರೊಚ್ಚಿಗೆದ್ದಿದ್ದಾರೆ. ಇದು ಅಧ್ಯಕ್ಷೀಯ ಚುನಾವಣೆ ಗೆಲುವಿಗಾಗಿ ಟ್ರಂಪ್ ಮಾಡುತ್ತಿರುವ ಸರ್ಕಸ್ ಎಂಬುದು ಮತ್ತೆ ಕೆಲವರ ಆರೋಪ. ಟ್ರಂಪ್ ಕರೆದಿರುವ ಸಭೆಯಲ್ಲಿ ಜನರು ಮತ್ತೆ ಗುಂಪುಗೂಡುವ ಸಾಧ್ಯತೆ ಇದ್ದು, ಮತ್ತಷ್ಟು ಜನರಿಗೆ ಈ ಡೆಡ್ಲಿ ವೈರಸ್ ಹರಡುವ ಸಾಧ್ಯತೆ ದಟ್ಟವಾಗಿದೆ.

ನಿನ್ನೆಯೂ 60 ಸಾವಿರ ಹೊಸ ಕೇಸ್

ನಿನ್ನೆಯೂ 60 ಸಾವಿರ ಹೊಸ ಕೇಸ್

ಅಮೆರಿಕದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಗುಂಪುಗೂಡುವುದು, ಮಾಸ್ಕ್ ತೊಡೆದಿರುವುದು ಅಮೆರಿಕದಲ್ಲಿ ಸೋಂಕು ವ್ಯಾಪಕವಾಗಿ ಹರಡಲು ಕಾರಣ ಎಂದು ವರದಿಗಳು ಹೇಳುತ್ತಿವೆ. ನಿನ್ನೆ ಕೂಡ ಅಮೆರಿಕದಲ್ಲಿ 60 ಸಾವಿರ ಹೊಸ ಕೇಸ್‌ಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ ಈಗಾಗಲೇ 79 ಲಕ್ಷದ ಗಡಿ ದಾಟಿದೆ. ಸಾವಿನ ಸಂಖ್ಯೆಯಂತೂ 2 ಲಕ್ಷ 18 ಸಾವಿರಕ್ಕೂ ಹೆಚ್ಚಾಗಿದೆ. ಶುಕ್ರವಾರ ಒಂದೇ ದಿನ ಮತ್ತೆ 910 ಮೃತಪಟ್ಟಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಟ್ರಂಪ್ ಹೀಗೆ ಸಾರ್ವಜನಿಕ ಸಭೆಗೆ ಆಹ್ವಾನಿಸಿರುವುದು ವಿಪಕ್ಷ ನಾಯಕರನ್ನು ಮಾತ್ರವಲ್ಲ, ಅಮೆರಿಕದ ಪ್ರಬುದ್ಧ ನಾಗರಿಕರನ್ನೂ ರೊಚ್ಚಿಗೇಳುವಂತೆ ಮಾಡಿದೆ.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಮಾಸ್ಕ್ ವಿರೋಧಿ ನಿಲುವು

ಮಾಸ್ಕ್ ವಿರೋಧಿ ನಿಲುವು

ಕೊರೊನಾ ವೈರಸ್ ಕುರಿತು ವೈದ್ಯರು, ವಿಜ್ಞಾನಿಗಳು ಏನೇ ಹೇಳಿದರೂ ಟ್ರಂಪ್ ಒಪ್ಪಲು ತಯಾರಿಲ್ಲ. ಇದಕ್ಕೆ ತಮ್ಮದೇ ವ್ಯಾಖ್ಯಾನಾ ನೀಡುವ ಟ್ರಂಪ್, ಕೊರೊನಾ ತೊಲಗಿಸಲು ಮಾಸ್ಕ್ ಹಾಕುವ ಅನಿವಾರ್ಯತೆ ಇಲ್ಲ ಎಂದು ವಾದಿಸುತ್ತಾ ಬಂದಿದ್ದಾರೆ. ರಿಪಬ್ಲಿಕನ್ ಪಕ್ಷದ ಟ್ರಂಪ್‌ ಮಾಸ್ಕ್ ವಿರೋಧಿಯಾಗಿದ್ದರೆ, ವಿರೋಧ ಪಕ್ಷ ಡೆಮಾಕ್ರಟಿಕ್ ನಾಯಕರು ಮಾಸ್ಕ್ ತೊಡಲೇಬೇಕು ಎನ್ನುತ್ತಿದ್ದಾರೆ. ಹೀಗೆ 2020ರ ಅಧ್ಯಕ್ಷೀಯ ಚುನಾವಣೆ 'ಮಾಸ್ಕ್ ತೊಡದವರು v/s ಮಾಸ್ಕ್ ತೊಡುವವರು' ಎಂಬಂತಾಗಿದೆ. ಕೆಲ ದಿನಗಳ ಹಿಂದೆ ಟ್ರಂಪ್ ಬಿಡೆನ್ ಅವರನ್ನ ಇದೇ ವಿಚಾರಕ್ಕೆ ಜರಿದಿದ್ದರು. ಬಿಡೆನ್ ಯಾವಾಗಲು ಮಾಸ್ಕ್ ತೊಟ್ಟು ಓಡಾಡುತ್ತಾರೆ, ಅವರಿಗೆ ಜನರ ಜೊತೆ ನೇರವಾಗಿ ಬೆರೆಯುವ ಇಚ್ಛೆ ಇಲ್ಲ ಎಂದು ಆಡಿಕೊಂಡಿದ್ದರು. ಆದ್ರೆ ಮಾಸ್ಕ್ ಹಾಕದೇ ಇದ್ದರೆ ಕೊರೊನಾ ಸುಲಭವಾಗಿ ಗಾಳಿ ಮೂಲಕ ಹರಡುವುದಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಲು ಟ್ರಂಪ್ ಸಿದ್ಧರಿಲ್ಲ.

ಮಾಸ್ಕ್ ಕಡ್ಡಾಯ ಮಾಡಲ್ಲ.. ಇದು ಆಗಲ್ಲ..!

ಮಾಸ್ಕ್ ಕಡ್ಡಾಯ ಮಾಡಲ್ಲ.. ಇದು ಆಗಲ್ಲ..!

ವಿಶ್ವದ ಬಹುಪಾಲು ದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹಲವಾರು ದೇಶಗಳಲ್ಲಿ ಮಾಸ್ಕ್ ಹಾಕದಿದ್ರೆ ದೊಡ್ಡ ಪ್ರಮಾಣದ ದಂಡ ಕೂಡ ಕಟ್ಟಬೇಕು. ಆದರೆ ಕೊರೊನಾ ಕೂಪದಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಿರುವ ಅಮೆರಿಕ ಈವರೆಗೂ ಮಾಸ್ಕ್ ಕಡ್ಡಾಯ ಮಾಡಿಲ್ಲ. ಇದರಿಂದಲೇ ಲಕ್ಷಾಂತರ ಜನರಿಗೆ ಈ ಡೆಡ್ಲಿ ವೈರಸ್ ಹರಡಿದ್ದು ಎಂಬುದು ಅಮೆರಿಕದ ಸಾಂಕ್ರಾಮಿಕ ತಜ್ಞರ ಎಚ್ಚರಿಕೆಯಾಗಿತ್ತು. ಇಷ್ಟೆಲ್ಲದರ ಮಧ್ಯೆ ಮಾಸ್ಕ್ ಕಡ್ಡಾಯ ಮಾಡಿ ಎಂಬ ಕೂಗು ಕೇಳಿಬಂದಾಗ ಟ್ರಂಪ್ ಬಿಲ್‌ಕುಲ್ ಒಪ್ಪಲಿಲ್ಲ, ನನ್ನ ಪ್ರಜೆಗಳಿಗೆ ಈ ಬಗ್ಗೆ ಆದೇಶ ಮಾಡಲಾರೆ, ಮಾಸ್ಕ್ ಕಡ್ಡಾಯವಾಗಿ ತೊಡಿ ಎಂದು ಒತ್ತಡ ಹಾಕಲ್ಲ ಎಂದಿದ್ದರು ಟ್ರಂಪ್.

ಬಾಲ್ಕನಿಯಲ್ಲಿ ನಿಂತು ಜನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ಬಾಲ್ಕನಿಯಲ್ಲಿ ನಿಂತು ಜನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್

ಟ್ರಂಪ್ ಚಿಕಿತ್ಸೆ ಬಗ್ಗೆ ವಿಪಕ್ಷಕ್ಕೆ ಡೌಟ್

ಟ್ರಂಪ್ ಚಿಕಿತ್ಸೆ ಬಗ್ಗೆ ವಿಪಕ್ಷಕ್ಕೆ ಡೌಟ್

ಟ್ರಂಪ್ ದಿಢೀರ್ ಎಂದು ಆಸ್ಪತ್ರೆ ಸೇರಿದರು, ಹಾಗೇ ಬೆರಳೆಣಿಕೆಯಷ್ಟು ದಿನಗಳಷ್ಟೇ ಚಿಕಿತ್ಸೆ ಪಡೆದು ವಾಪಸ್ ಬಂದಿದ್ದಾರೆ. ಆದರೆ ಟ್ರಂಪ್ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ್ರಾ ಎಂಬ ಕುರಿತು ಸ್ಪಷ್ಟನೆಯೇ ಇಲ್ಲ ಎಂದು ಡೆಮಾಕ್ರಟಿಕ್ ಪಕ್ಷದ ಲೀಡರ್‌ಗಳು ಆರೋಪಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಟ್ರಂಪ್ ಸಾರ್ವಜನಿಕವಾಗಿ ಮತ್ತೆ ಕಾಣಿಸುತ್ತಿರುವುದು ಅಮೆರಿಕದಲ್ಲಿ ಸಂಚಲನ ಮೂಡಿಸಿದೆ. ಇದು ಪ್ರಜೆಗಳಿಗೆ ತಪ್ಪು ಸಂದೇಶ ನೀಡಿ, ಸೋಂಕು ಮತ್ತಷ್ಟು ಹರಡುವಂತೆ ಮಾಡುತ್ತೆ ಎಂಬುದು ತಜ್ಞರ ವಾದವಾಗಿದೆ. ಅದೇನೆ ಇರಲಿ ವಿಜ್ಞಾನ ಹೇಳಿದ್ದನ್ನ ಪ್ರಶ್ನೆ ಮಾಡುವ ಮೊದಲು ನೂರು ಬಾರಿ ಯೋಚಿಸಬೇಕು. ಅಮೆರಿಕದಲ್ಲಿ ಕಿಲ್ಲರ್ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಟ್ರಂಪ್ ಹಠ ಸಾಧಿಸುವುದು ಅನಗತ್ಯ ಎಂಬುದು ಡೆಮಾಕ್ರಟಿಕ್ ಲೀಡರ್‌ಗಳ ಅಭಿಪ್ರಾಯವಾಗಿದೆ.

ನಿಮಗಿದು ಗೊತ್ತೇ..? ಈಗಾಗಲೇ 40 ಲಕ್ಷ ಅಮೆರಿಕನ್ನರು ವೋಟ್ ಹಾಕಿದ್ದಾರೆ..!ನಿಮಗಿದು ಗೊತ್ತೇ..? ಈಗಾಗಲೇ 40 ಲಕ್ಷ ಅಮೆರಿಕನ್ನರು ವೋಟ್ ಹಾಕಿದ್ದಾರೆ..!

English summary
US President Donald Trump had meeting outside the White House. This is the first time Trump has been making a public appearance since he returned from treatment for a Corona infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X