ಅಮೆರಿಕದಲ್ಲಿ ಶಾಲೆಗಳನ್ನು ತೆರೆಯಲು ಒಪ್ಪಿಗೆ,ಕೋವಿಡ್ ನಿಯಮ ಪಾಲನೆ ಕಡ್ಡಾಯ
ವಾಷಿಂಗ್ಟನ್,ಫೆಬ್ರವರಿ 13: ಅಮೆರಿಕದಲ್ಲಿ ಶಾಲೆಗಳನ್ನು ಪುನರಾರಂಭಿಸಲು ಒಪ್ಪಿಗೆ ನೀಡಲಾಗಿದ್ದು, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಹ್ಯಾಂಡ್‌ವಾಶ್, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕೊರೊನಾ ಲಸಿಕೆ ಲಭ್ಯವಾದಲ್ಲಿ ಮೊದಲು ಶಿಕ್ಷಕರಿಗೆ ಲಸಿಕೆ ನೀಡುವುದಾಗಿ ಹೇಳಿದೆ.
ಕೊವಿಡ್ 19: ಫೆ.12ರಂದು ಯಾವ ದೇಶದಲ್ಲಿ ಎಷ್ಟು ಮಂದಿ ಗುಣಮುಖ?
ಸಣ್ಣ ಮಕ್ಕಳು ದೊಡ್ಡವರಿಗಿಂತ ಹೆಚ್ಚು ಅಪಾಯದಲ್ಲಿರುವ ಕಾರಣ ಮಧ್ಯಮ ಹಾಗೂ ಪ್ರೌಢ ಶಾಲೆಗಳು ಹೈಬ್ರಿಡ್ ಕಲಿಕೆಗೆ ಬದಲಾಗಬೇಕು ಎಂದು ಶಿಫಾರಸು ಮಾಡಲಾಗಿದೆ.
ಒಂದು ಸಾವಿರ ಮಂದಿ ಇರುವ ಪ್ರದೇಶದಲ್ಲಿ ಕನಿಷ್ಠ 100 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.
ಕರ್ನಾಟಕ ಸೇರಿದಂತೆ ಭಾರತದ ಕೆಲವು ರಾಜ್ಯಗಳಲ್ಲಿ ಶಾಲೆಗಳಿಗೆ ತೆರಳಿದ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ.ಹಾಗಾಗಿ ಅಮೆರಿಕದಲ್ಲಿ ತೀವ್ರ ನಿಗಾದೊಂದಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳಿಂದ ಸಿಬ್ಬಂದಿಗೆ, ಸಿಬ್ಬಂದಿಯಿಂದ ವಿದ್ಯಾರ್ಥಿಗಳಿಗೆ,ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೆ ಸೋಂಕು ಹರಡುವುದು ಸಾಮಾನ್ಯವಾಗಿದೆ.
ಕೊರೊನಾ ಸೋಂಕು ಶಾಲಾ ಹಂತದಲ್ಲಿರುವ ಮಕ್ಕಳಿಗೆ ತಗುಲಿರುವ ನಿದರ್ಶನಗಳು ಕಡಿಮೆ ಇವೆ, ಆದರೆ ಅವರ ವಯಸ್ಸಿನ ಹಿತದೃಷ್ಟಿಯಿಂದ ಆಲೋಚಿಸಬೇಕಿದೆ. ಒಂದೊಮ್ಮೆ ಸೋಂಕು ತಗುಲಿದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೇಗಿದೆ ಎಂಬುದನ್ನು ಕೂಡ ನೋಡಬೇಕಿದೆ.