ಟ್ರಂಪ್ ಮೊದಲ ಪತ್ನಿ ಇವಾನಾ ಸಾವಿನ ಬಗ್ಗೆ ತನಿಖೆ ಚುರುಕು

ನ್ಯೂಯಾರ್ಕ್, ಜು.16: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೊದಲ ಪತ್ನಿ 73 ವರ್ಷದ ಇವಾನಾ ಟ್ರಂಪ್ ಸಾವಿನ ಬಗ್ಗೆ ನ್ಯೂಯಾರ್ಕ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇವಾನಾ ಟ್ರಂಪ್‌ ಮ್ಯಾನ್‌ಹ್ಯಾಟನ್‌ನಲ್ಲಿರುವ ಮನೆಯಲ್ಲಿ ಮೆಟ್ಟಿಲುಗಳ ಮೇಲಿನಿಂದ ಬಿದ್ದ ಕಾರಣ ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್‌ನ ವೈದ್ಯಕೀಯ ಮೂಲಗಳು ತಿಳಿಸಿವೆ.

ಅವರು ಘಟನಾ ಸ್ಥಳದಲ್ಲಿ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದ್ದು, ಯಾವುದೇ ಅಪರಾಧವು ಕಂಡುಬರುತ್ತಿಲ್ಲ ಎಂದು ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.
ಇವಾನಾ ಬಗ್ಗೆ ಬಣ್ಣಿಸಿದ್ದ ಟ್ರಂಪ್, ಸುಂದರ ಮತ್ತು ಅದ್ಭುತ ಮಹಿಳೆ, ಅವರು ಶ್ರೇಷ್ಠ ಮತ್ತು ಸ್ಫೂರ್ತಿದಾಯಕ ಜೀವನವನ್ನು ನಡೆಸಿದ್ದಾರೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು. ಇನ್ನೂ ಮೂವರು ಮಕ್ಕಳಾದ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್ ಟ್ರಂಪ್ ಕೂಡ ಬಣ್ಣಿಸುತ್ತಾ ತಾಯಿ ಇವಾನಾಗೆ ವಿದಾಯ ಹೇಳಿದ್ದರು.

ಹಿಂದಿನ ಝೆಕೊಸ್ಲೊವಾಕಿಯಾದಲ್ಲಿ ಕಮ್ಯುನಿಸ್ಟ್ ಆಳ್ವಿಕೆಯಲ್ಲಿ ಬೆಳೆದ ಇವಾನಾ ಟ್ರಂಪ್, 1977ರಲ್ಲಿ ರಿಯಲ್‌ ಎಸ್ಟೇಟ್ ಡೆವಲಪರ್ ಆಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾದರು. ಇವರಿಗೆ ಮೂವರು ಮಕ್ಕಳಿದ್ದು, ಮೊದಲ ಮಗು ಡೊನಾಲ್ಡ್ ಜೂನಿಯರ್ ಅದೇ ವರ್ಷದಲ್ಲಿ ಜನಿಸಿದರು. ಇವಾಂಕಾ 1981ರಲ್ಲಿ ಜನಿಸಿದ್ದರೆ, ಎರಿಕ್ ಎಂಬ ಕೊನೆಯ ಮಗ 1984ರಲ್ಲಿ ಜನಿಸಿದ್ದ. 80ರ ದಶಕದಲ್ಲಿ ಟ್ರಂಪ್‌ ನ್ಯೂಯಾರ್ಕ್‌ನಲ್ಲಿ ವ್ಯವಹಾರದಲ್ಲಿ ಅತ್ಯುನ್ನತ ಮಟ್ಟದಲ್ಲಿ ಹೆಸರು ಮಾಡಿದ್ದರು. ಡೊನಾಲ್ಡ್ ಟ್ರಂಪ್ ಅವರ ಆಸ್ತಿ ವ್ಯವಹಾರವು ಅಭಿವೃದ್ಧಿಯಾಗುತ್ತಾ ಹೋಯಿತು. ಟ್ರಂಪ್‌ ವ್ಯವಹಾರದಲ್ಲಿ ಪ್ರಸಿದ್ಧತೆ ಹೊಂದುತ್ತಿದ್ದಂತೆ, ಇವಾನಾ ಟ್ರಂಪ್ ಕೂಡ ವ್ಯವಹಾರದಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿಕೊಂಡಿದ್ದರು.

The police have accelerated the investigation into the death of Ivana Trump

ಅದೇ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್, ನಟಿ ಮಾರ್ಲಾ ಮ್ಯಾಪಲ್ಸ್ ಅವರ ನಡುವೆ ಉತ್ತಮ ಸಂಬಂಧವು ಬೆಳೆದಿತ್ತು ಎಂದು ವದಂತಿಗಳು ಹಬ್ಬಿದ್ದವು. ಇದಾದ ಬಳಿಕ 90ರ ದಶಕದ ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಇವಾನಾ ಟ್ರಂಪ್ ವಿಚ್ಛೇದನ ಪಡೆದರು. 1993ರಲ್ಲಿ ಮಾರ್ಲಾ ಮ್ಯಾಪಲ್ಸ್ ಅವರನ್ನು ಟ್ರಂಪ್‌ ವಿವಾಹವಾಗಿದ್ದರು ಎನ್ನುವ ಮಾಹಿತಿಯೊಂದು ಬಹಿರಂಗವಾಗಿದೆ. ಆಗಂತ ಇವಾನಾ ಟ್ರಂಪ್‌ ಸುಮ್ಮನೆ ಕುಳಿತುಕೊಳ್ಳಲಿಲ್ಲ ಬದಲಾಗಿ ತನ್ನದೇ ಆದ ಸ್ವಂತ ವ್ಯವಹಾರಗಳಲ್ಲಿ ಯಶಸ್ವಿಯಾಗುತ್ತಾ ಹೋದರು. ಬಟ್ಟೆ, ಆಭರಣಗಳು ಮತ್ತು ಸೌಂದರ್ಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಹಲವಾರು ಪುಸ್ತಕಗಳನ್ನು ಬರೆದರು. ಇವಾನಾ ಅವರು ನಾಲ್ಕು ಬಾರಿ ವಿವಾಹವಾಗಿದ್ದರು.

The police have accelerated the investigation into the death of Ivana Trump

ಮೊದಲಿಗೆ ಡೊನಾಲ್ಡ್ ಟ್ರಂಪ್ ಅವರ ಜೊತೆ, ನಂತರ ಎರಡು ಬಾರಿ ಮದುವೆಯಾಗಿದ್ದರು ಎಂದು ಅಲ್ಲಿನ ಮೂಲಗಳಿಂದ ತಿಳಿದುಬಂದಿದೆ. ಇನ್ನೂ ಇವಾನಾ ವ್ಯವಹಾರದ ಬಗ್ಗೆ ಯುಎಸ್ ಅಧಿಕಾರಿಯೊಬ್ಬರು ಮಾಹಿತಿ ಕಲೆಹಾಕುತ್ತಿದ್ದು, ಅವರ ಕುಟುಂಬದ ವ್ಯವಹಾರದಲ್ಲಿ ವಂಚನೆ ಆರೋಪ ಕುರಿತು ನ್ಯೂಯಾರ್ಕ್‌ನಲ್ಲಿ ತನಿಖೆಗೆ ಮುಂದಾಗಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಮೊದಲ ಪತ್ನಿ ಇವಾನಾ ನಿಧನದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರು ಕೂಡ ತನಿಖೆ ಚುರುಕುಗೊಳಿಸಿ ಮಾಹಿತಿ ಕಲೆಹಾಕಲು ಪ್ರಾರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+