ಟಿಸಿಎಸ್ ವಿರುದ್ಧ ಅಮೆರಿಕದಲ್ಲಿ ಜನಾಂಗೀಯ ತಾರತಮ್ಯದ ದೂರು
ಕ್ಯಾಲಿಫೋರ್ನಿಯಾ, ನವೆಂಬರ್ 5: ಅಮೆರಿಕನ ಹೊರ ಕಚೇರಿಗಳಲ್ಲಿನ ಎಂಜಿನಿಯರ್‌ಗಳನ್ನು ಕೆಲಸದಿಂದ ತೆಗೆದುಹಾಕಿರುವ ಭಾರತದ ಪ್ರಮುಖ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (ಟಿಸಿಎಸ್) ಈಗ ಅಮೆರಿಕದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಾಗಿದೆ.
ಕ್ಯಾಲಿಫೋರ್ನಿಯಾದಲ್ಲಿ ಜನಾಂಗೀಯ ತಾರತಮ್ಯದ ಆರೋಪದಡಿ ಟಿಸಿಎಸ್ ಕಾನೂನು ಪ್ರಕ್ರಿಯೆಗೆ ಒಳಪಡಬೇಕಾಗಿದೆ.
ಅಮೆರಿಕದ ಟಿಸಿಎಸ್ ಕಚೇರಿಗಳಲ್ಲಿರುವ ತಮಗೆ ದಕ್ಷಿಣ ಏಷ್ಯಾದ ಪ್ರಜೆಗಳಲ್ಲದ ಕಾರಣಕ್ಕೆ ಸೂಕ್ತ ಕೆಲಸ ನೀಡದೆ ವಜಾಗೊಳಿಸಲಾಗಿದೆ ಎಂದು ಅಮೆರಿಕದ ಉದ್ಯೋಗಿಗಳು ಆರೋಪಿಸಿದ್ದಾರೆ.

ಏಷ್ಯಾದ ಅತಿದೊಡ್ಡ ಹೊರಗುತ್ತಿಗೆ ಕಂಪೆನಿಯಾಗಿರುವ ಟಿಸಿಎಸ್, ಐಟಿ ಕಂಪೆನಿಗಳಾದ ಇನ್ಫೋಸಿಸ್, ವಿಪ್ರೋ ಮುಂತಾದವು ಡೊನಾಲ್ಡ್ ಟ್ರಂಪ್ ಸರ್ಕಾರದ ಉದ್ಯೋಗ ವೀಸಾದ ಕಠಿಣ ನಿಯಮಗಳಿಂದಾಗಿ ಹೊರದೇಶಗಳ ಉದ್ಯೋಗಿಗಳನ್ನು ಅಮೆರಿಕದಲ್ಲಿರುವ ತಮ್ಮ ಕಂಪೆನಿ ಶಾಖೆಗಳಿಗೆ ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ತಮ್ಮ ಮೇಲೆ ಜನಾಂಗೀಯ ತಾರತಮ್ಯ ಎಸಗಲಾಗಿದೆ ಎಂಬ ಆರೋಪವನ್ನು ಟಿಸಿಎಸ್ ನಿರಾಕರಿಸಿದೆ. ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವ ಉದ್ಯೋಗಿಯು ಕೆಲಸದಲ್ಲಿ ದಕ್ಷತೆ ಪ್ರದರ್ಶಿಸದ ಕಾರಣಕ್ಕೆ ಕೆಲಸದಿಂದ ಕಿತ್ತುಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.












Click it and Unblock the Notifications