ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಷಿಂಗ್ಟನ್‌ಗೆ ಬಂದಿಳಿದ ಪ್ರಧಾನಿ ಮೋದಿಗೆ ಅನಿವಾಸಿ ಭಾರತೀಯರಿಂದ ಭರ್ಜರಿ ಸ್ವಾಗತ

|
Google Oneindia Kannada News

ವಾಷಿಂಗ್ಟನ್‌, ಸೆಪ್ಟೆಂಬರ್‌ 23: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸ ಆರಂಭಿಸಿದ್ದು, ಕಳೆದ ರಾತ್ರಿ ವಾಷಿಂಗ್ಟನ್‌ ಡಿಸಿಗೆ ಬಂದಿಳಿದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿನ ಜಾಯಿಂಟ್‌ ಬೇಸ್‌ ಆಂಡ್ಯ್ರೂಸ್‌ನಲ್ಲಿ ಅಮೆರಿಕ ರಾಜ್ಯ ಇಲಾಖೆಯ ಅಧಿಕಾರಿಗಳು ಸ್ವಾಗತ ಮಾಡಿದ್ದಾರೆ.

ಹಾಗೆಯೇ ಮಳೆಯನ್ನು ಲೆಕ್ಕಿಸದೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರು ಪ್ರಧಾನಿ ಮೋದಿಯನ್ನು ಬರಮಾಡಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಹೊರಗೆ ವಾಹನದಿಂದ ಕೆಳಕ್ಕೆ ಇಳಿದ ಪ್ರಧಾನಿ ಮೋದಿ, ತನ್ನನ್ನು ಕಾತುರದಿಂದ ಕಾಯುತ್ತಿದ್ದ ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸಿದ್ದಾರೆ.

ಪ್ರಧಾನಿ ಯುಎಸ್‌ ಪ್ರವಾಸ: 'ಸಂಬಂಧ ಗಟ್ಟಿಗೊಳಿಸಲು ಉತ್ತಮ ಅವಕಾಶ' ಎಂದ ಮೋದಿಪ್ರಧಾನಿ ಯುಎಸ್‌ ಪ್ರವಾಸ: 'ಸಂಬಂಧ ಗಟ್ಟಿಗೊಳಿಸಲು ಉತ್ತಮ ಅವಕಾಶ' ಎಂದ ಮೋದಿ

ಇನ್ನು ತಾನು ವಾಷಿಂಗ್ಟನ್‌ಗೆ ತಲುಪಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. "ವಾಷಿಂಗ್ಟನ್‌ ಡಿಸಿಯಲ್ಲಿರುವ ಭಾರತೀಯ ಸಮುದಾಯದ ಸ್ವಾಗತಕ್ಕೆ ಕೃತಜ್ಞತೆಗಳು. ನಮ್ಮ ಸಮುದಾಯವು ನಮ್ಮ ಬಲವಾಗಿದೆ. ಭಾರತೀಯ ಸಮುದಾಯವು ವಿಶ್ವದಾದ್ಯಂತ ಹೀಗೆ ಸಾಧನೆ ಮಾಡುತ್ತಿರುವುದು ಶ್ಲಾಘನೀಯ," ಎಂದು ತಿಳಿಸಿದ್ದಾರೆ.

PM Modi in US: Prime Minister Modi arrives in Washington, to meet CEOs of five companies

ಕೊರೊನಾ ವೈರಸ್‌ ಸೋಂಕು ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಷ್ಯಾದ ಹೊರಗೆ ಪ್ರಯಾಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಆಗಮನದಿಂದ ಸಂತೋಷ ವ್ಯಕ್ತಪಡಿಸಿದ ನೂರಾರು ಭಾರತೀಯರು, ಪ್ರಧಾನಿ ಮೋದಿಯ ಕೈಕುಳುಕಿದರು. ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಭಾರತದ ಅಮೆರಿಕ ರಾಯಭಾರಿ ತರಂಜಿತ್ ಸಿಂಗ್ ಸಂಧು, ಬ್ರಿಗೇಡಿಯರ್ ಅನೂಪ್ ಸಿಂಘಾಲ್, ಏರ್ ಕಮಾಂಡರ್ ಅಂಜನ್ ಭದ್ರ ಮತ್ತು ನೌಕಾ ಅಟ್ಯಾಚ್ ಕಮೋಡೋರ್ ನಿರ್ಭಯಾ ಬಪ್ನಾ ಸೇರಿದಂತೆ ಹಲವಾರು ರಕ್ಷಣಾ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನ ಮಂತ್ರಿ ಇತ್ತೀಚೆಗೆ ಪರಿಚಯಿಸಿದ ಕಸ್ಟಮ್‌ ನಿರ್ಮಿತ ಬೋಯಿಂಗ್‌ 777 ವಿಮಾನದಲ್ಲಿ ಈ ಬಾರಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು. ಈ ಬೋಯಿಂಗ್‌ ವಿಮಾನ ದೀರ್ಘಾವಧಿಯ ಸಾಮರ್ಥವನ್ನು ಹೊಂದಿದ್ದು, ಮಾರ್ಗ ಮಧ್ಯೆ ಇಂಧನ ಮರು ಭರ್ತಿಯ ಅಗತ್ಯ ಇರುವುದಿಲ್ಲ.

ವೈರಲ್ ಫೋಟೋ; ವಿಮಾನದಲ್ಲೂ ಮೋದಿ ಕೆಲಸದಲ್ಲಿ ಬ್ಯುಸಿ!ವೈರಲ್ ಫೋಟೋ; ವಿಮಾನದಲ್ಲೂ ಮೋದಿ ಕೆಲಸದಲ್ಲಿ ಬ್ಯುಸಿ!

ಪ್ರಧಾನಿ ಮೋದಿ ಭಾರತದ ಮೇಲೆ ಹೂಡಿಕೆ ಮಾಡಿರುವ ಕೆಲವು ಕಂಪನಿಗಳ ಸಿಇಒಗಳನ್ನು ಭೇಟಿಯಾಗಲಿದ್ದಾರೆ. ಹಾಗೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜೊತೆ ನಾಳೆ ಶ್ವೇತಭವನದಲ್ಲಿ ಭೇಟಿಯಾಗಲಿದ್ದಾರೆ. ಜನವರಿ 20ರಂದು ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್‌ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಮೊದಲ ಭೇಟಿ ಇದಾಗಿದೆ.

ಸೆಪ್ಟೆಂಬರ್‌ 25 ರಂದು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್ ಜಿಎ) 76ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ ಸಾಮಾನ್ಯ ಚರ್ಚೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹವಾಮಾನ ಬದಲಾವಣೆ, ಭಯೋತ್ಪಾದನೆ ಹಾಗೂ ಕೊರೊನಾ ವೈರಸ್‌ ಸಾಂಕ್ರಾಮಿಕ ಸೇರಿದಂತೆ ಜಾಗತಿಕ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ.

ತಾನು ಅಮೆರಿಕಕ್ಕೆ ತೆರಳುವ ಮುನ್ನ ಈ ಬಗ್ಗೆ ಟ್ವೀಟ್‌ ಮಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ನನ್ನ ಈ ಅಮೆರಿಕ ಪ್ರವಾಸವು ಯುಎಸ್‌ಎ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಲು ಒಂದು ಉತ್ತಮ ಅವಕಾಶವಾಗಲಿದೆ. ಹಾಗೆಯೇ ಜಪಾನ್‌ ಹಾಗೂ ಆಸ್ಟ್ರೇಲಿಯಾದೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಲು ಕೂಡಾ ಸದಾವಕಾಶವಾಗಲಿದೆ. ಪ್ರಮುಖ ಜಾಗತಿಕ ವಿಚಾರದಲ್ಲಿ ನಮ್ಮ ಸಹಯೋಗ ಮುಂದುವರಿಸಲು ಸಹಕಾರಿಯಾಗಲಿದೆ," ಎಂದು ತಿಳಿಸಿದ್ದಾರೆ.

2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರವಹಿಸಿಕೊಂಡ ಬಳಿಕ 7ನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. 2015ರಲ್ಲಿ ಭಾರತ-ಅಮೆರಿಕ ಸಮಯದಾಯದ ಕಾರ್ಯಕ್ರಮ, ಬಳಿಕ ಸಿಲಿಕಾನ್ ವ್ಯಾಲಿ ಭೇಟಿ ಕೈಗೊಂಡಿದ್ದರು. 2019ರಲ್ಲಿ ಹೌಡಿ-ಮೋಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

(ಒನ್‌ ಇಂಡಿಯಾ ಸುದ್ದಿ)

English summary
Prime Minister Modi arrives in Washington, to meet CEOs of five companies. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X